ಬೇಳೆ ಸಾರು ಮಾಡೋ ಮುನ್ನ ನೀವಿದನ್ನ ಮಾಡ್ತೀರಿ ಅಲ್ವಾ?
ಬೇಳೆಯನ್ನು ನೆನೆಸದೆ ಅಡುಗೆ ತಯಾರಿಸಿದರೆ ಏನಾಗುತ್ತೆ ಅನ್ನೋದು ನಿಮಗೆ ಗೊತ್ತಾ?, ಆಗ ನೀವು ಪೌಷ್ಠಿಕಾಂಶದ (Vitamins) ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳಬಹುದು. ಅಲ್ಲದೇ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಸಹ ಹೊಂದುವ ಸಾಧ್ಯತೆ ಇದೆ. ಹಾಗಾದ್ರೆ ಅಡುಗೆ ಮಾಡುವ ಮೊದಲು ಎಷ್ಟು ಸಮಯದವರೆಗೆ ಬೇಳೆಯನ್ನು ನೆನೆಸುವುದು ಅಗತ್ಯ ಎಂದು ತಿಳಿದುಕೊಳ್ಳಿ. ಇಲ್ಲಿದೆ ನೀವು ಬೇಳೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯ ಮಾಹಿತಿ.
ಸಾಮಾನ್ಯವಾಗಿ ನಮ್ಮೆಲ್ಲರ ಮನೆಯಲ್ಲಿ ಪ್ರತಿದಿನ ಬೇಳೆ ಹಾಕಿ ಒಂದಲ್ಲ ಒಂದು ರೀತಿಯ ಅಡುಗೆ ತಯಾರಿಸಲಾಗುತ್ತದೆ. ಆ ಟೈಮ್ ಲ್ಲಿ ಬೇಳೆಗಳನ್ನು ಪೆಟ್ಟಿಗೆ ಅಥವಾ ಪ್ಯಾಕೆಟ್ ನಿಂದ ನೇರವಾಗಿ ತೆಗೆದು ಕುಕ್ಕರ್ ನಲ್ಲಿ (pressure cooker) ಕೆಲವರು ಹಾಕ್ತಾರೆ. ಇದರಿಂದ ಅದು ಬೇಯುತ್ತದೆ ನಿಜಾ, ಆದರೆ ಪ್ರಯೋಜನ ಏನೂ ಇರೋದೆ ಇಲ್ಲ. ಬೇಳೆಕಾಳುಗಳನ್ನು ನೆನೆಸದೆ ಎಂದಿಗೂ ತಯಾರಿಸಬಾರದು. ಯಾಕೆ ಅನ್ನೋದನ್ನು ನೋಡೋಣ.
ದಾಲ್ ಪ್ರತಿಯೊಬ್ಬ ಭಾರತೀಯನ ಊಟದ (Indian Fodd) ತಟ್ಟೆಯ ಪ್ರಮುಖ ಭಾಗವಾಗಿದೆ. ಆದರೆ ಎಲ್ಲರ ಮನೆಯಲ್ಲೂ ಅದನ್ನು ಬೇಯಿಸುವ ವಿಧಾನಗಳು ವಿಭಿನ್ನವಾಗಿವೆ. ಯಾರಾದರೂ ಫ್ರೈ ದಾಲ್ ತಿನ್ನಲು ಇಷ್ಟಪಟ್ಟರೆ , ಇನ್ನೂ ಕೆಲವರು ಬೇಳೆ ಸಾರು ಮಾಡಲು ಇಷ್ಟಪಡ್ತಾರೆ. ದಕ್ಷಿಣದಲ್ಲಿ ದಾಲ್ ಅನ್ನು ಸಾಂಬಾರ್ ಆಗಿ ತಿನ್ನುವ ಅಭ್ಯಾಸ ಇದೆ.
ದಾಲ್‌ನಲ್ಲಿ ಲ್ನಲ್ಲಿ ಅನೇಕ ರೂಪಗಳಿವೆ. ಕೆಲವೊಮ್ಮೆ ಬೇಳೆಯ ಸ್ಥಾನವನ್ನು ಬೇರೆ ಕಾಳುಗಳು ಸಹ ತೆಗೆದುಕೊಳ್ಳುತ್ತೆ, ಅದು ರಾಜ್ಮಾ ಮತ್ತು ಚೋಲೆ. ಇವುಗಳನ್ನು ಅಡುಗೆ ಮಾಡುವ ಮೊದಲು ರಾತ್ರಿ ನೆನೆಸಿಡಲಾಗುತ್ತದೆ. ಆದರೆ ದಾಲ್ ತಯಾರಿಸುವಾಗ ಇದನ್ನು ಮಾಡಬೇಡಿ. ಜೊತೆಗೆ ಬೇಳೆಯನ್ನು ಪೆಟ್ಟಿಗೆ ಅಥವಾ ಪ್ಯಾಕೆಟ್ ನಿಂದ ನೇರವಾಗಿ ತೆಗೆದು ಕುಕ್ಕರ್ ಹಾಕೋದು ಸಹ ಮಾಡಲೇಬಾರದು. ಅದನ್ನು ನೀರಿನಲ್ಲಿ ನೆನೆಸಿಯೇ ಅಡುಗೆಗೆ ಬಳಕೆ ಮಾಡಬೇಕು.
ಬೇಳೆಯನ್ನು ನೆನೆಸುವುದು ಏಕೆ ಮುಖ್ಯ?
ಬೇಳೆಕಾಳುಗಳನ್ನು ನೆನೆಸಿಡುವುದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು (problem) ತೊಡೆದುಹಾಕಲು ಸಹಾಯ ಮಾಡುತ್ತದೆ. ಬೇಳೆಯನ್ನು ನೆನೆಸೋದ್ರಿಂದ ಇದು ಬೇಗನೆ ಜೀರ್ಣವಾಗುತ್ತದೆ. ನಂತರ ಹೊಟ್ಟೆಯಲ್ಲಿ ಭಾರದಂತಹ ಯಾವುದೇ ಸಮಸ್ಯೆಗಳು ಉಂಟಾಗೋದಿಲ್ಲ.
ಬೇಳೆಯನ್ನು ನೆನೆಸೋದ್ರಿಂದ, ಅಮೈಲೇಸ್ ಸಂಯುಕ್ತಗಳು ಅದರಲ್ಲಿ ಸಕ್ರಿಯವಾಗಿರುತ್ತವೆ, ಇದು ದಾಲ್ ನಲ್ಲಿರುವ ಪಿಷ್ಟವನ್ನು ಜೀರ್ಣಿಸಿಕೊಳ್ಳಲು ಸುಲಭವಾಗಿಸುತ್ತದೆ. ನೀವು ಅಂತಹ ದಾಲ್ ಅನ್ನು ತಿನ್ನುವಾಗ ಹೊಟ್ಟೆಯುಬ್ಬರಿಕೆ, ಗ್ಯಾಸ್ಟ್ರಿಕ್ ಮೊದಲಾದ ಯಾವುದೇ ಸಮಸ್ಯೆ ಎದುರಿಸೋ ಚಾನ್ಸ್ ಇರೋದೆ ಇಲ್ಲ.
ಬೇಳೆ ಆಲಿಗೋಸ್ಯಾಕರೈಡ್ ಗಳು ಎಂದು ಕರೆಯಲ್ಪಡುವ ಮೂಲವಸ್ತುಗಳನ್ನು ಸಹ ಹೊಂದಿರುತ್ತದೆ. ಆದರೆ ಅವುಗಳನ್ನು ನೀರಿನಲ್ಲಿ ನೆನೆಸಿದಾಗ ಆಲಿಗೋಸ್ಯಾಕರೈಡ್ ಪ್ರಮಾಣ ಕಡಿಮೆಯಾಗುತ್ತವೆ. ಇದರಿಂದ ಅದನ್ನು ತಿಂದ ಮೇಲೆ ಗ್ಯಾಸ್ ಸಮಸ್ಯೆ (gastric problem) ಉಂಟಾಗೋದಿಲ್ಲ.
ನೀವು ಎಷ್ಟು ಸಮಯದವರೆಗೆ ಬೇಳೆಯನ್ನು ನೆನೆಸುತ್ತೀರಿ?
ಬೇಳೆ ಕಡಲೆ, ಉದ್ದು ಅಥವಾ ಮಸೂರ್ ಮೊದಲಾದವುಗಳನ್ನು ತಯಾರಿಸೋದಾದ್ರೆ, ಅದನ್ನು ತಯಾರಿಸುವ ಮೊದಲು ಕನಿಷ್ಠ ಎರಡು ಗಂಟೆಗಳ ಮೊದಲು ನೆನೆಸಿಡಿ. ತೊಗರಿ, ಹೆಸರು ಬೇಳೆಯಂತಹ ಇತರ ಬೇಳೆಗಳನ್ನು ಬೇಯಿಸುವ ಮೊದಲು ಅರ್ಧ ಗಂಟೆ ನೆನೆಸಿಡುವುದು ಸಹ ಸಾಕು.
ಬೇಳೆಯನ್ನು ನೆನೆಸುವ ಮೊದಲು, ಎರಡು ಅಥವಾ ಮೂರು ಬಾರಿ ನೀರಿನಿಂದ ತೊಳೆದ ನಂತರವೇ ನೀವು ಅದನ್ನು ನೆನೆಸಿಡಬೇಕು ಅನ್ನೋದನ್ನು ಮರೆಯಬೇಡಿ. ಯಾಕೆಂದರೆ ಇದರಿಂದ ಬೇಳೆಯಲ್ಲಿರುವ ಧೂಳು, ಅಥವಾ ಇನ್ನಿತರ ಬೇಡವಾದ ಅಂಶಗಳು ನಿವಾರಣೆಯಾಗುತ್ತದೆ. ಇನ್ನು ಮುಂದೆ ಬೇಳೆ ತಯಾರಿಸುವಾಗ ಇದನ್ನ ಮಾಡಲು ಮರೆಯಬೇಡಿ.