ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್, ಬೆಳಗ್ಗೆ 4 ಗಂಟೆ ಅಂಗಡಿ ಓಪನ್‌ಗೆ ಪೊಲೀಸರ ಬ್ರೇಕ್
ಬೆಳ್ಳಂಬೆಳಗ್ಗೆ 4 ಗಂಟೆ ಹೊಸಕೋಟೆಯಲ್ಲಿ ಹಾಜರಿದ್ದು, ಕ್ಯೂನಲ್ಲಿ ನಿಂತು ಬಿರಿಯಾನಿ ಸವಿಯುವ ಬಿರಿಯಾನಿ ಪ್ರಿಯರಿಗೆ ಶಾಕ್ ಎದುರಾಗಿದೆ. ಪೊಲೀಸರ ಖಡಕ್ ವಾರ್ನಿಂಗ್ ಬಳಿಕ ಇದೀಗ ಹೊಸಕೋಟೆ ಬಿರಿಯಾನಿ ಬೆಳಗ್ಗೆ 4 ಗಂಟೆಗೆ ಲಭ್ಯವಿಲ್ಲ.

ಹೊಸಕೋಟೆ ಬಿರಿಯಾನಿ ಅತ್ಯಂತ ಜನಪ್ರಿಯ. ಬೆಳಗ್ಗೆ 4 ಗಂಟೆಗೆ ಬಿರಿಯಾನಿ ಮಾರಾಟ ಆರಂಭಗೊಳ್ಳುತ್ತದೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಇಲ್ಲಿಗೆ ಜನರು ಆಗಮಿಸಿ ಕ್ಯೂ ನಿಂತು ಬಿರಿಯಾನಿ ಖರೀದಿಸುತ್ತಾರೆ. ಬೆಂಗಳೂರಿನಿಂದ ಸಾಕಷ್ಟು ಮಂದಿ ಹೊಸಕೋಟೆ ಬಿರಿಯಾನಿಗೆ ತೆರಳುತ್ತಾರೆ. ಬೈಕ್ ಮೂಲಕ, ಕಾರು ಸೇರಿದಂತೆ ವಾಹನಗಳ ಮೂಲಕ ರೈಡ್ ಮಾಡುತ್ತಾ ತೆರಳುವ ಮಂದಿ ಸಾಕಷ್ಟಿದ್ದಾರೆ. ವೀಕೆಂಡ್‌ನಲ್ಲಿ ಹೊಸಕೋಟೆ ವಾಹನ ಹಾಗೂ ಬಿರಿಯಾನಿ ಪ್ರೀಯರಿಂದಲೇ ತುಂಬಿರುತ್ತದೆ. ಹೀಗೆ ಬಿರಿಯಾನಿ ಸವಿಯುತ್ತಿದ್ದ ಮಂದಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಪೊಲೀಸರ ಖಡಕ್ ಸೂಚನೆ ಬಳಿಕ ಇದೀಗ ಬೆಳಗ್ಗೆ 4 ಗಂಟೆಗೆ ಹೊಸಕೋಟೆ ಬಿರಿಯಾನಿ ಲಭ್ಯವಿಲ್ಲ.
ಜಾಲಿ ರೈಡ್ ಜೊತೆಗೊಂದು ಬಿರಿಯಾನಿಗೆ ಬ್ರೇಕ್
ಮಣಿ ಬಿರಿಯಾನಿ, ಆನಂದ್ ಬಿರಿಯಾನಿ, ಅಕ್ಷಯ್ ಬಿರಿಯಾನಿ ಸೇರಿದಂತೆ ಹೊಸಕೋಟೆಯಲ್ಲಿ ಹಲವು ದಶಕಗಳಿಂದ ಬಿರಿಯಾನಿ ನೀಡುತ್ತಿರುವ ಹಲವು ಅಂಗಡಿಗಳಿವೆ. ಬೆಳಗ್ಗೆ 4 ಗಂಟೆಗೆ ಹೊಸಕೋಟೆ ಬಿರಿಯಾನಿ ಶಾಪ್ ಮುಂದೆ ಹಾಜರಿದ್ದರೂ ಕಿಲೋಮೀಟರ್‌ಗಟ್ಟಲೇ ಕ್ಯೂ ಇದ್ದೇ ಇರುತ್ತೆ. ಕೆಲವು ಇಲ್ಲೇ ಠಿಕಾಣಿ ಹೂಡಿ ಬೆಳಗ್ಗೆ ಬಿರಿಯಾನಿ ಸೇವಿಸುವವರು ಇದ್ದಾರೆ. ಅಷ್ಟರ ಮಟ್ಟಿಗೆ ಹೊಸಕೋಟೆ ಬಿರಿಯಾನಿ ಜನಪ್ರಿಯವಾಗಿದೆ. ಲಾಂಗ್ ಹಾಗೂ ಜಾಲಿ ರೈಡ್ ಜೊತೆಗೆ ಬೆಳಗ್ಗೆ ಒಂದು ಬಿರಿಯಾನಿ ಹೊಸ ಟ್ರೆಂಡ್ ಆಗಿ ಬದಲಾಗಿತ್ತು. ಇನ್ನು ಬೆಂಗಳೂರಿಗರಿಗೆ ಈ ಸಮಯ ಅತ್ಯಂತ ಅಪ್ತವಾಗಿತ್ತು. ಆದರೆ ಪೊಲೀಸರು ಇದೀಗ ಹೊಸಕೋಟೆ ಬಿರಿಯಾನಿ ಶಾಪ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ಬೆಳಗ್ಗೆ 4 ಗಂಟೆಗೆ ಶಾಪ್ ತೆರೆಯದಂತೆ ಸೂಚಿಸಿದ್ದಾರೆ.
ಬೆಳಗ್ಗೆ 4 ಗಂಟೆಗೆ ಬಿರಿಯಾನಿಗೆ ಬ್ರೇಕ್
ಬೆಳಗ್ಗೆ 4 ಗಂಟೆಗೆ ಬಿರಿಯಾನಿ ಶಾಪ್ ತೆರೆಯದಂತೆ ಪೊಲೀಸರು ಸೂಚಿಸಿದ್ದರೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರಿನಿಂದ ತೆರಳುವ ಹಲವರು ಮಧ್ಯ ರಾತ್ರಿಯೇ 30 ಕಿಲೋಮೀಟರ್ ದೂರದಲ್ಲಿರುವ ಹೊಸಕೋಟೆಗೆ ತೆರಳುತ್ತಾರೆ. ಟ್ರಾಫಿಕ್ ಇಲ್ಲ, ಪೊಲೀಸರು ಇಲ್ಲ, ಸಿಗ್ನಲ್‌ಗಳು ಬಹುತೇಕ ಫ್ರಿ ಇರುವ ಕಾರಣ ಅತೀವೇಗವಾಗಿ ಚಾಲನೆ ಮಾಡುತ್ತಿದ್ದಾರೆ. ಹಲವು ನಿಯಮಗಳು ಉಲ್ಲಂಘನೆಯಾಗುತ್ತಿದೆ. ಹೆಲ್ಮೆಟ್ ಧರಿಸದೇ ರೈಡಿಂಗ್, ಸೀಟ್ ಬೆಲ್ಟ್, ಅತೀ ವೇಗ ಸೇರಿದಂತೆ ಹಲವು ನಿಯಮಗಳನ್ನು ಗಾಳಿಗೆ ತೂರಿ ಸಾಗುತ್ತಿದ್ದಾರೆ.
ಅಪಘಾತ ಪ್ರಮಾಣಗಳು ಹೆಚ್ಚಳ
ಮಧ್ಯ ರಾತ್ರಿಯಿಂದಲೇ ಹೊಸಕೋಟೆ ಪ್ರಯಾಣ ಆರಂಭಗೊಳ್ಳುತ್ತಿದೆ. ಅತೀ ವೇಗ ಹಾಗೂ ನಿಯಮ ಉಲ್ಲಂಘನೆಗಳಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಈ ಅಂಕಿ ಅಂಶ ಗಮಿನಿಸಿದ ಪೊಲೀಸರು ಬೆಳಗ್ಗೆ 4 ಗಂಟೆಗೆ ಬಿರಿಯಾನಿ ಶಾಪ್ ತೆರೆಯದಂತೆ ಸೂಚನೆ
ಎಷ್ಟು ಗಂಟೆಗೆ ಹೊಸಕೋಟೆ ಬಿರಿಯಾನಿ ಲಭ್ಯ
ಬೆಳಗ್ಗೆ 4 ಗಂಟೆಗೆ ಬಿರಿಯಾನಿ ಶಾಪ್ ತೆರೆಯದಂತೆ ಪೊಲೀಸರು ಸೂಚಿಸಿದ್ದಾರೆ. ಇದೇ ವೇಳೆ ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ಬಿರಿಯಾನಿ ಮಾರಾಟ ಆರಂಭಿಸಲು ಪೊಲೀಸರು ಸೂಚಿಸಿದ್ದಾರೆ. 4ರ ಬದಲು 6 ಗಂಟೆಗೆ ಬಿರಿಯಾನಿ ವಿತರಣೆ ಆರಂಭಿಸಲು ಪೊಲೀಸರು ಅನುಮತಿ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಬೆಳಗ್ಗೆ 4 ಗಂಟೆ ಬದಲು 6 ಗಂಟೆಯಿಂದ ಹೊಸಕೋಟೆ ಬಿರಿಯಾನಿ ಲಭ್ಯವಾಗಲಿದೆ.