ನಿಮ್ಮ ಕೈರುಚಿಗೆ ಎಲ್ಲರೂ ವಾವ್ ಎನ್ನಬೇಕೇ? ಹಾಗಿದ್ರೆ ಈ ಸೀಕ್ರೆಟ್ ಟಿಪ್ಸ್ ತಿಳಿದುಕೊಂಡಿರಿ
ಅಡುಗೆ ವಿಷಯಕ್ಕೆ ಬಂದಾಗ, ನೀವು ಮಾಡುವಂತಹ ಒಂದೊಂದು ವಿಧಾನ ಸಹ ಆಹಾರದ ರುಚಿಯನ್ನು ಹೆಚ್ಚಿಸಬಹುದು ಅಥವಾ ರುಚಿ ಕೆಡಿಸಬಹುದು. ಅಡುಗೆ ಎಂದರೆ ಭಕ್ಷ್ಯದಲ್ಲಿ ಸರಿಯಾದ ಪರಿಮಳ ಮತ್ತು ಸುವಾಸನೆಯನ್ನು ತುಂಬುವುದು. ಆಹಾರವನ್ನು ಸಿದ್ಧಪಡಿಸುವುದು ನಿಜಕ್ಕೂ ಸಮಯ ತೆಗೆದುಕೊಳ್ಳುವ ಕೆಲಸ ಮತ್ತು ಅದು ತಟ್ಟೆಯಲ್ಲಿ ಸುಂದರವಾಗಿ ಕಾಣಿಸಿದರೂ ಸಹ, ಟೇಸ್ಟ್ ಮಾಡುವವರಿಗೆ ಇಷ್ಟವಾಗದಿದ್ದರೆ ಕಠಿಣ ಪರಿಶ್ರಮ ವ್ಯರ್ಥವಾಗುತ್ತದೆ. ನಿಮ್ಮ ದೈನಂದಿನ ಆಹಾರದ ರುಚಿಯನ್ನು ಉತ್ತಮಗೊಳಿಸುವ ಕೆಲವು ಸೂಪರ್ ಸುಲಭ ತಂತ್ರಗಳು ಇಲ್ಲಿವೆ.
ಮುಂಚಿತವಾಗಿ ಶುಂಠಿ ಬೆಳ್ಳುಳ್ಳಿಯನ್ನು ಕತ್ತರಿಸಬೇಡಿ
ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬಳಸುವ ಮೊದಲು ಕತ್ತರಿಸುವುದು ಉತ್ತಮ. ಮುಂಚಿತವಾಗಿ ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಕತ್ತರಿಸುವುದು ಸಾಮಾನ್ಯವಾಗಿ ಅವುಗಳ ವಿಶಿಷ್ಟ ಪರಿಮಳ ಮತ್ತು ಸುವಾಸನೆಯನ್ನು ಕಳೆದುಕೊಳ್ಳುತ್ತದೆ. ನಿಮ್ಮ ಆಹಾರದಲ್ಲಿ ಶುಂಠಿ-ಬೆಳ್ಳುಳ್ಳಿಯ ಸರಿಯಾದ ಸಮತೋಲನವನ್ನು ಪಡೆಯಲು ನೀವು ಮಾಡಬೇಕಾದ ಇನ್ನೊಂದು ವಿಷಯವೆಂದರೆ ರೆಡಿಮೇಡ್ ಪೇಸ್ಟ್ ನ ಉಪಯೋಗಿಸುವುದನ್ನು ನಿಲ್ಲಿಸುವುದು.
ಸಾಮಾನ್ಯವಾಗಿ ಜನರು ಸುಲಭವಾಗಿ ಲಭ್ಯವಿರುವ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಆರಿಸಿಕೊಳ್ಳುತ್ತಾರೆ, ಅದು ಬಳಸಲು ಸುಲಭವಾಗಿದೆ. ಈ ಪೇಸ್ಟ್ ನ್ನು ರಕ್ಷಿಸಲು ಬೇರೆ ರಾಸಾಯನಿಕ ಬಳಸುವುದರಿಂದ ಹಾಗೂ ಇದು ಉತ್ತಮ ಪರಿಮಳ ಹೊಂದಿರದ ಕಾರಣ ಇದನ್ನು ಬಳಸದೆ ಪ್ರೆಶ್ ಆಗಿರುವ ಶುಂಠಿ, ಬೆಳ್ಳುಳ್ಳಿ ಬಳಸಿದರೆ ಉತ್ತಮ.
ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ
ಮಸಾಲೆ ಅಥವಾ ತರಕಾರಿಗಳನ್ನು ಹಾಕುವ ಮೊದಲು ಮೊದಲು ಬಾಣಲೆಯಲ್ಲಿರುವ ಎಣ್ಣೆಯನ್ನು ಸರಿಯಾಗಿ ಬಿಸಿ ಮಾಡುವವರೆಗೆ ಕಾಯಿರಿ. ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡುವುದು ಉತ್ತಮ ಮತ್ತು ನಂತರ ಬೇಕಾದ ಪದಾರ್ಥಗಳನ್ನು ಮಾತ್ರ ಪ್ಯಾನ್ನಲ್ಲಿ ಸೇರಿಸಿ. ಪ್ಯಾನ್ ಹೆಚ್ಚು ಬಿಸಿಯಾಗುವುದು ಸೂಕ್ತವಲ್ಲ, ಏಕೆಂದರೆ ಇದರಿಂದ ತರಕಾರಿ ಸುತ್ತು ಹೋಗುತ್ತದೆ. ಇದು ತರಕಾರಿಗಳು ಪ್ಯಾನ್ನ ಕೆಳಭಾಗದಲ್ಲಿ ಅಂಟಿಕೊಳ್ಳುವುದಕ್ಕೂ ಕಾರಣವಾಗಬಹುದು. ಆದ್ದರಿಂದ, ನೀವು ಅಡುಗೆ ಪ್ರಾರಂಭಿಸುವ ಮೊದಲು ಬಾಣಲೆಯಲ್ಲಿ ಎಣ್ಣೆಯನ್ನು ಸರಿಯಾಗಿ ಬಿಸಿ ಮಾಡುವುದು ಅಗತ್ಯ ಹಂತವಾಗಿದೆ.
ಸೀಸನಲ್ ಆಹಾರ ಬಳಕೆ :
ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಅವುಗಳಿಂದ ಗರಿಷ್ಠ ಲಾಭವನ್ನು ಪಡೆಯಬೇಕು ಎಂದು ಯಾವಾಗಲೂ ಹೇಳಲಾಗುತ್ತದೆ. ಸೀಸನಲ್ ಉತ್ಪನ್ನಗಳು ತಾಜಾ ಮಾತ್ರವಲ್ಲದೆ ನಿಮ್ಮ ದೇಹದಲ್ಲಿನ ಕೆಲವು ಪೋಷಕಾಂಶಗಳ ಕೊರತೆಯನ್ನು ಸಹ ನೀಗಿಸುತ್ತದೆ. ಕೋಲ್ಡ್ ಸ್ಟೋರೇಜ್ನಿಂದ ಉತ್ಪನ್ನಗಳನ್ನು ಖರೀದಿಸುವ ಬದಲು ಸೀಸನಲ್ ಉತ್ಪನ್ನಗಳ ಬಳಕೆ ಯಾವಾಗಲೂ ಉತ್ತಮ.
ಫ್ರೀಜ್ ಮಾಡಿದ ಹಣ್ಣುಗಳು ಮತ್ತು ತರಕಾರಿಗಳು ಪೋಷಣೆ ಮತ್ತು ರುಚಿ ಎರಡನ್ನೂ ಹೊಂದಿರುವುದಿಲ್ಲ. ಋುತುವಿನ ನಿರ್ದಿಷ್ಟ ತರಕಾರಿಗಳು ಹೆಚ್ಚು ರಸಭರಿತವಾಗಿರುತ್ತದೆ ಮತ್ತು ನಿಮ್ಮ ಆಹಾರದ ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ.
ಕ್ರೀಮ್ ಬದಲಿಗೆ ಹೂಕೋಸು
ಒಂದೇ ರೀತಿಯ ರುಚಿಯನ್ನು ಹೊಂದಿರುವ ಹೆವಿ ಕ್ರೀಮ್ ಆರೋಗ್ಯಕರ ಬದಲಿ ಬಯಸುವಿರಾ? ಹೂಕೋಸಿಗೆ ಬದಲಿಸಿ. ಕೇವಲ ಸ್ಟೀಮ್ ಮಾಡಿ ಮತ್ತು ಹೂಕೋಸಿನ ಪ್ಯೂರಿ ಮಾಡಿ ಮತ್ತು ಅದನ್ನು ಕ್ರೀಮ್ ಆಧಾರಿತ ಭಕ್ಷ್ಯಗಳಲ್ಲಿ ಬಳಸಿ. ಇದು ಖಾದ್ಯವನ್ನು ದಪ್ಪವಾಗಿಸುತ್ತದೆ, ಕೆನೆ ಇರುವಂತೆ ಮಾಡುತ್ತದೆ ಆದರೆ ನಿಮ್ಮ ಆಹಾರಕ್ಕೆ ಹೆಚ್ಚುವರಿ ಕ್ಯಾಲೊರಿಗಳನ್ನು ಸೇರಿಸುವುದಿಲ್ಲ.
ಸೊಪ್ಪು ಕೊನೆಗೆ ಸೇರಿಸಿ
ನೀವು ನೆನಪಿಡುವ ಮತ್ತೊಂದು ಸಲಹೆಯೆಂದರೆ ಕೊನೆಯ ಕ್ಷಣದಲ್ಲಿ ಅಲಂಕರಿಸುವುದು. ಸಾಮಾನ್ಯವಾಗಿ ಭಾರತೀಯ ಅಡುಗೆಯಲ್ಲಿ ಕತ್ತರಿಸಿದ ಕೊತ್ತಂಬರಿಯನ್ನು ದಾಲ್, ಮೇಲೋಗರ ಮತ್ತು ತರಕಾರಿಗಳ ಮೇಲೆ ಚಿಮುಕಿಸಿ ಅವುಗಳ ರುಚಿಯನ್ನು ಹೆಚ್ಚಿಸಲಾಗುತ್ತದೆ. ಆದರೆ ನೀವು ಬೆಂಕಿಯನ್ನು ಆಫ್ ಮಾಡಿದ ನಂತರ ಸೊಪ್ಪು ಹಾಕಬೇಕು.
ಕೊತ್ತಂಬರಿ ಸೊಪ್ಪನ್ನು ಮೊದಲು ಸೇರಿಸಿದರೆ ಬೇಗನೆ ರುಚಿ ಹಾಳಾಗುತ್ತದೆ. ನೀವು ಮಾಡಬೇಕಾಗಿರುವುದು ಗಾರ್ನಿಶ್ ಮಾಡಿ ಮತ್ತು ಮುಚ್ಚಳವನ್ನು ಮುಚ್ಚಿ. ಆಹಾರದಲ್ಲಿ ಕೊತ್ತಂಬರಿ ಸೊಪ್ಪಿನ ಪರಿಮಳ ಮತ್ತು ಸುವಾಸನೆಯನ್ನು ತುಂಬಲು ಆಹಾರದಿಂದ ಬರುವ ಸ್ಟೀಮ್ ಸಾಕು.