Top Searched Food: ಈ ವರ್ಷದ ಟಾಪ್ ಸರ್ಚ್‌ನಲ್ಲಿವೆ ವೆಜ್ ಮೊಟ್ಟೆ, ಆಲೂಗಡ್ಡೆ ಹಾಲು
2022 ರ ಹೆಚ್ಚು ಹುಡುಕಲ್ಪಟ್ಟ ಆಹಾರ ಯಾವುವು ಗೊತ್ತಾ? 2022 ರಲ್ಲಿ, ನಾವು ಅನೇಕ ಆಹಾರ ಟ್ರೆಂಡ್ ನೋಡಿದ್ದೇವೆ. ಗೂಗಲ್ ಸರ್ಚ್ ನಲ್ಲಿ (google search) ಕೆಲವರು ಅಗ್ರಸ್ಥಾನದಲ್ಲಿದ್ದವು. ಯಾವೆಲ್ಲಾ ಆಹಾರಗಳ ಬಗ್ಗೆ ಜನರು ಗೂಗಲ್ ನಲ್ಲಿ ಹೆಚ್ಚು ಹುಡುಕಾಡಿದ್ದಾರೆ ತಿಳಿಯಲು ಮುಂದೆ ಓದಿ.
ಇನ್ನೇನು ಕೆಲವೇ ದಿನಗಳಲ್ಲಿ ನಾವು 2022 ಕ್ಕೆ ವಿದಾಯ ಹೇಳುತ್ತೇವೆ. ಈಗಷ್ಟೇ 2022 ಆರಂಭವಾಗಿದ್ದು, ಅದೆಷ್ಟು ಬೇಗ ಒಂದು ವರ್ಷವೇ ಮುಗಿದು ಹೋಯ್ತು ಎಂದು ನೀವು ಸಹ ಯೋಚನೆ ಮಾಡುತ್ತಿದರಬಹುದು. ನಾವು 2022 ರಲ್ಲಿ ಬಹಳಷ್ಟು ವಿಷಯಗಳನ್ನು ನೋಡಿದ್ದೇವೆ. ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಅನೇಕ ಮದುವೆಗಳು, ತಾರೆಯರ ಮಕ್ಕಳು, ಅನೇಕ ತಾರೆಯರು ಸಾವು, ಇದರೊಂದಿಗೆ, ದೇಶ ಮತ್ತು ಜಗತ್ತಿನಲ್ಲಿ ಪ್ರಕ್ಷುಬ್ಧತೆ ಉಂಟಾಗಿತ್ತು. ಹೀಗೆ 2022 ಹಲವಾರು ಅಂಶಗಳನ್ನು ಒಳಗೊಂಡಿತ್ತು. ಇದೆಲ್ಲದರ ನಡುವೆ ಆಹಾರವನ್ನು ಹೇಗೆ ಮರೆಯಲು ಸಾಧ್ಯ?
ಪ್ರತಿ ವರ್ಷ ಕೆಲವೊಂದು ಆಹಾರಗಳು ಟ್ರೆಂಡ್ ನಲ್ಲಿರುತ್ತವೆ (foods on trend). ಕೆಲವು ಆಹಾರ ಟ್ರೆಂಡ್ ತುಂಬಾ ಪ್ರಸಿದ್ಧವಾಗಿವೆ ಮತ್ತು ಕೆಲವನ್ನು ಜನರು ಇಷ್ಟಪಡೋದಿಲ್ಲ. ನಾವು ಭಾರತೀಯ ಆಹಾರವನ್ನು ಎಷ್ಟು ಇಷ್ಟಪಡುತ್ತೇವೆ ಎಂದರೆ ನಾವು ಎಲ್ಲವನ್ನೂ ಬಹಳ ಆಸಕ್ತಿಯಿಂದ ತಿನ್ನುತ್ತೇವೆ. ಈ ವರ್ಷ ಗೂಗಲ್ ಸರ್ಚ್ ನಲ್ಲಿ ಅಗ್ರಸ್ಥಾನ ಪಡೆದ ಆಹಾರಗಳ ಲಿಸ್ಟ್ ಇಲ್ಲಿವೆ. ಅವುಗಳ ಬಗ್ಗೆ ತಿಳಿಯೋಣ.
ಸಸ್ಯ ಆಧಾರಿತ ಮೊಟ್ಟೆಗಳು (plant based egg)
ಮಾಂಸವನ್ನು ಸಸ್ಯಗಳಿಂದ ಸಹ ತಯಾರಿಸಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇದು ನಮ್ಮ ಕಲ್ಪನೆಗೂ ಮೀರಿ ಸಂಭವಿಸಬಹುದು ಮತ್ತು ಸಂಭವಿಸಿದೆ. ಈ ವರ್ಷ, ಸಸ್ಯ ಆಧಾರಿತ ಮಾಂಸ ಮತ್ತು ಮೊಟ್ಟೆ ಭಾರಿ ಟ್ರೆಂಡಿಂಗ್ ನಲ್ಲಿತ್ತು. ಈ ಮೊಟ್ಟೆಗಳು ಜನರ ತಟ್ಟೆಯಲ್ಲಿ ತಮ್ಮ ಸ್ಥಾನವನ್ನು ಗಳಿಸಿದವು ಮತ್ತು ಟಾಪ್ ಸರ್ಚ್ ಬಾರ್ ನಲ್ಲಿ ಸೇರಿಸಲ್ಪಟ್ಟವು. ಇದನ್ನು ಹೆಸರು ಬೇಳೆಯಿಂದ ತಯಾರಿಸಲಾಗುತ್ತದೆ. ಇದು ಪ್ರೋಟೀನ್ ಅನ್ನು ಹೊಂದಿರುತ್ತದೆ, ಅದು ಮೊಟ್ಟೆಯಂತೆ ರುಚಿಸುತ್ತದೆ ಮತ್ತು ಸ್ಕ್ರಾಂಬಲ್ ಆಗುತ್ತದೆ. ಹೆಸರುಕಾಳು ಸುಸ್ಥಿರ ಬೆಳೆಯಾಗಿದ್ದು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ನಾರಿನಂಶದಿಂದ ಸಮೃದ್ಧವಾಗಿದೆ. ಸಸ್ಯ ಆಧಾರಿತ ಅಥವಾ ಸಸ್ಯಾಹಾರಿ ಮೊಟ್ಟೆಗಳು ಕೋಳಿ ಮೊಟ್ಟೆಗಳಿಗಿಂತ ಆರೋಗ್ಯಕರ ಎಂದು ನಂಬಲಾಗಿದೆ.
ರವ ಅಪ್ಪಂ (Rava appam)
ದಕ್ಷಿಣ ಭಾರತದ ಆಹಾರವನ್ನು ಯಾರು ಇಷ್ಟಪಡುವುದಿಲ್ಲ ಹೇಳಿ? ದೋಸೆ, ಇಡ್ಲಿ, ಸಾಂಬಾರ್, ಉತ್ತಪಂ ಉತ್ತರ ಭಾರತದಲ್ಲಿ ಭಾರಿ ಜನಪ್ರಿಯತೆ ಗಳಿಸಿದೆ, ಹಾಗಾಗಿ ರವಾ ಅಪ್ಪಂ ಕೂಡ ಈ ವರ್ಷ ಟಾಪ್ ಸರ್ಚ್ ಫುಡ್ ನಲ್ಲಿತ್ತು. ರವಾ ಅಪ್ಪಂ ರುಚಿಕರವಾದ ಚೆಂಡುಗಳಾಗಿದ್ದು, ಇದನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲಾಗುತ್ತದೆ. ಬೆಳಗಿನ ಉಪಾಹಾರಕ್ಕೆ ಇದು ಉತ್ತಮ ಆಯ್ಕೆಯಾಗಿದೆ.
ಆಲೂಗಡ್ಡೆ ಹಾಲು (Potato Milk)
ಇದು 2022 ರಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಮತ್ತೊಂದು ಸಸ್ಯ ಆಧಾರಿತ ಉತ್ಪನ್ನವಾಗಿದೆ. ಹೈನುಗಾರಿಕೆಗೆ ಪರ್ಯಾಯವಾಗಿ ಅನೇಕ ಜನರು ಈ ಸಸ್ಯದ ಹಾಲನ್ನು ಟ್ರೈ ಮಾಡಿದ್ದರು. ಇದು ಕಡಿಮೆ ಪ್ರಮಾಣದ ಸ್ಯಾಚುರೇಟೆಡ್ ಕೊಬ್ಬು ಮತ್ತು ಸಕ್ಕರೆಯನ್ನು ಹೊಂದಿರುತ್ತದೆ ಮತ್ತು ಇದು ಬಾಳಿಕೆ ಕೂಡ ಬರುತ್ತೆ. ಇದು ಕೆನೆಭರಿತ ಸ್ಥಿರ ಮತ್ತು ಅದರ ತಟಸ್ಥ ರುಚಿಯನ್ನು ಹೊಂದಿದ ಹಾಲಾಗಿದೆ. ಇದು ಮುಂದಿನ ವರ್ಷವೂ ಟ್ರೆಂಡ್ ನಲ್ಲಿರಬಹುದು.
ಅಟುಕಲ್ ಸೂಪ್ (goat leg soup)
ಅಟುಕಾಲ್ ಸೂಪ್ ಅಥವಾ ಮೇಕೆಯ ಕಾಲು ಸೂಪ್ ಅನ್ನು ನಿಧಾನಗತಿಯ ಅಡುಗೆ ವಿಧಾನದ ಮೂಲಕ ಬಹಳ ಸಾಂಪ್ರದಾಯಿಕ ರೀತಿಯಲ್ಲಿ ಬೇಯಿಸಲಾಗುತ್ತದೆ. ಸಾಂಪ್ರದಾಯಿಕವಾಗಿ,ಈ ಸೂಪ್ ನ್ನು ಒಲೆಯ ಮೇಲೆ ರಾತ್ರಿಯಿಡೀ ಇರಿಸಲಾದ ಮಣ್ಣಿನ ಮಡಕೆಯಲ್ಲಿ ತಯಾರಿಸಲಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಚಳಿಗಾಲದಲ್ಲಿ ಮೂಳೆಯ ಬಲಕ್ಕಾಗಿ ವಿಶೇಷವಾಗಿ ಇದನ್ನು ಕುಡಿಯಲಾಗುತ್ತದೆ. ಇದರ ಪೋಷಕಾಂಶಗಳು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಸಹ ಸುಧಾರಿಸುತ್ತವೆ ಎಂದು ನಂಬಲಾಗಿದೆ.
ಬೆಂಟೋ ಕೇಕ್ (Bento cake)
ಈ ವರ್ಷ ಈ ಕೇಕ್ ಬಗ್ಗೆ ನೀವು ಸಾಕಷ್ಟು ಕೇಳಿರಬಹುದು, ಅಲ್ವಾ? ಈ ಬೆಂಟೋ ಕೇಕ್ ಗಳು ಯಾವುವು ಎಂದು ನಿಮಗೆ ತಿಳಿದಿದೆಯೇ? ಬೆಂಟೋ ಕೇಕ್ ಗಳು ಕೊರಿಯನ್ ಕೇಕ್ ಗಳಾಗಿವೆ, ಅವು ತಡವಾಗಿ ಟ್ರೆಂಡ್ ಸೃಷ್ಟಿಸಿವೆ. ಇದು ತುಂಬಾ ಪುಟ್ಟದಾದ ಕೇಕ್ ಆಗಿದೆ. ಅವುಗಳನ್ನು ಲಂಚ್ ಬಾಕ್ಸ್ ಕೇಕ್ ಎಂದೂ ಕರೆಯಲಾಗುತ್ತದೆ. ಈ ಸಣ್ಣ ಮಿನಿಮಲಿಸ್ಟ್ ಕೇಕ್ ಗಳು 2 ರಿಂದ 4 ಇಂಚು ಉದ್ದ ಮತ್ತು 300 ರಿಂದ 350 ಗ್ರಾಂ ತೂಗುತ್ತವೆ.
ಚಿಲ್ಲಿ ಉಪ್ಪಿನಕಾಯಿ (Chilly Pickle)
ಪ್ರತಿಯೊಂದು ಪ್ರದೇಶದಲ್ಲೂ ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ತಯಾರಿಸಲಾಗುತ್ತದೆ ಮತ್ತು ತಿನ್ನಲಾಗುತ್ತದೆ. ಮಾವಿನಕಾಯಿ ಉಪ್ಪಿನಕಾಯಿ ಹೆಚ್ಚು ಇಷ್ಟವಾಗಿದ್ದರೂ, ಈ ವರ್ಷ ಮೆಣಸಿನಕಾಯಿ ಉಪ್ಪಿನಕಾಯಿ ಬಹಳಷ್ಟು ಜನಪ್ರಿಯತೆ ಪಡೆಯಿತು. ಹೌದು, ಮೆಣಸಿನಕಾಯಿ ಉಪ್ಪಿನಕಾಯಿ ಈ ವರ್ಷ ಟಾಪ್ ಸರ್ಚ್ ನಲ್ಲಿತ್ತು. ಜನರು ಅದನ್ನು ಹೇಗೆ ತಯಾರಿಸುವುದು ಎಂದು ಸಹ ಕಲಿತರು. ಹಸಿರು ಮೆಣಸಿನಕಾಯಿ ಉಪ್ಪಿನಕಾಯಿಗಳನ್ನು ಈಗ ಕೇವಲ ಚೋಲೆ-ಭತುರೆಯೊಂದಿಗೆ ಮಾತ್ರವಲ್ಲ, ಹಾಗೆ ತಿನ್ನಲು ಸಹ ಜನ ಇಷ್ಟ ಪಡ್ತಾರೆ.