ಗುಲಾಬಿ ದಳದ ಗುಲ್ಕಂದ್ ದಿನಾ ಸೇವಿಸಿ, ಆರೋಗ್ಯ ಲಾಭ ನೋಡಿ

First Published Apr 7, 2021, 5:43 PM IST

ಗುಲ್ಕಂದ್ ಗುಲಾಬಿ ಹೂವಿನ ದಳಗಳಿಂದ ಮಾಡಿರುವ ಸಿಹಿಯಾದ ಒಂದು ತಿನಿಸು. ಅದರ ವಿಶಿಷ್ಟ ರುಚಿ ಮತ್ತು ಸುಗಂಧಕ್ಕಾಗಿ ಜನಪ್ರಿಯ. ಗುಲ್ಕಂದ್ ಆರೋಗ್ಯ ಪ್ರಯೋಜನಗಳು ಅನೇಕ. ಆಯುರ್ವೇದ ಔಷಧಿಗಳು ಮತ್ತು ಚಿಕಿತ್ಸೆಗಳಲ್ಲಿ ಇದು ಒಂದು ಪ್ರಮುಖ ಅಂಶ. ಸಾಂಪ್ರದಾಯಿಕ ಪಾನ್ ಅಥವಾ ಮೌತ್ ಫ್ರೆಶ್ನರ್‌ಗಳಲ್ಲಿ ಹಲವರು ಗುಲ್ಕಂದ್ ರುಚಿ ನೋಡಿರಬಹುದು. ನಮ್ಮ ದೈನಂದಿನ ಜೀವನದಲ್ಲಿ ಗುಲ್ಕಂದ್ ಅನ್ನು ಬಳಸುವುದರಿಂದ ನಾವು ಅದರ ಲಾಭವನ್ನು ಪಡೆಯಬಹುದು.