MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Football
  • ಫುಟ್ಬಾಲ್ ವಿಶ್ವಕಪ್‌ ಭಾರೀ ಬಹುಮಾನ ಘೋಷಿಸಿದ FIFA; ಚಾಂಪಿಯನ್ ತಂಡಕ್ಕೆ ಸಿಗುವ ನಗದು ಮೊತ್ತ ಕೇಳಿದ್ರೆ ದಂಗಾಗ್ತೀರಾ!

ಫುಟ್ಬಾಲ್ ವಿಶ್ವಕಪ್‌ ಭಾರೀ ಬಹುಮಾನ ಘೋಷಿಸಿದ FIFA; ಚಾಂಪಿಯನ್ ತಂಡಕ್ಕೆ ಸಿಗುವ ನಗದು ಮೊತ್ತ ಕೇಳಿದ್ರೆ ದಂಗಾಗ್ತೀರಾ!

ಜ್ಯೂರಿಚ್: ಫುಟ್ಬಾಲ್ ಇತಿಹಾಸದಲ್ಲೇ ಅತಿದೊಡ್ಡ ವಿಶ್ವಕಪ್‌ಗೆ ಫಿಫಾ ಭರ್ಜರಿ ಬಹುಮಾನದ ಮೊತ್ತವನ್ನು ಘೋಷಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಈ ಫುಟ್ಬಾಲ್ ಹಬ್ಬದಲ್ಲಿ ಸಿಗುವ ಬಹುಮಾನದ ಮೊತ್ತವಾದ್ರೂ ಎಷ್ಟು ಅಂತ ನೋಡೋಣ ಬನ್ನಿ. 

1 Min read
Author : Naveen Kodase
Published : Jun 09 2026, 11:48 AM IST
Share this Photo Gallery
  • FB
  • TW
  • Linkdin
  • Whatsapp
16
ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ 48 ತಂಡಗಳು ಭಾಗಿ
Image Credit : Getty

ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ 48 ತಂಡಗಳು ಭಾಗಿ

ಈ ಬಾರಿ 48 ತಂಡಗಳು ಕಣಕ್ಕಿಳಿಯುತ್ತಿದ್ದು, ತಂಡಗಳ ಸಂಖ್ಯೆ ಹೆಚ್ಚಾದಂತೆ ಬಹುಮಾನದ ಮೊತ್ತವನ್ನೂ ಫಿಫಾ ಹೆಚ್ಚಿಸಿದೆ. ಒಟ್ಟು ₹6,238.42 ಕೋಟಿ ರೂಪಾಯಿ ಬಹುಮಾನದ ಹಣವನ್ನು ಫಿಫಾ ನೀಡಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಫಿಫಾ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗಲಿದೆ ಬರೋಬ್ಬರಿ ₹417.50 ಕೋಟಿ
Image Credit : X

ಫಿಫಾ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಸಿಗಲಿದೆ ಬರೋಬ್ಬರಿ ₹417.50 ಕೋಟಿ

ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳ ಇತರೆ ಖರ್ಚುಗಳನ್ನು ಸೇರಿಸಿದರೆ, ಒಟ್ಟು ಮೊತ್ತ ₹7,400 ಕೋಟಿಗೂ ಹೆಚ್ಚು ಆಗಲಿದೆ. ಈ ಬಾರಿ ವಿಶ್ವ ಚಾಂಪಿಯನ್ ಆಗುವ ತಂಡಕ್ಕೆ ಬರೋಬ್ಬರಿ ₹417.50 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.

Related Articles

Related image1
FIFA World Cup 2026: ಕಾಲ್ಚೆಂಡಿನ ಕಾಳಗದಲ್ಲಿ ಈ ಸಲ 48 ಸೈನ್ಯಗಳು! ಯಾವ ತಂಡ ಬಲಿಷ್ಠ?
Related image2
FIFA World Cup 2026: ಮಾಂತ್ರಿಕ ಫುಟ್ಬಾಲಿಗರ ಮ್ಯಾಜಿಕ್‌ಗೆ ಕಾಯುತ್ತಿದೆ ಫಿಫಾ..!
36
ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನದಲ್ಲೂ ಹೆಚ್ಚಳ
Image Credit : Getty

ಚಾಂಪಿಯನ್ ತಂಡಕ್ಕೆ ಸಿಗುವ ನಗದು ಬಹುಮಾನದಲ್ಲೂ ಹೆಚ್ಚಳ

ಇದು ಕಳೆದ ಬಾರಿ ಚಾಂಪಿಯನ್ ಆಗಿದ್ದ ಅರ್ಜೆಂಟೀನಾಗೆ ಸಿಕ್ಕಿದ್ದಕ್ಕಿಂತ ₹76 ಕೋಟಿ ಹೆಚ್ಚು. ಇನ್ನು ಎರಡನೇ ಸ್ಥಾನ ಪಡೆಯುವ ತಂಡಕ್ಕೆ ₹288 ಕೋಟಿ, ಮೂರನೇ ಸ್ಥಾನಕ್ಕೆ ₹254.675 ಕೋಟಿ ಮತ್ತು ನಾಲ್ಕನೇ ಸ್ಥಾನಕ್ಕೆ ₹237 ಕೋಟಿ ರೂಪಾಯಿ ಸಿಗಲಿದೆ.

46
ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೂ ಕನಿಷ್ಠ ₹87.5 ಕೋಟಿ ಸಿಗುವುದು ಗ್ಯಾರಂಟಿ
Image Credit : Asianet News

ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸಿದ ಪ್ರತಿ ತಂಡಕ್ಕೂ ಕನಿಷ್ಠ ₹87.5 ಕೋಟಿ ಸಿಗುವುದು ಗ್ಯಾರಂಟಿ

ಕ್ವಾರ್ಟರ್ ಫೈನಲ್ ಮತ್ತು ಪ್ರೀ-ಕ್ವಾರ್ಟರ್ ಫೈನಲ್ ತಲುಪಿದ ತಂಡಗಳಿಗೂ ಭರ್ಜರಿ ಹಣ ಸಿಗಲಿದೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೂ ಕನಿಷ್ಠ ₹87.5 ಕೋಟಿ ಸಿಗುವುದು ಗ್ಯಾರಂಟಿ. ಇದು ಟೂರ್ನಿಗೆ ಸಿದ್ಧತೆ ಮಾಡಿಕೊಳ್ಳಲು ನೀಡುವ ಹಣವನ್ನು ಹೊರತುಪಡಿಸಿ.

56
ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್
Image Credit : Getty

ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್

ಈ ಬಾರಿಯ  ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 104 ಪಂದ್ಯಗಳು ನಡೆಯಲಿವೆ. ಪಂದ್ಯಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಮೂರು ದೇಶಗಳಿಂದ ಪ್ರಾಯೋಜಕತ್ವ ಸಿಕ್ಕಿದ್ದರಿಂದ ಫಿಫಾದ ಆದಾಯವೂ ಹೆಚ್ಚಾಗಿದೆ. ಇದೇ ಕಾರಣಕ್ಕೆ ತಂಡಗಳಿಗೂ ಹೆಚ್ಚಿನ ಬಹುಮಾನ ನೀಡಲು ಫಿಫಾ ನಿರ್ಧರಿಸಿದೆ.

66
ಹಾಗಾದ್ರೆ ಈ ಹಣ ಆಟಗಾರರಿಗೆ ಸಿಗುತ್ತಾ?
Image Credit : FIFA World Cup Twitter

ಹಾಗಾದ್ರೆ ಈ ಹಣ ಆಟಗಾರರಿಗೆ ಸಿಗುತ್ತಾ?

ಇಲ್ಲ. ಫಿಫಾ ಈ ಹಣವನ್ನು ನೇರವಾಗಿ ಆಟಗಾರರ ಖಾತೆಗೆ ಹಾಕುವುದಿಲ್ಲ. ಬದಲಿಗೆ, ಪ್ರತಿ ದೇಶದ ಫುಟ್ಬಾಲ್ ಅಸೋಸಿಯೇಷನ್‌ಗಳಿಗೆ ಈ ಹಣವನ್ನು ವರ್ಗಾಯಿಸುತ್ತದೆ. ಈ ಹಣವನ್ನು ಆಯಾ ಸಂಸ್ಥೆಗಳು ಆಟಗಾರರಿಗೆ ಬೋನಸ್, ಕೋಚಿಂಗ್ ಸಿಬ್ಬಂದಿ ಸಂಬಳ, ಪ್ರಯಾಣದ ಖರ್ಚು ಮತ್ತು ದೇಶೀಯ ಫುಟ್ಬಾಲ್ ಅಭಿವೃದ್ಧಿಗೆ ಬಳಸಿಕೊಳ್ಳಬಹುದು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಫುಟ್‌ಬಾಲ್
ಫಿಫಾ ವಿಶ್ವಕಪ್
ಕ್ರೀಡೆಗಳು
ಲಿಯೋನೆಲ್ ಮೆಸ್ಸಿ
Latest Videos
Recommended Stories
Recommended image1
FIFA World Cup 2026: ಮಾಂತ್ರಿಕ ಫುಟ್ಬಾಲಿಗರ ಮ್ಯಾಜಿಕ್‌ಗೆ ಕಾಯುತ್ತಿದೆ ಫಿಫಾ..!
Recommended image2
IPL ರೀತಿ ಮೊಬೈಲ್‌ನಲ್ಲೇ FIFA World Cup ಫುಟ್‌ಬಾಲ್‌ ನೋಡ್ಬೇಕಾ, ಇಷ್ಟು ಹಣ ಪಾವತಿ ಮಾಡಿ..
Recommended image3
FIFA World Cup 2026: ಕಾಲ್ಚೆಂಡಿನ ಕಾಳಗದಲ್ಲಿ ಈ ಸಲ 48 ಸೈನ್ಯಗಳು! ಯಾವ ತಂಡ ಬಲಿಷ್ಠ?
Related Stories
Recommended image1
FIFA World Cup 2026: ಕಾಲ್ಚೆಂಡಿನ ಕಾಳಗದಲ್ಲಿ ಈ ಸಲ 48 ಸೈನ್ಯಗಳು! ಯಾವ ತಂಡ ಬಲಿಷ್ಠ?
Recommended image2
FIFA World Cup 2026: ಮಾಂತ್ರಿಕ ಫುಟ್ಬಾಲಿಗರ ಮ್ಯಾಜಿಕ್‌ಗೆ ಕಾಯುತ್ತಿದೆ ಫಿಫಾ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved