ಮೊಳಕೆಯೊಡೆದ ಆಲೂ ಅಪಾಯ... ಸೇವಿಸಿದ್ರೆ ಏನಾಗುತ್ತೆ ಗೊತ್ತಾ?
ಶಾಪಿಂಗ್ ಮಾಡುವಾಗ ರಿಯಾಯಿತಿ ದರದಲ್ಲಿ, ಆಫರ್ ಆಗಿ ನೀಡುವ ವಸ್ತುಗಳನ್ನು ಕೊಂಡುಕೊಳ್ಳುವ ಅವಕಾಶವನ್ನು ನಾವು ಯಾವತ್ತೂ ಮಿಸ್ ಮಾಡೋದಿಲ್ಲ. ಅದು ಬಟ್ಟೆ, ಮನೆಯ ವಸ್ತುಗಳು ಅಥವಾ ಕಿರಾಣಿ ಶಾಪಿಂಗ್ ಆಗಿರಲಿ ಎಲ್ಲಾ ಖರೀದಿ ಮಾಡುತ್ತೇವೆ. ಕಿರಾಣಿ ಶಾಪಿಂಗ್ ಮಾಡುವಾಗ, ಆಲೂಗಡ್ಡೆಯ ದೊಡ್ಡ ಚೀಲ ಕಡಿಮೆ ಇದ್ದರೆ ಖರೀದಿಸುತ್ತೇವೆ. ಆದರೆ ದೀರ್ಘಕಾಲ ಬಳಸದೆ ಮತ್ತು ಗಮನಿಸದೆ ಬಿಟ್ಟಾಗ, ಈ ಆಲೂಗಡ್ಡೆ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುತ್ತವೆ ಹಾಗು ಮೊಳಕೆಯೊಡೆಯುತ್ತದೆ. ಆ ಸಮಯದಲ್ಲಿ, ನಾವು ಆಗಾಗ್ಗೆ ನಮ್ಮನ್ನು ಪ್ರಶ್ನಿಸಿಕೊಳ್ಳುತ್ತೇವೆ, ಅದು ಇನ್ನೂ ತಿನ್ನಲು ಸುರಕ್ಷಿತವಾಗಿದೆಯೇ? ನಾವು ಇನ್ನೂ ಇದನ್ನು ಅಡುಗೆಗೆ ಬಳಸಬಹುದೇ?
ಆಲೂಗಡ್ಡೆ ಏಕೆ ಮೊಳಕೆಯೊಡೆಯುತ್ತದೆ?
ಆಗಾಗ್ಗೆ, ಆಲೂಗಡ್ಡೆ ಮೊಳಕೆಯೊಡೆಯಲು ಕಾರಣ ಸರಿಯಾಗಿ ಸ್ಟೋರ್ ಮಾಡಿರದೆ ಇರೋದು. .ಅವುಗಳಿಗೆ ಬೇಕಾಗಿರುವುದು ಕತ್ತಲೆ ಮತ್ತು ತೇವಾಂಶ. ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆಯ ಅಮೇರಿಕನ್ ಸಂಶೋಧನಾ ಸಂಸ್ಥೆಯ ವಿಜ್ಞಾನಿ ರಿಚ್ ನೋವಿ ಹೇಳುವಂತೆ ಆಲೂಗಡ್ಡೆ ಸ್ಥಳೀಯ ಸಸ್ಯ ಹಾರ್ಮೋನುಗಳಿಂದ ನಿರ್ವಹಿಸಲ್ಪಡುವ ಅಂತರ್ಗತ ನೈಸರ್ಗಿಕ ಸುಪ್ತತೆಯನ್ನು ಹೊಂದಿದೆ.
ಟ್ಯೂಬರ್ನಲ್ಲಿ ಹಾರ್ಮೋನುಗಳ ಸಾಂದ್ರತೆಯು ಕಾಲ ಕಳೆದ ಹಾಗೆ ಕಡಿಮೆಯಾಗುತ್ತದೆ, ಇದು ಗೆಡ್ಡೆಗಳು ಮೊಳಕೆಯೊಡೆಯಲು ಅನುವು ಮಾಡಿಕೊಡುತ್ತದೆ. ಹೊಸ ಸಸ್ಯಗಳನ್ನು ಉತ್ಪಾದಿಸಲು ಆಲೂಗಡ್ಡೆ ಅಂತಿಮವಾಗಿ ಗೆಡ್ಡೆಗಳಿಂದ ಸಂತಾನೋತ್ಪತ್ತಿ ಮಾಡುತ್ತದೆ.
ಮೊಳಕೆಯೊಡೆದ ಆಲೂಗಡ್ಡೆ ತಿನ್ನಲು ಮತ್ತು ಬೇಯಿಸಲು ಸುರಕ್ಷಿತವಾಗಿದೆಯೇ?
ಇಲ್ಲ, ಅವು ಸೇವಿಸಲು ಸುರಕ್ಷಿತವಲ್ಲ. ನ್ಯಾಷನಲ್ ಕ್ಯಾಪಿಟಲ್ ಪಾಯ್ಸನ್ ಸೆಂಟರ್ (ಅಮೇರಿಕನ್ ಅಸೋಸಿಯೇಷನ್ ಆಫ್ ಪಾಯ್ಸನ್ ಕಂಟ್ರೋಲ್ ಸೆಂಟರ್ಗಳಿಂದ ಮಾನ್ಯತೆ ಪಡೆದ ಸಂಸ್ಥೆ) ಪ್ರಕಾರ, ಮೊಳಕೆಯೊಡೆದ ಅಥವಾ ಹಸಿರಾಗಿರುವ ಆಲೂಗಡ್ಡೆಯನ್ನು ತಿನ್ನದಿರುವುದು ಉತ್ತಮ.
ಅನೇಕ ಜನರು ಮತ್ತು ವೆಬ್ಸೈಟ್ಗಳು ಮೊಳಕೆ ತೆಗೆಯಬಹುದು ಮತ್ತು ನಂತರ ಆಲೂಗಡ್ಡೆಯನ್ನು ಸೇವಿಸಬಹುದು ಎಂದು ಸೂಚಿಸಿದರೂ, ಹಾಗೆ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.
ಮೊಳಕೆಯೊಡೆದ ಆಲೂಗಡ್ಡೆ ಏಕೆ ತಿನ್ನಲು ಅಸುರಕ್ಷಿತವಾಗಿದೆ?
ಆಲೂಗಡ್ಡೆ ಎರಡು ಗ್ಲೈಕೊಲ್ಕಾಲಾಯ್ಡ್ ಸಂಯುಕ್ತಗಳ ನೈಸರ್ಗಿಕ ಮೂಲವಾಗಿದೆ- ಸೋಲಾನೈನ್ ಮತ್ತು ಚಾಕೊನೈನ್. ಸಣ್ಣ ಪ್ರಮಾಣದಲ್ಲಿ ಸೇವಿಸಿದಾಗ, ರಕ್ತದಲ್ಲಿ ಸಕ್ಕರೆ, ಮತ್ತು ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಪರಿಣಾಮಗಳಂತಹ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ.
ಆದರೆ , ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದಾಗ ಅವು ವಿಷಕಾರಿಯಾಗಬಹುದು. ಆಲೂಗೆಡ್ಡೆ ಮೊಳಕೆಯೊಡೆಯುತ್ತಿದ್ದಂತೆ, ಅದರ ಗ್ಲೈಕೊಲ್ಕಾಲಾಯ್ಡ್ ಅಂಶವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ಮೊಳಕೆಯೊಡೆದ ಆಲೂಗಡ್ಡೆ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇವುಗಳ ಪ್ರಮಾಣ ಅತಿಯಾಗುತ್ತದೆ.
ಕಡಿಮೆ ಪ್ರಮಾಣದಲ್ಲಿ, ಹೆಚ್ಚುವರಿ ಗ್ಲೈಕೊಲ್ಕಾಲಾಯ್ಡ್ ಸೇವನೆಯು ಹೊಟ್ಟೆ ನೋವು, ಅತಿಸಾರ ಮತ್ತು ವಾಂತಿಗೆ ಕಾರಣವಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಸೇವಿಸಿದಾಗ, ಅವು ಕಡಿಮೆ ರಕ್ತದೊತ್ತಡ, ಜ್ವರ, ತಲೆನೋವು ಮತ್ತು ಕೆಲವು ಸಂದರ್ಭಗಳಲ್ಲಿ ಸಾವಿಗೆ ಕಾರಣವಾಗಬಹುದು.
ಮೊಳಕೆಯೊಡೆಯುವುದನ್ನು ತಪ್ಪಿಸಲು ಆಲೂಗಡ್ಡೆಯನ್ನು ಹೇಗೆ ಸಂಗ್ರಹಿಸುವುದು?
ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅವುಗಳನ್ನು ದಾಸ್ತಾನು ಮಾಡುವುದನ್ನು ತಪ್ಪಿಸುವುದು. ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಅವುಗಳನ್ನು ಖರೀದಿಸಿ.
ಹಾನಿಗೊಳಗಾದ ಆಲೂಗಡ್ಡೆಯನ್ನು ತ್ಯಜಿಸಬೇಕು ಮತ್ತು ಉಳಿದವುಗಳನ್ನು ತಂಪಾದ, ಶುಷ್ಕ ಮತ್ತು ಡಾರ್ಕ್ ಆದ ಸ್ಥಳದಲ್ಲಿ ಸಂಗ್ರಹಿಸಬೇಕು. ಇದಲ್ಲದೆ, ಈರುಳ್ಳಿಯೊಂದಿಗೆ ಇಡಲೇಬೇಡಿ. ಇದರಿಂದ ಆಲೂಗಡ್ಡೆ ವೇಗವಾಗಿ ಮೊಳಕೆಯೊಡಿಯುತ್ತಿದೆ.