ಖಾರದ ರಸಗುಲ್ಲಾ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ!
ರಸಗುಲ್ಲಾ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಗ್ಯಾರಂಟಿ. ಬಿಳಿಯ ಸಾಫ್ಟ್ ಸ್ಪಾಂಜಿ ಈ ಸ್ವೀಟ್ ಅನ್ನು ಎಲ್ಲರೂ ಇಷ್ಷಪಡುತ್ತಾರೆ. ಆದರೆ ಖಾರದ ರಸಗುಲ್ಲಾ ಗೊತ್ತಾ ನಿಮಗೆ? ರಸಗುಲ್ಲಾ ಖಾರವಾಗಿರುವ ಬಗ್ಗೆ ಕೇಳಿದ್ದೀರಾ? ಹೌದು ಪಶ್ವಿಮ ಬಂಗಾಳದಲ್ಲಿ ಸಿಹಿಯ ಬದಲಿಗೆ ಖಾರದ ರಸಗುಲ್ಲ ದೊರೆಯುತ್ತದೆ ಅದೂ ಕೇವಲ ಹತ್ತು ರೂಪಾಯಿಗೆ.
ಬಿಳಿಯ ಸಾಫ್ಟ್ ಸ್ಪಾಂಜಿ ರಸಗುಲ್ಲಾ ಹೆಸರು ಕೇಳಿದರೆ ಸಾಕು ಬಾಯಿಯಲ್ಲಿ ನೀರು ಬರುವುದು ಗ್ಯಾರಂಟಿ.
ಪಶ್ಚಿಮ ಬಂಗಾಳದ ರಸಗುಲ್ಲಾ ವಿಶ್ವಪ್ರಸಿದ್ಧ. ಆದರೆ ಇಲ್ಲಿ ದೊರೆಯುವ ಖಾರದ ರಸಗುಲ್ಲಾಗಳ ಬಗ್ಗೆ ಕೇಳಿದ್ದೀರಾ?
ಮಿಡ್ನಾಪೋರ್‌ನ ಸ್ವೀಟ್ ಶಾಪ್ ಬಿಸಿ ಬಿಸಿ ಖಾರದ ರಸಗುಲ್ಲಾಗಳಿಗೆ ಸಖತ್ ಫೇಮಸ್.
ಈ ಅಂಗಡಿಯಲ್ಲಿನ ಸಿಹಿತಿಂಡಿ ತಯಾರಕರು ರಸಗುಲ್ಲಾ ಜೊತೆ ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ ಎಂದು ಹೇಳುತ್ತಾರೆ.
ನಾನು ಮೊದಲು ಬೆಲ್ಲ, ಕೇಸರಿ, ಮಾವಿನಕಾಯಿಯಿಂದ ಮಾಡಿದ ಸಾಮಾನ್ಯ ರಸಗುಲ್ಲಾಗಳನ್ನು ತಯಾರಿಸುತ್ತಿದ್ದೆ ಆದರೆ ಜನರು ಬದಲಾವಣೆ ಬಯಸುತ್ತಾರೆ ಎಂದು ನಾನು ಅರಿತುಕೊಂಡೆ ಎಂದು ಅರ್ಗಂಡಮ್ ಶಾ ರಸಗುಲ್ಲಾ ಎಕ್ಸ್‌ಪರ್ಟ್ ಹೇಳುತ್ತಾರೆ.
ಅದಕ್ಕಾಗಿಯೇ ನಾವು ಖಾರದ ರಸಗುಲ್ಲಾಗಳನ್ನು ತಯಾರಿಸಲು ಪ್ರಾರಂಭಿಸಿದ್ದೇವೆ.
ಮಿಡ್ನಾಪೋರ್ ವಿವಿಧ ಫ್ಲೇವರ್‌ನ ರಸಗುಲ್ಲಾಗೆ ಹೆಸರುವಾಸಿಯಾಗಿದೆ ಇದಕ್ಕಾಗಿ ಜನರು ಈ ಅಂಗಡಿಗೆ ಮುಗ್ಗಿ ಬೀಳುತ್ತಾರೆ.
ಡಯಾಬಿಟಿಸ್ ಕಾರಣದಿಂದ ಅನೇಕ ಜನರು ಸಕ್ಕರೆ ಪಾಕದಲ್ಲಿ ಅದ್ದಿದ ತಿಂಡಿ ತಿನ್ನುವುದನ್ನು ತಪ್ಪಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಸಿಹಿಯನ್ನು ತಿನ್ನಲು ಬಯಸಿದರೆ, ಈ ರಸಗುಲ್ಲಾಗಳನ್ನು ಟ್ರೈ ಮಾಡಬಹುದು.
ಒಂದು ರಸಗುಲ್ಲಾದ ಬೆಲೆ ಕೇವಲ 10 ರೂಪಾಯಿ. 1845-1855ರಲ್ಲಿ, ಫುಲಿಯಾದ ಹರ್ಧಾನ್ ಮೊಯ್ರಾ ತನ್ನ ಮಗಳಿಗೆ ಇದೇ ರೀತಿಯ ಖಾರದ ರಸಗುಲ್ಲಾ ತಯಾರಿಸಿದ ಕಥೆಯೂ ಇದೆ.
ಅವರು ಫ್ರೆಶ್ ಪನ್ನೀರ್ ಕುದಿಯುವ ಸಿರಪ್‌ನಲ್ಲಿ ಹಾಕಿದ್ದರು. ಅಂದಿನಿಂದ ಈ ಸಹಿತಿಂಡಿಯೊಂದಿಗೆ ಅನೇಕ ಹೊಸ ಪ್ರಯೋಗಗಳನ್ನು ನಡೆಸಲಾಗಿದೆ.