ಕುರ್ಕುರೆ, ಮ್ಯಾಗಿ, ಪಾಪಿನ್ಸ್ ತರ ಮೇಕಪ್ ಮಾಡಿದ್ರೆ ಹೀಗಿರುತ್ತೆ ನೋಡಿ
ಕುರ್ಕುರೆ, ಮ್ಯಾಗಿ, ಪಾಪಿನ್ಸ್ ತರ ಮೇಕಪ್ ಮಾಡ್ಕೊಂಡ್ರೆ ಹೇಗಿರ್ಬೋದು..? ಸ್ನ್ಯಾಕ್ಸ್ ಪವರ್ ನೋಡಿ ಈ ತರ ಮೇಕಪ್ ಮಾಡ್ಕೋಬೇಕು ಅಂತ ಯಾವತ್ತಾದ್ರೂ ಅನಿಸಿದ್ಯಾ..? ಇವರಿಗೆ ಅನಿಸಿದೆ. ಮತ್ತು ಅದನ್ನವರು ವರ್ಕೌಟ್ ಮಾಡಿದ್ದಾರೆ. ಹೇಗೆ ಕಾಣಿಸ್ತಾರೆ ನೋಡಿ
ಸೋಷಿಯಲ್ ಮೀಡಿಯಾ ಮೂಲಕ ಹೊಸ ಹೊಸ ಐಡಿಯಾಗಳು ಸಿಗುತ್ತಲೇ ಇರುತ್ತವೆ. ಚಿತ್ರ ವಿಚಿತ್ರ ಅಂದ್ರೂ ಜನರನ್ನು ರಂಜಿಸುವ, ಎಂಟರ್‌ಟೈನ್ ಮಾಡುವ ವಿಷಯಗಳಿಗೆ ಬರವಿಲ್ಲ. ಲಾಕ್‌ಡೌನ್ ನಂತರವಂತೂ ಜನರು ಎಕ್ಸಪರಿಮೆಂಟ್‌ಗಳಲ್ಲೇ ಬ್ಯಸಿಯಾಗಿದ್ದಾರೆ. ಇಲ್ಲೊಬ್ಬಾಕೆ ಏನ್ ಮಾಡಿದ್ದಾರೆ ನೋಡಿ...
20 ವರ್ಷದ ದಿವ್ಯ ಪ್ರೇಮಚಂದ್ ಅನ್ನೋ ಯುವತಿ ಇನ್‌ಸ್ಟಾ ಖಾತೆ ತುಂಬಾ ತಿನಿಸುಗಳೇ ತುಂಬಿವೆ. ಅದೂ ಮೇಕಪ್ ರೂಪದಲ್ಲಿ.
ಸ್ನ್ಯಾಕ್ಸ್ ರೂಪದಲ್ಲಿ ಸಿಕ್ಕಾಪಟ್ಟೆ ಮೇಕಪ್ ಎಕ್ಸಪರಿಮೆಂಟ್ಸ್ ಮಾಡಲಾಗಿದೆ.
ತನ್ನ ಡಿಫರೆಂಟ್ ಲುಕ್‌ನಿಂದ ಸದ್ಯ ಈಕೆ ನೆಟ್ಟಿಗರ ಸರ್ಚ್ ವಿಷಯವಾಗಿದ್ದಾಳೆ. ಮೇಕಪ್ ಪ್ರಿಯರಂತೂ ಈಕೆ ಮಾಡಿರುವ ಕ್ರಿಯೇಟಿವಿಟಿಯನ್ನು ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದಾರೆ. ಮ್ಯಾಗಿ. ಹಜ್ಮೋಲ್, 50-50 ಬಿಸ್ಕತ್, ಲೇಸ್ ಸೇರಿ ಹಲವಾರು ಸ್ನ್ಯಾಕ್ಸ್ ಇವಳ ಮುಖದಲ್ಲಿ ಕೂತಾಗಿದೆ.
ಹಾಟ್ & ಸ್ಪೈಸಿ ಕುರ್ಕುರೆ ಲುಕ್
ಖಾರ ಖಾರ - ಸಾಲ್ಟಿ ಸಾಲ್ಟಿ ಹಜ್ಮೋಲ್ ಲುಕ್
2 ಮಿನ್ಯುಟ್ಸ್ ಮ್ಯಾಗಿ ಮುಖದ ಮೇಲೆ ಮೂಡಲು 2 ಮಿನ್ಯುಟ್ಸ್ ಖಂಡಿತಾ ಸಾಲದು
ಪಾಪಿನ್ಸ್‌ನ ರಂಗು ನಾಲಗೆಯಲ್ಲಷ್ಟೇ ಅಲ್ಲ ಮುಖದ ಮೇಲೂ
50-50 ಬಿಸ್ಕತ್ ಬಣ್ಣ ಐಶ್ಯಾಡೋ
ಪಾಸ್ ಪಾಸ್ ಕೈಯಲ್ಲಿ ಮತ್ತು ಮುಖದಲ್ಲಿ
ಬ್ಲೂ ಲೇಸ್ ತಿನ್ನೋಕಷ್ಟೇ ಅಲ್ಲ, ಮೇಕಪ್‌ಗೂ ಚಂದ