ಬಾವಲಿ ಮಾತ್ರವಲ್ಲ ಆನೆಯನ್ನೂ ತಿಂತಾರೆ..! ಜಗತ್ತಿನಾದ್ಯಂತ ಜನ ಸೇವಿಸೋ ಪ್ರಾಣಿಗಳಿವು..!
ಕರವಾಳಿಗರಿಗೆ ಮೀನು ಇಷ್ಟವಾದಂತೆ, ಇನ್ನೊಂದಷ್ಟು ಜನರಿಗೆ ಮಟನ್, ಚಿಕನ್ ಇಷ್ಟ. ಪುಟ್ಟ ದೇಶದಲ್ಲೇ ವೈವಿಧ್ಯ ನಾನ್‌ವೆಜ್ ಆಹಾರ ಸೇವಿಸೋ ಜನರಿರುವಾಗ ಜಗತ್ತಿನಾದ್ಯಂತ ಹೇಗಿರಬಹುದು ಆಹಾರ ಕ್ರಮ..? ಮೀನು, ಕೋಳಿ, ಕುರಿಯಲ್ಲದೆ ಬೇರೆ ಬೇರೆ ಪ್ರಾಣಿಗಳನ್ನು ಫೇವರೇಟ್ ಆಹಾರ ಮಾಡಿಕೊಂಡವರು ಜಗತ್ತಿನಲ್ಲಿದ್ದಾರೆ.
ಜಗತ್ತಿನಾದ್ಯಂತ ಇರುವ ಶಾಖಾಹಾರಿಗಳು ವಿವಿಧ ನಾನ್‌ವೆಜ್ ವಿಧಗಳನ್ನು ಸೇವಿಸುತ್ತಾರೆ. ಕರವಾಳಿಗರಿಗೆ ಮೀನು ಇಷ್ಟವಾದಂತೆ, ಇನ್ನೊಂದಷ್ಟು ಜನರಿಗೆ ಮಟನ್, ಚಿಕನ್ ಇಷ್ಟ.
ಪುಟ್ಟ ದೇಶದಲ್ಲೇ ವೈವಿಧ್ಯ ನಾನ್‌ವೆಜ್ ಆಹಾರ ಸೇವಿಸೋ ಜನರಿರುವಾಗ ಜಗತ್ತಿನಾದ್ಯಂತ ಹೇಗಿರಬಹುದು ಆಹಾರ ಕ್ರಮ..? ಮೀನು, ಕೋಳಿ, ಕುರಿಯಲ್ಲದೆ ಬೇರೆ ಬೇರೆ ಪ್ರಾಣಿಗಳನ್ನು ಫೇವರೇಟ್ ಆಹಾರ ಮಾಡಿಕೊಂಡವರು ಜಗತ್ತಿನಲ್ಲಿದ್ದಾರೆ.
ಹಿಂದಿನ ಕಾಲದಲ್ಲಿ ಕೃಷಿಯ ಅರಿವಿಲ್ಲದ ಜನ ಬೇಟೆಯಾಡಿ ತಿನ್ನುತ್ತಿದ್ದರು.
ಬೇಟೆಯಾಡಿ ಹಿಡಿಯಲು ಸಾಧ್ಯವಿರುವ ಎಲ್ಲ ಪ್ರಾಣಿಯೂ ಆಹಾರವೆಂದೇ ಪರಿಗಣಿಸಲ್ಪಡುತ್ತಿತ್ತು. ಹಾಗಾಗಿಯೇ ಜಗತ್ತಿನಾದ್ಯಂತ ವಿಚಿತ್ರ ಅನಿಸೋತರ ಜನರ ಆಹಾರ ಆಯ್ಕೆಗಳಿವೆ.
ಮಿಡತೆ ಅಥವಾ ಹುಲ್ಲುಕುದುರೆ: ಮಿಡತೆ ಅನೇಕ ವಿಧಗಳಲ್ಲಿ ಸೇವಿಸಬಹುದು. ಹುರಿದ, ಹೊಗೆಯಾಡಿಸಿದ ಅಥವಾ ಸುಟ್ಟುಕೊಂಡೂ ಮಿಡತೆ ತಿನ್ನುತ್ತಾರೆ. ಅವು ಭಾರೀ ರುಚಿಕರವೆಂದು ಪರಿಗಣಿಸಲಾಗುತ್ತದೆ. ಮಿಡತೆಯ ಕಾಲುಗಳು ಮತ್ತು ರೆಕ್ಕೆಗಳನ್ನು ತೆಗೆದು ತಿನ್ನುವ ಮೊದಲು ಚೆನ್ನಾಗಿ ಬೇಯಿಸುತ್ತಾರೆ. ಮಿಡತೆಯಲಲ್ಲಿ ಯಾವುದಾದರೂ ರಾಸಾಯನಿಕ ಸೇರಿದ್ದರೆ ಎಂಬ ಮುಂಜಾಗೃತೆಯಿಂದ ಹೀಗೆ ಮಾಡಲಾಗುತ್ತದೆ. ಇವುಗಳನ್ನು ಸಾಮಾನ್ಯವಾಗಿ ಮೆಕ್ಸಿಕೊ, ಥೈಲೆಂಡ್ ಮತ್ತು ಮಧ್ಯ ಅಮೆರಿಕಾದಲ್ಲಿ ಜನ ಸೇವಿಸುತ್ತಾರೆ.
ಅಲಿಗೇಟರ್ - ಮೊಸಳೆಯಂತಹ ಜೀವಿ : ಅಲಿಗೇಟರ್ ಮಾಂಸವನ್ನು ದಕ್ಷಿಣ ಅಮೆರಿಕದ ವಿವಿಧ ರೆಸಿಪಿಗಳಲ್ಲಿ ಬಳಸಲಾಗುತ್ತದೆ. ಅಲಿಗೇಟರ್ ಮೊಟ್ಟೆಗಳು ಸಹ ಬಳಸಲಾಗುತ್ತದೆ. ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕೊಬ್ಬಿನ ಸಂಯೋಜನೆ ಇರುವ ಅಲಿಗೇಟರ್ ಮಾಂಸ ಆರೋಗ್ಯಕರಎನ್ನಲಾಗುತ್ತದೆ. ಇದು ಸುವಾಸನೆ ಮತ್ತು ಮೃದುವಾದ ಮಾಂಸಾಹಾರ.
ಗುನಿಯಾ ಪಿಗ್: ಸಣ್ಣ ಗಾತ್ರದ ಹಂದಿ ಜಾತಿಯ ಈ ಪ್ರಾಣಿಯನ್ನು ರೋಸ್ಟ್ ಮಾಡಿ ಬಳಸುತ್ತಾರೆ. ದಕ್ಷಿಣ ಅಮೆರಿಕದಲ್ಲಿ ಇದರಿಂದ ಸಂಪ್ರದಾಯಿಕ 'ಕೈ' ಆಹಾರ ತಯಾರಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಕೈ ಆಹಾರವನ್ನು ಮೇಲ್ವರ್ಗದವರಷ್ಟೇ ಸೇವಿಸುತ್ತಿದ್ದರು. ಈಗ ಈ ಪ್ರಾಣಿಯ ಆಹಾರವನ್ನು ಅತ್ಯಂತ ಪೌಷ್ಟಿಕಾಂಶವಿರುವ ಆಹಾರವೆಂದು ಪರಿಗಣಿಸಲಾಗುತ್ತದೆ.
ಕೋಬ್ರಾ: ಈ ಹಾವಿನ ಮಾಂಸವನ್ನು ವಿಯೆಟ್ನಾಂನ ಅನೇಕ ಭಾಗಗಳಲ್ಲಿ ಸೇವಿಸಲಾಗುತ್ತದೆ. ಸ್ನೇಕ್ ಎಗ್ ಸೂಪ್, ಗ್ರಿಲ್ಡ್ ಸ್ನೇಕ್ ರಿಬ್ಸ್, ಕ್ರಸ್ಪಿ ಸ್ನೇಕ್ ಸ್ಕಿನ್ ಬಳಸಲಾಗುತ್ತದೆ. ಹಾವಿನ ರಕ್ತದ ಜೊತೆ ಅಕ್ಕಿ ಮತ್ತು ವೈನ್ ಬೆರೆಸಿ ಸೇವಿಸಲಾಗುತ್ತದೆ. ವಿಯೆಟ್ನಾಂ ಜನರು ಹಾವು ಅಂತಿಮ ಕಾಮೋತ್ತೇಜಕ ಎಂದು ನಂಬುತ್ತಾರೆ ಮತ್ತು ಪುರುಷರು ತಮ್ಮ ಶಕ್ತಿ ಹೆಚ್ಚಿಸಲು ಇದನ್ನು ಸೇವಿಸುತ್ತಾರೆ.
ಜೇಡ: ಜೇಡಗಳು ಕೆಲವರ ಪಾಲಿಗೆ ಭಯ ಅನಿಸಿದರೆ ಇನ್ನೊಂದೆಡೆ ಅವು ಸವಿಯಾದ ಆಹಾರ. ಇದು ಕಾಂಬೋಡಿಯಾದ ಸ್ಕುವಾನ್‌ನಲ್ಲಿ ತಿನ್ನಲಾಗುವ ಲಘು ಆಹಾರ. ಅಲ್ಲಿನ ಜನರ ಕಾಮನ್ ಆಯ್ಕೆಯಾಗಿದೆ ಈ ಆಹಾರ.
ಆನೆ: ಆನೆಯ ಪ್ರಬೇಧವನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. ಕ್ಯಾಮರೂನ್, ಮಧ್ಯ ಆಫ್ರಿಕಾ, ಕಾಂಗೋದಲ್ಲಿ ಎಲ್ಲಾ ಜಾತಿಯ ಆನೆಗಳನ್ನು ಅವುಗಳ ಮಾಂಸಕ್ಕಾಗಿಯೇ ಬೇಟೆಯಾಡಲಾಗುತ್ತದೆ. ಕಳ್ಳ ಬೇಟೆಗಾರರು ದಂತ ಬೇಟೆಯ ಸಮಯದಲ್ಲಿ, ಮಾಂಸವನ್ನು ಮಾರಾಟ ಅಥವಾ ಬೇಟೆಯಾಡುವ ತಂಡಕ್ಕೆ ಆಹಾರಕ್ಕಾಗಿ ಬಳಸುತ್ತಾರೆ.
ಇಲಿ: ಇಲಿಗಳು ಅಂದ್ರೆ ಭಾರತದ ಅಡುಗೆ ಮನೆಗಳ ದೊಡ್ಡ ವೈರಿ. ಅವುಗಳನ್ನು ಭಾರತ, ಚೀನಾ, ಇಂಡೋನೇಷ್ಯಾ, ಘಾನಾ, ಥೈಲ್ಯಾಂಡ್ ಮುಂತಾದ ಕೆಲವು ಭಾಗಗಳಲ್ಲಿ ಸೇವಿಸಲಾಗುತ್ತದೆ. ಭಾರತದ ಮಿಶ್ಮಿ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಆಹಾರಕ್ರಮಕ್ಕೆ ಮಹಿಳೆಯರು ಮೀನು, ಹಂದಿಮಾಂಸ, ಕಾಡು ಪಕ್ಷಿಗಳು ಮತ್ತು ಇಲಿಗಳನ್ನು ಹೊರತುಪಡಿಸಿ ಯಾವುದೇ ಮಾಂಸವನ್ನು ತಿನ್ನಬಾರದು ಎಂಬ ಕ್ರಮವಿದೆ.
ಗೊರಿಲ್ಲಾ: ಆಫ್ರಿಕಾದಲ್ಲಿ ಬಹಳ ಹಿಂದಿನ ಕಾಲದಿಂದಲೂ ಗೊರಿಲ್ಲಾ ತಿನ್ನುತ್ತಾರೆ. ಈ ಆಹಾರ ಪದ್ಧತಿ ಈಗಲೂ ಇದೆ. ಆದರೆ ವಿಜ್ಞಾನಿಗಳು ಕೋತಿಗಳು ಮತ್ತು ಮಂಗಗಳನ್ನು ಎಚ್‌ಐವಿ ವೈರಸ್ ಹೊಂದುವುದರಿಂದ ತಿನ್ನುವ ಬಗ್ಗೆ ಎಚ್ಚರಿಕೆ ನೀಡಿದ ನಂತರ, ಗೊರಿಲ್ಲಾ ತಿನ್ನುವ ಅಭ್ಯಾಸ ಕಡಿಮೆಯಾಗಿದೆ.