ಜೀವನ ಸುಲಭಗೊಳಿಸುವ ಸರಳ ಕಿಚನ್ ಹ್ಯಾಕ್ಸ್!
ಕೆಲವು ಅಡುಗೆ ಮನೆಯಲ್ಲಿ ಆವಾಂತರಗಳು ಮನಸ್ಸಿಗೆ ಸಿಕಾಪಟ್ಟೆ ಕಿರಿಕಿರಿ ಉಂಟು ಮಾಡುತ್ತವೆ. ಅಡುಗೆ ಮಾಡುವುದಕ್ಕಿಂತ ಹೆಚ್ಚಿನ ಸಮಯ ತರಕಾರಿ ಹೆಚ್ಚುವುದು ಮತ್ತು ಕ್ಲೀನ್ ಮಾಡುವುದರಲ್ಲಿ ಕಳೆಯ ಬೇಕಾಗುತ್ತದೆ. ಈ ರಗಳೆಗಳನ್ನು ನಿವಾರಿಸಿಕೊಂಡು ಜೀವನ ಸುಲಭಗೊಳಿಸಲು ಇಲ್ಲಿದೆ ಸರಳ ಕಿಚನ್ ಹ್ಯಾಕ್ಸ್.
ಚಾಪ್ ಬೋರ್ಡ್ ಜಾರದಂತೆ ತಡೆಯಲು ಪೇಪರ್ ಟವೆಲ್‌ಗಳನ್ನು ಕೆಳಗೆ ಇರಿಸಿ.
ಚಾಕುಗಳು ಮತ್ತು ಫೋರ್ಕ್‌ಗಳಿಂದ ಗ್ರೀಸ್ ಕಲೆಗಳನ್ನು ತೆಗೆಯಲು ನಿಂಬೆ ಸಿಪ್ಪೆ ಬಳಸಿ.
ಚೆರ್ರಿ ಮತ್ತು ದ್ರಾಕ್ಷಿಗಳ ಮದ್ಯೆ ಸ್ಟ್ರಾ ಸೇರಿಸುವ ಮೂಲಕ ಹಣ್ಣುಗಳನ್ನು ಡಿ-ಸೀಡ್ ಮಾಡಬಹುದು.
ಪನ್ನೀರ್ ಅನ್ನು ಕುದಿಯುವ ನೀರಿನಲ್ಲಿ ನೆನೆಸಿ ಉಪಯೋಗಿಸಿದರೆ ಸಾಫ್ಟ್ ಆಗಿರುತ್ತದೆ.
ಗಾಜನ್ನು ವಿನೆಗರ್ ಮತ್ತು ನೀರಿನ ಮಿಶ್ರಣದಲ್ಲಿ ನೆನೆಸಿ ತೊಳೆದರೆ ಹೊಸದರಂತೆ ಪಳ ಪಳ ಹೊಳೆಯುತ್ತದೆ.
ನಿಂಬೆ ಮತ್ತು ಕಿತ್ತಳೆ ಹಣ್ಣನ್ನು ಸುಮಾರು 5-7 ಸೆಕೆಂಡುಗಳ ಕಾಲ ಮೈಕ್ರೊವೇವ್ ಮಾಡಿ ನಂತರ ಅದನ್ನು ಹಿಂಡಿ.
ಒಂದು ಬಟ್ಟಲಿನಲ್ಲಿ ಬೆಳ್ಳುಳ್ಳಿಯನ್ನು ಜೋರಾಗಿ ಅಲುಗಾಡಿಸಿ ಆಗ ಈಸಿಯಾಗಿ ಸಿಪ್ಪೆ ಬೆರೆಯಾಗುತ್ತದೆ.