#WorldChocolateDay; ಬಾಯಲ್ಲಿ ನೀರೂರಿಸುವ ಚಾಕೋಲೆಟ್ ತಿನಿಸುಗಳು...
ಚಾಕೋಲೆಟ್ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪುಟ್ಟ ಮಕ್ಕಳಿಂದ ಹಿರಿಯರವರೆಗೂ ಎಲ್ಲರಿಗೂ ಚಾಕೋಲೆಟ್ ಅಂದ್ರೆ ಇಷ್ಟದ ಸಿಹಿ ತಿನಿಸು. ಅಂದ್ಮೇಲೆ ನೀವು ಸ್ವಲ್ಪ ಎಮ್ಮಿ ಚಾಕೋಲೆಟ್ ಐಟಂಗಳನ್ನ ನೋಡ್ಬೇಕಲ್ವಾ?
ಪ್ರತಿ ವರ್ಷ ಜುಲೈ 7ರಂದು ವಿಶ್ವ ಚಾಕೋಲೆಟ್ ದಿನ ಎಂದು ಆಚರಣೆ ಮಾಡಲಾಗುತ್ತದೆ.
1550ರಲ್ಲಿ ಜುಲೈ 7 ರಂದುಯುರೋಪ್ ಚಾಕೋಲೆಟ್ ಎಂಬ ಅದ್ಭುತ ತಿನುಸನ್ನು ಪರಿಚಯಿಸಿತು .
ಈ ದಿನ ಇಡೀ ಯುರೋಪ್ ನವರು ವೆರೈಟಿ ಚಾಕೋಲೆಟ್ ರೆಸಿಪಿಗಳನ್ನು ತಯಾರಿಸಿ ಸೇವಿಸುತ್ತಾರೆ.
ಯುನೈಟೆಡ್ ಸ್ಟೇಟ್‌ನಲ್ಲಿ ಮಾತ್ರ ಅಕ್ಟೋಬರ್ 28 ಆಚರಿಸಲಾಗುತ್ತದೆ.
2500 ವರ್ಷಗಳ ಇತಿಹಾಸವಿರುವ ಚಾಕೋಲೆಟ್ ನಲ್ಲಿ ವಿಧವಿಧವಾದ ರೆಸಿಪಿಗಳನ್ನು ಪ್ರಯತ್ನಿಸಬಹುದು.
ಅದರಲ್ಲೂ ಎಲ್ಲಾರ ಟಾಪ್ ಫೇವರೆಟ್ ಅಂದ್ರೆ ಚಾಕೋಲೆಟ್ ಐಸ್ ಕ್ರೀಂ ಮತ್ತು ಕೇಕ್.
ಈಗ ಚಾಕಲೇಟ್‌ನಲ್ಲಿ ದೋಸೆ, ಇಡ್ಲಿ ಕೂಡ ತಯಾರಿಸುತ್ತಾರೆ.
ಸಾಮಾಜಿಕ ಜಾಲತಾಣದಿಂದ ಜನರು ಮನೆಯಲ್ಲಿಯೇ ಐಸ್ ಕ್ರೀಂ ಮತ್ತು ಕೇಕ್ ತಯಾರಿಸುವುದನ್ನು ಕಲಿತುಕೊಂಡಿದ್ದಾರೆ.
ರೀಸರ್ಚ್‌ಗಳ ಪ್ರಕಾರ ಚಾಕೋಲೆಟ್ ನಿಂದ ಮಾತ್ರ ಅತಿ ಹೆಚ್ಚು ರುಚಿಗಳ ವೆರೈಟಿ ಸಿಹಿ ತಿನಿಸುಗಳನ್ನು ಮಾಡಲು ಸಾಧ್ಯವಂತೆ.
ಇತ್ತೀಚಿನ ದಿನಗಳಲ್ಲಿ ಹೋಂ ಮೇಡ್ ಚಾಕೋಲೆಟ್ ಗೆ ತುಂಬಾನೇ ಡಿಮ್ಯಾಂಡ್ ಇದೆ.