ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿಗೆ ಹುಟ್ಟು ಹಬ್ಬದ ಸಂಭ್ರಮ!
ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ಅಪ್ರತಿಮ ಪ್ರತಿಭಾವಂತ. ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಈ ಹುಡುಗ ಬದುಕಿನಲ್ಲಿ ಮೇಲೇರಿದ ರೀತಿ ಯಾರಿಗೇ ಆದರೂ ಸ್ಪೂರ್ತಿದಾಯಕ. ಭಾರತದ ಪರ ಅತೀ ಹೆಚ್ಚು ಗೋಲು ಸಿಡಿಸಿದ ಫುಟ್ಬಾಲ್ ಪಟು, ಸರಳ ಹಾಗೂ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ನಾಯಕ ಸುನಿಲ್ ಚೆಟ್ರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.

ಸುನೀಲ್ ಚೆಟ್ರಿ ಮೂಲತಃ ನೇಪಾಳಿಯಾಗಿದ್ದು ಕೆ.ಬಿ. ಚೆಟ್ರಿ ಮತ್ತು ತಾಯಿ ಸುಶೀಲಾ ಚೆಟ್ರಿ ಅವರ ಪುತ್ರನಾಗಿ ೧೯೮೪ ಆಗಸ್ಟ್ ೩ ರಂದು ಜನಿಸಿದರು.

ಸುನೀಲ್ ಚೆಟ್ರಿ ಅವರ ಕುಟುಂಬದ ಸದಸ್ಯರೆಲ್ಲರೂ ಫುಟ್ ಬಾಲ್ ಆಟಗಾರರಾಗಿದ್ದು ತಂದೆ ಭಾರತೀಯ ಸೇನಾ ತಂಡದಲ್ಲಿ ಆಡಿದ್ದರೆ ತಾಯಿ ಮತ್ತು ಸಹೋದರಿಯರು ನೇಪಾಳ ರಾಷ್ಟ್ರೀಯ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದರು.

2002ರಲ್ಲಿ ಮೋಹನ್ ಬಾಗನ್ ಕ್ಲಬ್ ಪರ ಆಡುವ ಮೂಲಕ ಫುಟ್‌ಬಾಲ್ ವಲಯಕ್ಕೆ ಪರಿಚಿತರಾದ ಚೆಟ್ರಿ, 2007, 2009 ಮತ್ತು 2012ರ ನೆಹರೂ ಕಪ್ ಟೂರ್ನಿಗಳಲ್ಲಿ ಭಾರತ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

2008ರ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಅಮೋಘ ಆಟ ಆಡಿದ್ದ ಸುನೀಲ್ ಚೆಟ್ರಿ ಭಾರತ ತಂಡ ಪ್ರಶಸ್ತಿ ಜಯಿಸಿ 27 ವರ್ಷಗಳ ಬಳಿಕ ಎಎಫ್‌ಸಿ ಏಷ್ಯಾ ಕಪ್‌ಗೆ ಅರ್ಹತೆ ಗಳಿಸಲು ಕಾರಣರಾಗಿದ್ದರು.

ಉತ್ತಮ ಆಟಗಾರನಾಗಿ ಜೊತೆಗೆ ನಾಯಕತ್ವದ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಮತ್ತು ಬಿಎಫ್‌ಸಿ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿರುವ ಸುನೀಲ್ ಇದರ ಜೊತೆಗೆ ಭಾರತದ ಪರ ಅತ್ಯಧಿಕ ಗೋಲು ಗಳಿಸಿದ ದಾಖಲೆಯನ್ನೂ ಮಾಡಿದ್ದಾರೆ.

ಪದ್ಮಶ್ರೀ ಸೇರಿದಂತೆ ನೆಹರೂ ಕಪ್ , ಸ್ಯಾಪ್ ಚಾಂಪಿಯನ್ ಶಿಪ್ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಸುನೀಲ್ ಚೆಟ್ರಿ.

ಪ್ರಸ್ತುತ ಬೆಂಗಳೂರು ತಂಡಕ್ಕೆ ನಾಯಕರಾಗಿದ್ದಾರೆ, ಮತ್ತು ಭಾರತ ರಾಷ್ಟ್ರೀಯ ತಂಡಕ್ಕೆ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ತನ್ನ ಅಭಿಮಾನಿಯೋರ್ವರನ್ನು ವಿವಾಹವಾಗಿರುವುದು ಸುನೀಲ್ ಅವರ ಬದುಕಿನ ಅಪರೂಪದ ವಿಶೇಷ ಕ್ಷಣವಂತೆ!

ತಮ್ಮ ಕೋಚ್ ಮಗಳಾದ ಸೋನಂ ಅವರನ್ನೇ ಮದುವೆಯಾಗಿರುವ ಸುನೀಲ್ ನಮ್ಮದು ಸಿನಿಮಾ ಶೈಲಿಯ ಪ್ರೇಮಕಥೆ ಎಂದು ಖುದ್ಧು ಅವರೇ ಹೇಳಿಕೊಂಡಿದ್ದಾರೆ.

ಭಾರತ ಫುಟ್ ಬಾಲ್ ಲೋಕ ಕಂಡ ಅದ್ಭುತ ಆಟಗಾರನಿಗೆ ಹುಟ್ಟು ಹಬ್ಬದ ಶುಭಾಶಯಗಳು.