MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಅವಕಾಡೊ ಬೀಜ ಎಸೆಯಬೇಡಿ, ಹೀಗೆ ಬಳಸಿ ನೋಡಿ

ಅವಕಾಡೊ ಬೀಜ ಎಸೆಯಬೇಡಿ, ಹೀಗೆ ಬಳಸಿ ನೋಡಿ

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ಅವುಗಳನ್ನು ನಿಯಮಿತವಾಗಿ  ಆಹಾರದಲ್ಲಿ ಸೇರಿಸಬೇಕು. ಆವಕಾಡೊ ಹಣ್ಣುಗಳಲ್ಲಿ ಅನೇಕ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಕೆಲವರು ನಿಯಮಿತವಾಗಿ ಆವಕಾಡೊಗಳನ್ನು ತಮ್ಮ ಆಹಾರದಲ್ಲಿ ಸೇರಿಸುತ್ತಾರೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಬಿ6, ಥಿಯಾಮಿನ್, ವಿಟಮಿನ್ ಇ, ತಾಮ್ರ, ಮ್ಯಾಂಗನೀಸ್, ಫೋಲೇಟ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳಿವೆ.  

2 Min read
Author : Suvarna News | Asianet News
Published : Aug 12 2021, 04:39 PM IST
Share this Photo Gallery
  • FB
  • TW
  • Linkdin
  • Whatsapp
111

ಅವಕಾಡೊ ಬೀಜಗಳಲ್ಲಿ ಒಮೆಗಾ-6 ಮತ್ತು ಒಮೆಗಾ-9 ಕೊಬ್ಬಿನಾಮ್ಲಗಳಂತಹ ಅಂಶಗಳು ಸಮೃದ್ಧವಾಗಿವೆ. ಇದು ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಅದರ ಬೀಜಗಳನ್ನು ಎಸೆಯುವ ಬದಲು ಅನೇಕ ರೀತಿಯಲ್ಲಿ ಬಳಸಬಹುದು. ಆದ್ದರಿಂದ ಆವಕಾಡೊ ಬೀಜಗಳ ಕೆಲವು ಪ್ರಯೋಜನಗಳು ಮತ್ತು ಅದರ ಬಳಕೆಯ ಬಗ್ಗೆ ಇಂದು ನೋಡೋಣ. 

211

ಆವಕಾಡೊ ಬೀಜಗಳ ಬಳಕೆ: ಆವಕಾಡೊ ಹಣ್ಣಿನ ಬೀಜಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು, ಆದರೆ ಬೀಜಗಳನ್ನು ಪುಡಿ ಮಾಡುವ ಮೂಲಕ ಬಳಸುವುದು ಉತ್ತಮ. ಅದರ ಪುಡಿಯನ್ನು ಯಾವುದೇ ವಸ್ತುವಿನಲ್ಲಿ ಸುಲಭವಾಗಿ ಬಳಸಬಹುದು.  ಸಲಾಡ್ ಗಳು ಮತ್ತು ಸ್ಮೂಥಿಗಳಲ್ಲಿ ಅದರ ಬೀಜಗಳನ್ನು ಪುಡಿ ಮಾಡಿ ಉಪಯೋಗ ಮಾಡಬಹುದು.

311

ಹೆಚ್ಚಿನವರು ಇದನ್ನು ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ. ಇದರ ಜೊತೆಗೆ ಹೇರ್ ಮಾಸ್ಕ್, ಫೇಸ್ ಪ್ಯಾಕ್ ತಯಾರಿಸುವಾಗ ಇದರ ಬೀಜಗಳನ್ನೂ ಬಳಸಬಹುದು. ನಾಟಿಮಾಡಲು ಇಷ್ಟಪಡುವವರಾಗಿದ್ದರೆ, ಅದರ ಬೀಜಗಳ ಸಹಾಯದಿಂದ  ಸಹ ನೆಡಬಹುದು. 

411

ಫೇಸ್ ಪ್ಯಾಕ್ ರಚಿಸಿ : ಯಾವುದೇ ರೀತಿಯ ಫೇಸ್ ಪ್ಯಾಕ್ ಮಾಡುವಾಗ  ಇದರ ಬೀಜಗಳನ್ನು ಬಳಸಬಹುದು ಏಕೆಂದರೆ ಅವು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರ ಬೀಜಗಳನ್ನು ಬಳಸುವುದರಿಂದ  ಚರ್ಮವು ಹೈಡ್ರೇಟ್ ಆಗಿರಲು ಮಾತ್ರವಲ್ಲದೆ ಮುಖದ ಶುದ್ಧೀಕರಣವನ್ನು ಹೆಚ್ಚಿಸುತ್ತದೆ. ಅಲ್ಲದೆ, ಇದು ಚರ್ಮವನ್ನು ತಂಪಾಗಿರಿಸುತ್ತದೆ ಮತ್ತು ಸುಕ್ಕುಗಳನ್ನು ದೂರವಿಡಲು ಸಹಾಯ ಮಾಡುತ್ತದೆ. 

511

ಸಸ್ಯ: ಬೀಜಗಳನ್ನು ಎಸೆಯುವ ಬದಲು ಸಸಿಯನ್ನು ನೆಡಬಹುದು. ನೆಡಲು, ಬೀಜದ ಮೇಲಿನ ಭಾಗವನ್ನು ಚೆನ್ನಾಗಿ ಗೀಚಬೇಕು, ಇದರಿಂದ ಬೀಜದ ಜೀವಕೋಶಗಳು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ನಂತರ, ಅದರ ಬೀಜಗಳನ್ನು ಮಡಕೆಗೆ ಹಾಕಿ , ಮೊದಲು ಮಣ್ಣು ಮಿಶ್ರಣ ಮಾಡಿ ಮತ್ತು ಅದಕ್ಕೆ ಬೀಜಗಳನ್ನು ಸೇರಿಸಿ. ಬೀಜಗಳನ್ನು ಒತ್ತಿದ ನಂತರ, ಈಗ ನೀರನ್ನು ಸೇರಿಸಿ .  ಸರಿಯಾದ ಪ್ರಮಾಣದ ನೀರನ್ನು ಮಡಕೆಯಲ್ಲಿ  ಹಾಕಿರಿ . 

611

ಚಹಾ ತಯಾರಿಸುವಾಗ  ಬಳಸಿ  : ಚಹಾ ತಯಾರಿಸುವಾಗ ಇದರ ಬೀಜಗಳನ್ನು ಸಹ ಬಳಸಬಹುದು, ಏಕೆಂದರೆ ಇದರ ಬೀಜಗಳು  ದೇಹವನ್ನು ಅನೇಕ ರೋಗಗಳು ಮತ್ತು ವಿವಿಧ ಕೆಟ್ಟ ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ.

711

ಪ್ರೋಟೀನ್ ಗಳು, ವಿಟಮಿನ್ ಬಿ6, ಥಿಯಾಮಿನ್, ವಿಟಮಿನ್ ಇ ನಂತಹ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಉಪಯುಕ್ತವಾಗಿವೆ. ಇದಲ್ಲದೆ, ಈ ಬೀಜಗಳು ಜ್ವರದಿಂದ ದೂರವಿರಿಸಿ ಮತ್ತು ಇತರ ಯಾವುದೇ ಸೋಂಕು ಸಂಭವಿಸದಂತೆ ತಡೆಯುತ್ತದೆ.

811

ಸಲಾಡ್ ಅಥವಾ ಆಹಾರಕ್ಕೆ ಸೇರಿಸಿ : ಅವಕಾಡೊ ಬೀಜಗಳಲ್ಲಿ ಐಸೋಟಿನ್ ಮತ್ತು ಸಾರ್ಬಿಟಾಲ್, ಮ್ಯಾಂಗನೀಸ್, ಫೋಲೇಟ್ ಇತ್ಯಾದಿಗಳಿದ್ದು ಮಲಬದ್ಧತೆಯನ್ನು ನಿವಾರಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ ಇದನ್ನು ಸೇವಿಸುವುದರಿಂದಲೂ ಕರುಳುಗಳು ಆರೋಗ್ಯವಾಗಿರಿಸುತ್ತದೆ. 

911

ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತರಾಗಲು ಬಯಸಿದರೆ, ಇದನ್ನು ಆಹಾರದಲ್ಲಿ ಸಲಾಡ್ ಗಳು ಅಥವಾ ಆಹಾರವನ್ನು ಮೇಲ್ಭಾಗಕ್ಕೆ ಸೇರಿಸಲು ಬಳಸಬಹುದು.

1011

ಮೂಳೆಗಳನ್ನು ಬಲಪಡಿಸಿ : ಅವಕಾಡೊ ಮತ್ತು ಅದರ ಬೀಜಗಳನ್ನು ಸೇವಿಸುವುದರಿಂದ ಮೂಳೆಗಳ ಆರೋಗ್ಯವೂ ಸುಧಾರಿಸುತ್ತದೆ ಏಕೆಂದರೆ ಇದರಲ್ಲಿ ಫೋಲೇಟ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಇರುತ್ತದೆ, ಇದು ಮೂಳೆಗಳನ್ನು ಬಲಪಡಿಸುವಲ್ಲಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

1111

ಇದಲ್ಲದೆ, ಹಣ್ಣು (ಬೀಜಗಳು) ಪ್ರೋಟೀನ್, ವಿಟಮಿನ್ ಬಿ6, ಥಿಯಾಮಿನ್, ವಿಟಮಿನ್ ಇ ಅನ್ನು ಸಹ ಸಮೃದ್ಧವಾಗಿದೆ, ಇದು ಮೂಳೆಗೆ ಯಾವುದೇ ಹಾನಿಯಾಗದಂತೆ ತಡೆಯುತ್ತದೆ. ಆದ್ದರಿಂದ ಇದನ್ನು  ಆಹಾರದಲ್ಲಿ ಸೇರಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image2
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
Recommended image3
ಪ್ರೆಗ್ನೆಂಟ್ ಆಗಲು ವಾರಕ್ಕೆ ಎಷ್ಟು ಬಾರಿ ಲೈಂಗಿಕ ಕ್ರಿಯೆ ಮಾಡಬೇಕು ಗೊತ್ತಾ ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved