ಜಾತಕ ಬಿಡಿ, ಮದುವೆಗೂ ಮುನ್ನ ಈ 4 ಮೆಡಿಕಲ್ ಟೆಸ್ಟ್ ತಪ್ಪದೇ ಮಾಡಿಸಿ!

First Published Mar 9, 2021, 4:05 PM IST

ಭಾರತದಲ್ಲಿ ಮದುವೆ ಸೀಜನ್ ಬರಲು ಇನ್ನು ಕೆಲವೇ ಸಮಯ ಬಾಕಿ. ಈಗಾಗಲೇ ಕೆಲ ಕಡೆ ಮದುವೆ ಕಾರ್ಯಕ್ರಮಗಳು ಆರಂಭವಾಗಿದ್ದು, ಏಪ್ರಿಲ್‌ನಲ್ಲಿ ಎಲ್ಲೆಡೆ ಈ ಸಂಭ್ರಮ ಕಂಡು ಬರಲಿದೆ. ಈ ನಿಟ್ಟಿನಲ್ಲಿ ಅನೇಕ ಕಡೆ ಸಿದ್ಧತೆಯೂ ಆರಂಭವಾಗಿದೆ. ಆದರೆ ಈ ಎಲ್ಲಾ ಸಿದ್ಧತೆಗಳ ನಡುವೆ ಯಾರೂ ಒಂದು ವಿಚಾರದ ಕಡೆ ಗಮನವೇ ಹರಿಸುತ್ತಿಲ್ಲ. ಅದುವೇ ಯುವಕ, ಯುವತಿಯ ಮೆಡಿಕಲ್ ಟೆಸ್ಟ್. ಹೌದು ಯುವಕ, ಯುವತಿ ಮದುವೆಗೂ ಮುನ್ನ ಅಗತ್ಯವಾಗಿ ಕೆಲ ಟೆಸ್ಟ್‌ಗಳನ್ನು ಮಾಡಿಸಲೇಬೇಕು. ಇಲ್ಲವೆಂದಾದರೆ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.