ಪಾತಾಳಕ್ಕೆ ಕುಸಿದಿದ್ದ ಸ್ಪೇನ್ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ ಗೆದ್ದಿದ್ದು ಹೇಗೆ?
2010ರಲ್ಲಿ ಚಾಂಪಿಯನ್ ಆದ ಬಳಿಕ ಪಾತಳಕ್ಕೆ ಕುಸಿದಿದ್ದ ಸ್ಪೇನ್ ಫುಟ್ಬಾಲ್ ತಂಡ. 2014ರಲ್ಲಿ ಗುಂಪು ಹಂತದಲ್ಲೇ ಔಟ್. 2018ರಲ್ಲಿ ಅಂತಿಮ-16ರ ಸುತ್ತಿನಿಂದ ಹೊರಕ್ಕೆ, 2022ರ ಅಂತಿಮ-16ರ ಸುತ್ತಿನಲ್ಲಿ ಪೆನಾಲ್ಟಿಯಲ್ಲಿ ಹಾರ್ಟ್‌ಬ್ರೇಕ್ ಅನುಭವಿಸಿದ್ದ ಲಾ ರೋಜಾ.

ಫಿನಿಕ್ಸ್‌ನಂತೆ ಎದ್ದು ಬಂದ ಸ್ಪೇನ್
ತಂಡದ ದಿಕ್ಕು ಬದಲಿಸಿದ 2022ರ ಯುರೋಪಿಯನ್ ಚಾಂಪಿಯನ್‌ಶಿಪ್. ಆ ಅನುಭವವನ್ನು ವಿಶ್ವಕಪ್‌ಗೂ ಹೊತ್ತು ತಂದ ಸ್ಪ್ಯಾನಿಶ್ ತಂಡ.
ಟಿಕಿ ಟಾಕ ಆಟದ ಶೈಲಿ ಬದಲಿಸಿಕೊಂಡಿದ್ದು ಗೇಮ್ ಚೇಂಜಿಂಗ್ ಕ್ಷಣ
ಟಿಕಿ ಟಾಕ ಆಟದ ಶೈಲಿ ಬಗ್ಗೆ ಎದುರಾಗಿದ್ದ ಪ್ರಶ್ನೆ. ಆ ಶೈಲಿಯನ್ನು ಈಗಿನ ಆಟದ ವೇಗಕ್ಕೆ ತಕ್ಕಂತೆ ಆಧುನೀಕರಣಗೊಳಿಸಿ ಯಶಸ್ವಿಯಾದ ಸ್ಪೇನ್ .
ಗೆಲುವಿನ ಹಿಂದಿ ಯುವ ತಾರೆಯರೆ ದಂಡು.
ಲ್ಯಾಮಿನೆ ಯಮಾಲ್, ನಿಕೊ ವಿಲಿಯಮ್ಸ್, ಪೆಡ್ರಿ, ಕುಬಾರ್ಸಿಯಂತಹ ಯುವ ಆಟಗಾರರ ಮೇಲೆ ನಂಬಿಕೆಯಿಟ್ಟು, ಅವರನ್ನೇ ಪ್ರಮುಖ ಅಸ್ತ್ರಗಳನ್ನಾಗಿ ಬಳಸಿ ಫಲ ಕಂಡ ಕೋಚ್ ಫ್ಯುಂಟೆ.
ಯುರೋಪ್‌ನ ಪ್ರತಿಷ್ಠಿತ ಲೀಗ್ ಆಡಿ ಅನುಭವ ಪಡೆದ ಯುವ ಆಟಗಾರರು
ವಿಶ್ವಕಪ್‌ಗೆ ಕಾಲಿಡುವ ಮುನ್ನ ಯುರೋಪ್‌ನ ಪ್ರತಿಷ್ಠಿತ ಲೀಗ್‌ಗಳಲ್ಲಿ ಆಡಿ ಅನುಭವ ಪಡೆದಿದ್ದ ಯುವ ಆಟಗಾರರು. ಇದರಿಂದ ಒತ್ತಡ ನಿರ್ವಹಣೆಯಲ್ಲಿ ಸಂಪೂರ್ಣ ಮೇಲುಗೈ.
ಸ್ಪೇನ್ ಪಾಲಿನ ಮಹಾಗೋಡೆ ಗೋಲ್‌ಕೀಪರ್ ಉನೈ ಸೈಮನ್
ಇಡೀ ವಿಶ್ವಕಪ್‌ನಲ್ಲಿ ಗುಂಪು ಹಂತದ ಮೊದಲ ಪಂದ್ಯದಿಂದ ಫೈನಲ್ ವರೆಗೂ ಒಟ್ಟು 8 ಪಂದ್ಯಗಳಲ್ಲಿ ಸ್ಪೇನ್ ಬಿಟ್ಟುಕೊಟ್ಟಿದ್ದು ಕೇವಲ ಒಂದು ಗೋಲು. ಗೋಲ್‌ಕೀಪರ್ ಉನೈ ಸೈಮನ್ ಅಸಾಧಾರಣ ಸಾಧನೆ. 6 ಪಂದ್ಯಗಳಲ್ಲಿ ಕ್ಲೀನ್‌ಶೀಟ್. ಸೈಮನ್ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತ ಡಿಫೆಂಡರ್‌ಗಳು ಪ್ರತ್ಯೇಕವಾಗಿ ಶ್ಲಾಘನೆಗೆ ಅರ್ಹರು. ಅದರಲ್ಲೂ 19ರ ಕುಬಾರ್ಸಿಯ ಪ್ರದರ್ಶನ ಎಲ್ಲರನ್ನೂ ಬೆರಗಾಗಿಸಿತು.
ರನ್ನಿಂಗ್ ಮಷಿನ್‌ಗಳ ಬಲ
ಮಿಡ್‌ಫೀಲ್ಡ್‌ನಲ್ಲಿ ಪೆಡ್ರೋ ಪೊರ್ರೊ, ಮಿಕೆಲ್ ಮೆರಿನೊರಂತಹ ರನ್ನಿಂಗ್ ಮಷಿನ್‌ಗಳ ಬಲ. ಆರಂಭಿಕ ಪಂದ್ಯದಿಂದ ಫೈನಲ್‌ವರೆಗೂ ಮೈದಾನದಲ್ಲಿ 45 ಕಿ.ಮೀ.ಗೂ ಹೆಚ್ಚು ದೂರ ಓಡಿದ ಪೊರ್ರೊ. ಬದಲಿ ಆಟಗಾರನಾಗಿ ಪಂದ್ಯದ ಅಂತಿಮ ಕ್ಷಣಗಳಲ್ಲಿ ಮೈದಾನಕ್ಕಿಳಿದರೂ ಅಂದಾಜು 15 ಕಿ.ಮೀ. ಓಡಿರುವ ಮೆರಿನೊ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
