- Home
- Life
- Food
- ಚಿಕನ್ ಬಿರಿಯಾನಿ ಸೇರಿ ನಿಮ್ಮ Favourite Food ಜೀರ್ಣಿಸಿಕೊಳ್ಳಲು ನೀವೆಷ್ಟು ಹೊತ್ತು ವಾಕಿಂಗ್ ಮಾಡ್ಬೇಕು?
ಚಿಕನ್ ಬಿರಿಯಾನಿ ಸೇರಿ ನಿಮ್ಮ Favourite Food ಜೀರ್ಣಿಸಿಕೊಳ್ಳಲು ನೀವೆಷ್ಟು ಹೊತ್ತು ವಾಕಿಂಗ್ ಮಾಡ್ಬೇಕು?
ಪ್ರತಿಯೊಂದು ಆಹಾರವು ನಮ್ಮ ಹೊಟ್ಟೆಗೆ ಸೇರಿದ ನಂತರ ಅದು ಕರಗುವ ಅಥವಾ ಜೀರ್ಣಿಸಿಕೊಳ್ಳಲು ಒಂದಿಷ್ಟು ಸಮಯ ಅಂತೂ ಬೇಕೇ ಬೇಕು. ಇಲ್ಲಿ ಆಹಾರ ತಜ್ಞರೊಬ್ಬರು ಯಾವ ಆಹಾರ ಕರಗಲು ಎಷ್ಟು ಸಮಯ ನಾವು ವಾಕಿಂಗ್ ಮಾಡಬೇಕು ಅನ್ನೋದನ್ನು ವಿವರವಾಗಿ ನೀಡಿದ್ದಾರೆ.
16

Image Credit : Google
ಆಹಾರ ಮತ್ತು ವಾಕಿಂಗ್
ನಿಮ್ಮ ವೇಗ ಮತ್ತು ದೇಹದ ತೂಕವನ್ನು ಅವಲಂಬಿಸಿ, ಗಂಟೆಗೆ 5 ಕಿಮೀ ನಡಿಗೆಯು ನಿಮಿಷಕ್ಕೆ ಸುಮಾರು 4–7 ಕಿಲೋಕ್ಯಾಲರಿಗಳನ್ನು ಸುಡುತ್ತದೆ .ಅಂದರೆ 400 ಕಿಲೋ ಕ್ಯಾಲರಿ ಊಟ ಮಾಡಿದ್ರೆ, ಸರಿಸುಮಾರು 60–90 ನಿಮಿಷಗಳ ನಡಿಗೆ ಅತ್ಯವಾಗಿದೆ. ಹಾಗಿದ್ರೆ ನೀವು ನಿಮ್ಮ ಇಷ್ಟದ ಆಹಾರ ಸೇವಿಸಿದ್ರೆ ಎಷ್ಟು ವಾಕಿಂಗ್ ಮಾಡಬೇಕು ನೋಡಿ.
26
Image Credit : Freepik
ಅನ್ನ -ಚಪಾತಿ
- 1 ಬೌಲ್ ಅನ್ನ : ಒಂದು ಬೌಲ್ ಅನ್ನದಲ್ಲಿ ಸುಮಾರು 242 ಕ್ಯಾಲರಿ ಇರುತ್ತೆ. ಇದು ಜೀರ್ಣವಾಗಬೇಕು ಅಂದ್ರೆ 53 ನಿಮಿಷ ವಾಕ್ ಮಾಡಬೇಕು.
- 3 ಚಪಾತಿ : ಮೂರು ಚಪಾತಿ ಸುಮಾರು 360 ಕ್ಯಾಲರಿ ಇರುತ್ತೆ. ಇದನ್ನ ಕರಗಿಸಲು 70 ನಿಮಿಷ ವಾಕಿಂಗ್ ಅಗತ್ಯ.
36
Image Credit : stockphoto
ಗೋಧಿ ಪರೋಟ -ಚಿಕನ್ ಬಿರಿಯಾನಿ
- 2 ಗೋಧಿ ಪರೋಟ : ನೀವು ಹೆಲ್ತಿ ಎಂದು ತಿನ್ನುವ ಗೋಧಿ ಪರೋಟದಲ್ಲಿ 380ಕ್ಯಾಲರಿ ಇರುತ್ತವೆ. ಇದನ್ನು ಕರಗಿಸಲು 70 ನಿಮಿಷ ವಾಕಿಂಗ್ ಬೇಕು.
- 1 ಬೌಲ್ ಚಿಕನ್ ಬಿರಿಯಾನಿ: ಜನ ಇಷ್ಟಪಟ್ಟು ತಿನ್ನುವ ಒಂದು ಬೌಲ್ ಚಿಕನ್ ಬಿರಿಯಾನಿಯಲ್ಲಿ 420ಕ್ಯಾಲರಿ ಇದೆ. ಇದನ್ನ ಜೀರ್ಣವಾಗಲು 79 ನಿಮಿಷ ವಾಕ್ ಮಾಡಲೇಬೇಕು.
46
Image Credit : our own
ಸಮೋಸ-ಆಲೂ-ಪೂರಿ
- 2 ಸಮೋಸ: ಎರಡು ಸಮೋಸ ತಾನೇ ಎಂದು ಇಗ್ನೋರ್ ಮಾಡಬೇಡಿ. ಇದರಲ್ಲಿ ಬರೋಬ್ಬರಿ 522 ಕ್ಯಾಲರಿ ಇದ್ದು, ಇದು ಕರಗಲು 135 ನಿಮಿಷ ವಾಕಿಂಗ್ ಮಾಡುವುದು ಅನಿವಾರ್ಯ.
- ಆಲೂ-ಪೂರಿ : ಬಾಯಿಗೆ ರುಚಿ ನೀಡುವ ಪೂರಿ ಭಾಜಿಯಲ್ಲಿ ಸುಮಾರು 444 ಕ್ಯಾಲರಿ ಇದ್ದು, ಅದನ್ನು ಬರ್ನ್ ಮಾಡಲು 85 ನಿಮಿಷ ವಾಕ್ ಮಾಡಬೇಕು,
56
Image Credit : Getty
ಸ್ಯಾಂಡ್ ವಿಚ್-ಬರ್ಗರ್
- ಸ್ಯಾಂಡ್ ವಿಚ್: ಸ್ಯಾಂಡ್ ವಿಚ್ ಲೈಟ್ ಆಗಿರುತ್ತೆ ಎಂದು ನಿಮಗೆ ಅನಿಸಬಹುದು. ಆದರೆ ಇದರಲ್ಲೂ ಸುಮಾರು 242 ಕ್ಯಾಲರಿ ಇದ್ದು, ಅದನ್ನು ಕರಗಿಸಲು ದಿನದಲ್ಲಿ 53 ನಿಮಿಷ ಆದ್ರು ನಡೆಯಬೇಕು.
- 1 ಬರ್ಗರ್ : ವೆಜೀಸ್, ನಾನ್ ವೆಜ್ ಎಲ್ಲಾ ಸೇರಿರುವ ಬರ್ಗರ್ ನಲ್ಲಿ 360 ಕ್ಯಾಲರಿ ಇದೆ. ಇದನ್ನು ನೀವು ತಿಂದರೆ ಮಿಸ್ ಮಾಡದೇ 75 ನಿಮಿಷ ವಾಕ್ ಮಾಡಿ.
66
Image Credit : Getty
ಫ್ರೆಂಚ್ ಫ್ರೈಸ್-ದಹಿ ಚಾಟ್-ಇನ್’ಸ್ಟಂಟ್ ನೂಡಲ್ಸ್
- ಫ್ರೆಂಚ್ ಫ್ರೈಸ್ : 292 ಕ್ಯಾಲರಿ ಹೊಂದಿರುವ ಫ್ರೆಂಚ್ ಫ್ರೈಸ್ ತಿಂದರೆ ಒಂದು ಗಂಟೆ ವಾಕ್ ಮಾಡಲೇಬೇಕು.
- ದಹಿ ಚಾಟ್: ನೀವು ದಹಿ ಚಾಟ್ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಎಂದು ಅಂದುಕೊಂಡಿರಬಹುದು, ಆದರೆ ಇದರಲ್ಲಿ ಬರೋಬ್ಬರಿ 450 ಕ್ಯಾಲರಿ ಇದೆ. ಇದನ್ನು ಜೀರ್ಣಿಸಲು 115 ನಿಮಿಷ ವಾಕ್ ಮಾಡಬೇಕು.
- ಇನ್’ಸ್ಟಂಟ್ ನೂಡಲ್ಸ್: ಟೈಮ್ ಪಾಸ್ ಗೆ ತಿನ್ನುವ ಇನ್’ಸ್ಟಂಟ್ ನೂಡಲ್ಸ್ ನಲ್ಲಿ 400 ಕ್ಯಾಲರಿ ಇದ್ದು, 80 ನಿಮಿಷಗಳ ವಾಕ್ ಅಗತ್ಯ.
Latest Videos