- Home
- Sports
- Football
- Happy Birthday Lionel Messi: 35ನೇ ವಸಂತಕ್ಕೆ ಕಾಲಿಟ್ಟ ಫುಟ್ಬಾಲ್ ದಿಗ್ಗಜ ಮೆಸ್ಸಿ ಸಾಧನೆಯ ಝಲಕ್
Happy Birthday Lionel Messi: 35ನೇ ವಸಂತಕ್ಕೆ ಕಾಲಿಟ್ಟ ಫುಟ್ಬಾಲ್ ದಿಗ್ಗಜ ಮೆಸ್ಸಿ ಸಾಧನೆಯ ಝಲಕ್
ಬೆಂಗಳೂರು: ಅರ್ಜೆಂಟೀನಾ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ (Lionel Messi) ಶುಕ್ರವಾರವಾದ ಇಂದು(ಜೂ.24) ತಮ್ಮ 35ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಪ್ಯಾರಿಸ್ ಸೇಂಟ್ ಜರ್ಮೈನ್ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಮುಂಬರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾವನ್ನು ಚಾಂಪಿಯನ್ ಮಾಡಲು ಮೆಸ್ಸಿ ಎದುರು ನೋಡುತ್ತಿದ್ದಾರೆ. ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಹುಟ್ಟುಹಬ್ಬದ (Lionel Messi Birthday Special) ಸಂದರ್ಭದಲ್ಲಿ ಅವರ ಸಾಧನೆಯ ಒಂದು ಝಲಕ್ ಇಲ್ಲಿದೆ ನೋಡಿ

ಫುಟ್ಬಾಲ್ ಲೀಗ್‌ವೊಂದರಲ್ಲಿ ಅತಿಹೆಚ್ಚು ಗೋಲು ಬಾರಿಸಿರುವ ಮೆಸ್ಸಿ
ಲಿಯೋನೆಲ್ ಮೆಸ್ಸಿ ಫುಟ್ಬಾಲ್ ಲೀಗ್‌ವೊಂದರಲ್ಲಿ ಗರಿಷ್ಟ ಗೋಲು ಬಾರಿಸಿದ ಸಾಧನೆ ಮಾಡಿದ್ದಾರೆ. ಲಾ ಲಿಗಾ ಫುಟ್ಬಾಲ್ ಲೀಗ್‌ನಲ್ಲಿ ಮೆಸ್ಸಿ ಬರೋಬ್ಬರಿ 474 ಗೋಲುಗಳನ್ನು ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಇಂಗ್ಲೆಂಡ್ ಅಲನ್ ಶೆರಾರ್ ಎರಡನೇ ಸ್ಥಾನದಲ್ಲಿದ್ದು, ಇಂಗ್ಲೀಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಅವರು 260 ಗೋಲು ಬಾರಿಸಿದ್ದಾರೆ.
ದಾಖಲೆಯ ಬಾಲನ್ ಡಿ ಓರ್ ಪ್ರಶಸ್ತಿ ಗೆದ್ದಿರುವ ಮೆಸ್ಸಿ
ಅರ್ಜೆಂಟೀನಾದ ಫುಟ್ಬಾಲ್ ಲೆಜೆಂಡ್, ಫುಟ್ಬಾಲ್‌ನ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಬಾಲನ್ ಡಿ ಓರ್ ಪ್ರಶಸ್ತಿಯನ್ನು ಬರೋಬ್ಬರಿ ಏಳು ಬಾರಿ ಜಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಇನ್ನು 5 ಬಾಲನ್ ಡಿ ಓರ್ ಪ್ರಶಸ್ತಿ ಜಯಿಸಿರುವ ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಎರಡನೇ ಸ್ಥಾನದಲ್ಲಿದ್ದಾರೆ.
2012ರಲ್ಲಿ 91 ಗೋಲು ಬಾರಿಸಿದ್ದ ಲಿಯೋನೆಲ್ ಮೆಸ್ಸಿ
ಕ್ಯಾಲೆಂಡರ್ ವರ್ಷವೊಂದರಲ್ಲಿ ಗರಿಷ್ಟ ಗೋಲು ಬಾರಿಸಿದ ದಾಖಲೆ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿದೆ. 2012ರ ಕ್ಯಾಲೆಂಡರ್ ವರ್ಷವೊಂದರಲ್ಲಿ ಮೆಸ್ಸಿ ಬರೋಬ್ಬರಿ 91 ಗೋಲು ಬಾರಿಸುವ ಮೂಲಕ ವರ್ಷವೊಂದರಲ್ಲಿ ಅತಿಹೆಚ್ಚು ಗೋಲು ಬಾರಿಸಿದ ಫುಟ್ಬಾಲಿಗ ಎನ್ನುವ ದಾಖಲೆ ಬರೆದಿದ್ದರು. ಇನ್ನು ವರ್ಷವೊಂದರಲ್ಲಿ 85 ಗೋಲು ಬಾರಿಸಿರುವ ಜರ್ಮನಿಯ ಗೆರ್ಡ್ ಮುಲ್ಲರ್ ಎರಡನೇ ಸ್ಥಾನದಲ್ಲಿದ್ದಾರೆ.
ಒಂದೇ ಫುಟ್ಬಾಲ್ ಕ್ಲಬ್ ಪರ ಅತಿಹೆಚ್ಚು ಗೋಲು ಬಾರಿಸಿದ ಫುಟ್ಬಾಲಿಗ ಮೆಸ್ಸಿ
ದಶಕಗಳ ಕಾಲ ಬಾರ್ಸಿಲೋನಾ ತಂಡವನ್ನು ಪ್ರತಿನಿಧಿಸಿದ್ದ ಲಿಯೋನೆಲ್ ಮೆಸ್ಸಿ, ಒಂದೇ ಫುಟ್ಬಾಲ್ ಕ್ಲಬ್ ಪರ ಅತಿಹೆಚ್ಚು ಗೋಲು ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಬಾರ್ಸಿಲೋನಾ ಕ್ಲಬ್ ಪರ ಲಿಯೋನೆಲ್ ಮೆಸ್ಸಿ ಬರೋಬ್ಬರಿ 672 ಗೋಲುಗಳನ್ನು ದಾಖಲಿಸಿದ್ದಾರೆ.
<p>Lionel Messi</p>
UEFA ಚಾಂಪಿಯನ್ ಲೀಗ್‌ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ್ದಾರೆ ಫುಟ್ಬಾಲ್ ಲೆಜೆಂಡ್
ಫುಟ್ಬಾಲ್‌ನ ಪ್ರತಿಷ್ಠಿತ ಟೂರ್ನಿ ಎನಿಸಿಕೊಂಡಿರುವ ಯೂರೋಪಿಯನ್ ಫುಟ್ಬಾಲ್ ಲೀಗ್ (UEFA ಚಾಂಪಿಯನ್ ಲೀಗ್)ನಲ್ಲಿ ಅತಿಹೆಚ್ಚು ಗೋಲು ಬಾರಿಸಿದ ದಾಖಲೆ ಸದ್ಯ ಲಿಯೋನೆಲ್ ಮೆಸ್ಸಿ ಹೆಸರಿನಲ್ಲಿದೆ. ಲಿಯೋನೆಲ್ ಮೆಸ್ಸಿ, UEFA ಚಾಂಪಿಯನ್ ಲೀಗ್‌ನಲ್ಲಿ 76 ಗೋಲು ಬಾರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೇ, ತಮ್ಮ ಪ್ರತಿಸ್ಪರ್ಧಿ ಕ್ರಿಸ್ಟಿಯಾನೋ ರೊನಾಲ್ಡೋ 73 ಗೋಲು ಬಾರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.