Kitchen Tips: 5 ನಿಮಿಷದಲ್ಲಿ 20ಕ್ಕೂ ಅಧಿಕ ಪುರಿ ಲಟ್ಟಿಸೋ ಟೈಮ್ ಉಳಿಸುವ ಸೂಪರ್ ಟಿಪ್ಸ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು, ಕಡಿಮೆ ಸಮಯದಲ್ಲಿ 20ಕ್ಕೂ ಅಧಿಕ ಪುರಿಗಳನ್ನು ಮಾಡುವ ಸುಲಭ ತಂತ್ರವನ್ನು ತೋರಿಸುತ್ತದೆ. ಬಟರ್ ಪೇಪರ್ ಮತ್ತು ಪಾತ್ರೆಯನ್ನು ಬಳಸಿ, ಒಂದೇ ಬಾರಿಗೆ ಹಲವು ಪುರಿಗಳನ್ನು ಲಟ್ಟಿಸುವ ಈ ವಿಧಾನದಿಂದ ಅಡುಗೆ ಸಮಯ ಉಳಿತಾಯವಾಗುತ್ತದೆ.

ಕಡಿಮೆ ಸಮಯದಲ್ಲಿ ಅಡುಗೆ
ಇಂದು ಯಾರ ಬಳಿಯಲ್ಲಿಯೂ ಸಮಯ ಇಲ್ಲ. ರುಚಿಯಾಗಿ ಅಡುಗೆ ಮಾಡಿಕೊಳ್ಳಲಾಗದೇ ಆನ್‌ಲೈನ್ ಆಪ್ ಬಳಸಿ ಆಹಾರವನ್ನು ಆರ್ಡರ್ ಮಾಡಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕಡಿಮೆ ಸಮಯದೊಳಗೆ ಹೇಗೆ ಅಡುಗೆ ಮಾಡಬೇಕು ಎಂಬುದರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ.
20ಕ್ಕೂ ಅಧಿಕ ಪುರಿಗಳನ್ನು ಲಟ್ಟಿಸಿ
ಇಂದು ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಐದು ನಿಮಿಷದಲ್ಲಿ 20ಕ್ಕೂ ಅಧಿಕ ಪುರಿಗಳನ್ನು ಲಟ್ಟಿಸಬಹುದು. ಇದರಿಂದ ಸಮಯ ಉಳಿತಾಯದ ಜೊತೆಯಲ್ಲಿ ಶುದ್ಧವಾದ ಅಡುಗೆ ಮಾಡಬಹುದು ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಹಾಗಾದ್ರೆ ಕಡಿಮೆ ಸಮಯದಲ್ಲಿ ಅತ್ಯಧಿಕ ಪುರಿ ಮಾಡೋದು ಹೇಗೆ ಎಂದು ನೋಡೋಣ ಬನ್ನಿ.
ವಿಧಾನ 1
ಮೊದಲಿಗೆ ಪುರಿ ಮಾಡಲು ನಿಮಗೆ ಬೇಕಾದಷ್ಟು ಹಿಟ್ಟನ್ನು ಕಲಿಸಿಕೊಳ್ಳಿ. ಹಿಟ್ಟು ಕಲಿಸಿದ ನಂತರ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಏಕಕಾಲದಲ್ಲಿ ಹೆಚ್ಚು ಪುರಿ ತಯಾರಿಸಲು ನಿಮಗೆ ಬಟರ್ ಪೇಪರ್ ಬೇಕಾಗುತ್ತದೆ.
ವಿಧಾನ 2
ಮೊದಲಿಗೆ ಒಂದು ಬಟರ್ ಪೇಪರ್ ಕಿಚನ್ ಕಟ್ಟೆ ಮೇಲೆ ಇರಿಸಿಕೊಳ್ಳಿ. ಈ ಪೇಪರ್ ಮೇಲೆ ಮಾಡಿಟ್ಟುಕೊಂಡಿರುವ ನಾಲ್ಕು ಉಂಡೆಗಳನ್ನು ಇಟ್ಟುಕೊಳ್ಳಿ. ಉಂಡೆಗಳನ್ನು ಇರಿಸುವಾಗ ಒಂದು ಮತ್ತೊಂದರ ನಡುವೆ ಗ್ಯಾಪ್ ಇರುವಂತೆ ನೋಡಿಕೊಳ್ಳಿ.
ಇದನ್ನೂ ಓದಿ: Vastu Tips: ಪುರಿ ತಯಾರಿಸುವಾಗ & ಬಡಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ
ವಿಧಾನ 3
ತದನಂತರ ನಾಲ್ಕು ಹಿಟ್ಟಿನ ಉಂಡೆ ಇರಿಸಿದ ಬಳಿಕ ಅದರ ಮೇಲೆ ಮತ್ತೊಂದು ಬಟರ್‌ಪೇಪರ್ ಹಾಕಿ. ಈಗ ಮತ್ತೆ ನಾಲ್ಕು ಹಿಟ್ಟಿನ ಉಂಡೆ ಇರಿಸಬೇಕು. ಹೀಗೆ ಒಟ್ಟು ಐದು ಪೇಪರ್ ಬಳಸಿಕೊಂಡು ಹಿಟ್ಟಿನ ಉಂಡೆಗಳನ್ನು ಒಂದರ ಮೇಲೊಂದರಂತೆ ಇರಿಸಿಕೊಳ್ಳಬೇಕು.
ಇದನ್ನೂ ಓದಿ: ಚಪಾತಿ ಹಿಟ್ಟನ್ನ ಕೆಡದಂತೆ ಫ್ರಿಡ್ಜ್‌ನಲ್ಲಿ ಎಷ್ಟು ದಿನ ಇಡ್ಬೋದು?, ಹೀಗಿಟ್ರೆ ಸೇಫ್!
ವಿಧಾನ 4
ಕೊನೆಯದಾಗಿ ಇದರ ಮೇಲೆ ಅಗಲವಾದ ಪಾತ್ರೆಯನ್ನು ಇಟ್ಟುಕೊಳ್ಳಿ. ತದನಂತರ ಪಾತ್ರೆ ಮೇಲೆ ಭಾರ ಹಾಕಿ ಒತ್ತಬೇಕು. ನಂತರ ಪಾತ್ರೆ ತೆಗೆದು ಒಂದೊಂದೇ ಬಟರ್ ಪೇಪರ್ ತೆಗೆದ್ರೆ ಲಟ್ಟಿಸಿದ ಪುರಿ ನಿಮಗೆ ಸಿದ್ಧವಾಗುತ್ತದೆ. ವೈರಲ್ ವಿಡಿಯೋ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ. VIDEO
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

