MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Food
  • Indian Dishes: ಯಾವ ಟೈಮಲ್ಲೂ ತಿನ್ನೋದಕ್ಕೆ ಬೆಸ್ಟ್ ಆಗಿರುತ್ತೆ ಭಾರತದ ಈ 7 ತಿಂಡಿಗಳು

Indian Dishes: ಯಾವ ಟೈಮಲ್ಲೂ ತಿನ್ನೋದಕ್ಕೆ ಬೆಸ್ಟ್ ಆಗಿರುತ್ತೆ ಭಾರತದ ಈ 7 ತಿಂಡಿಗಳು

ಭಾರತದ ಪ್ರತಿಯೊಂದು ಪ್ರದೇಶದಲ್ಲೂ,ಅದರದ್ದೇ ಆದ ವಿಭಿನ್ನವಾದ ಆಹಾರಗಳಿವೆ. ಎಲ್ಲವೂ ಬೇರೆ ಬೇರೆ ರುಚಿಯನ್ನು ಹೊಂದಿರುತ್ತೆ. ಅಂತಹ ಬಲು ರುಚಿಯಾದ, ಬಾಯಲ್ಲಿ ನೀರೂರಿಸುವ ಭಾರತದ ಕೆಲವು ಪ್ರಸಿದ್ಧ ಆಹಾರಗಳ ಬಗ್ಗೆ ತಿಳಿಯೋಣಾ.

2 Min read
Pavna Das
Published : Jun 19 2025, 05:03 PM IST
Share this Photo Gallery
  • FB
  • TW
  • Linkdin
  • Whatsapp
18
Image Credit : Unsplash

ಭಾರತವು ಸಂಸ್ಕೃತಿ ಮತ್ತು ಸಂಪ್ರದಾಯಗಳ ದೇಶ ಮಾತ್ರವಲ್ಲ, ಅದರ ಆಹಾರವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ಪ್ರತಿಯೊಂದು ರಾಜ್ಯ, ಪ್ರತಿಯೊಂದು ನಗರ ಮತ್ತು ಪ್ರತಿಯೊಂದು ಬೀದಿ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಮಸಾಲೆಗಳು, ದೇಸಿ ತಡ್ಕಾ ಮತ್ತು ವಿವಿಧ ರೀತಿಯ ಭಕ್ಷ್ಯಗಳ ಸುವಾಸನೆಯು ಭಾರತಕ್ಕೆ ಅಂತರರಾಷ್ಟ್ರೀಯ ಮಾನ್ಯತೆಯನ್ನು ನೀಡಿದೆ. ನೀವು ಆಹಾರ ಪ್ರಿಯರಾಗಿದ್ರೆ ಈ 7 ಭಾರತೀಯ ಆಹಾರಗಳನ್ನು(Indian cuisines) ಟ್ರೈ ಮಾಡ್ಲೇಬೇಕು, ಏಕೆಂದರೆ ಅವುಗಳ ಹೆಸರನ್ನು ಕೇಳಿದ್ರೆ, ಹಸಿವು ಹೆಚ್ಚಾಗಿ, ಬಾಯಲ್ಲಿ ನೀರು ಬರೋದು ಖಚಿತಾ.

28
Image Credit : Unsplash

ಬಟರ್ ಚಿಕನ್

ಮಾಂಸಾಹಾರಿಗಳ ಮೊದಲ ಆಯ್ಕೆ ಬಟರ್ ಚಿಕನ್ (Butter Chicken), ಅವರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಕ್ರೀಮಿ ಗ್ರೇವಿಯಲ್ಲಿ ತಯಾರಿಸಿದ ಈ ಖಾದ್ಯವನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಹೆಚ್ಚಾಗಿ ತಿನ್ನಲಾಗುತ್ತದೆ. ನಾನ್ ಅಥವಾ ಬಟರ್ ನಾನ್ ನೊಂದಿಗೆ ತಿನ್ನುವುದರಿಂದ ಅದರ ರುಚಿ ತುಂಬಾ ಹೆಚ್ಚಾಗುತ್ತದೆ.

Related Articles

Related image1
Indian Food History: ಪಾನಿಪುರಿಯಿಂದ ಮೊಸರಿನವರೆಗೂ… ಭಾರತೀಯ ಭಕ್ಷ್ಯಗಳ ಶ್ರೀಮಂತ ಇತಿಹಾಸ ತಿಳಿಯಿರಿ
Related image2
Panipuri Street Food: ಬಾಯಲ್ಲಿ ನೀರು ಬರಿಸಿಕೊಡು ರಸ್ತೆ ಬದಿ ಪಾನಿ ಪುರಿ ತಿಂದ್ರೆ ಏನಾಗುತ್ತೆ ಗೊತ್ತಾ?
38
Image Credit : Unsplash

ಹೈದರಾಬಾದಿ ಬಿರಿಯಾನಿ

ನೀವು ಬಿರಿಯಾನಿ ಪ್ರಿಯರಾಗಿದ್ದರೆ, ಹೈದರಾಬಾದಿ ಬಿರಿಯಾನಿ (Hyderabadi Biriyani) ತಿನ್ನದೇ ಇದ್ದರೆ ಹೇಗೆ ಅಲ್ವಾ?. ತೆಲಂಗಾಣದ ಹೈದರಾಬಾದ್ ನಗರದಿಂದಲೇ ಪ್ರಸಿದ್ಧವಾಗಿರುವ ಹೈದರಾಬಾದಿ ಬಿರಿಯಾನಿ, ಮಸಾಲೆಗಳು, ಅನ್ನ ಮತ್ತು ಮಟನ್ ಅಥವಾ ಕೋಳಿ ಮಾಂಸದ ಅತ್ಯುತ್ತಮ ಕಾಂಬಿನೇಶನ್ ಆಗಿದೆ. ಇದರಿಂದ ಹೊರಹೊಮ್ಮುವ ಸುವಾಸನೆಯು ಬಾಯಲ್ಲಿ ನೀರೂರಿಸುತ್ತೆ.

48
Image Credit : Unsplash

ದೋಸೆ

ನೀವು ದಕ್ಷಿಣ ಭಾರತಕ್ಕೆ ಹೋದರೆ, ನಿಮಗೆ ಬಹಳ ವೆರೈಟಿ ದೋಸೆ (dosa varieties)ತಿನ್ನಲು ಅವಕಾಶ ಸಿಗುತ್ತದೆ. ಈಗ ಇದು ಕೇವಲ ದಕ್ಷಿಣ ಭಾರತೀಯ ಆಹಾರವಲ್ಲ, ಬದಲಾಗಿ ದೇಶದ ಪ್ರತಿಯೊಂದು ಮೂಲೆಯಲ್ಲೂ ದೋಸೆ ತಿನ್ನಲು ಅವಕಾಶ ಸಿಗುತ್ತದೆ. ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಇದರ ರುಚಿ ಡಬಲ್ ಆಗಿರುತ್ತೆ.

58
Image Credit : social media

ಚೋಲೆ ಭತುರೆ

ಉತ್ತರ ಭಾರತದಲ್ಲಿ ಚೋಲೆ ಭತುರೆ (Chole Bhatura) ಬಹಳ ಪ್ರಸಿದ್ಧ. ಪೂರಿಗಿಂತಲೂ ದೊಡ್ಡದಾದ ಬತೂರೆ ಮತ್ತು ಖಾರದ ಕಡಲೆಯ ಮಸಾಲೆ ಹೆಚ್ಚಿನ ಎಲ್ಲಾ ಆಹಾರ ಪ್ರಿಯರ ಮೊದಲ ಆಯ್ಕೆಯಾಗಿರುತ್ತೆ. ಅನೇಕ ಜನರು ಇದನ್ನ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಸೇವಿಸಿದ್ರೆ, ಇನ್ನೂ ಕೆಲವರು ಸಂಜೆ ಸೇವಿಸ್ತಾರೆ. ಆದರೆ ಇದನ್ನ ಹೆಚ್ಚಾಗಿ ತಿನ್ನೋದು ಆರೋಗ್ಯಕ್ಕೆ ಹಾನಿಕಾರಕ.

68
Image Credit : Unsplash

ಪಾವ್ ಭಾಜಿ

ನೀವು ಮುಂಬೈಗೆ ಹೋದರೆ, ಪಾವ್ ಭಾಜಿ (Pav Bhaji) ಮಿಸ್ ಮಾಡುವಂತಿಲ್ಲ. ಬೆಣ್ಣೆಯಲ್ಲಿ ಹುರಿದ ಪಾವ್ ಅನ್ನು, ಭಾಜಿಯೊಂದಿಗೆ ಬಡಿಸಲಾಗುತ್ತದೆ. ಇದು ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಲಭ್ಯವಿದೆ, ಆದರೆ ನೀವು ಮುಂಬೈನಲ್ಲಿ ಬೆಸ್ಟ್ ಪಾವ್ ಭಾಜಿಯನ್ನು ತಿನ್ನಬಹುದು.

78
Image Credit : Unsplash

ರೋಗನ್ ಜೋಶ್

ನೀವು ಕಾಶ್ಮೀರಕ್ಕೆ ಭೇಟಿ ನೀಡಿದರೆ, ರೋಗನ್ ಜೋಶ್ (Rogan Josh) ತಿನ್ನಲು ಮರೆಯಬೇಡಿ. ಇದು ಜನಪ್ರಿಯ ಮತ್ತು ಐಕಾನಿಕ್ ಕಾಶ್ಮೀರಿ ಮಟನ್ ಕರಿ ಆಗಿದೆ. ಇದು ಮೊಸರು, ಮಸಾಲೆಗಳು ಮತ್ತು ಆರೊಮ್ಯಾಟಿಕ್ ಗಿಡಮೂಲಿಕೆಗಳ ಅದ್ಭುತ ಮಿಶ್ರಣವಾಗಿದೆ.

88
Image Credit : stockphoto

ಪುರಿ ಸಬ್ಜಿ

ಮದುವೆಯಾಗಿರಲಿ, ಹಬ್ಬವಾಗಲಿ, ಪುರಿ ಸಬ್ಜಿ (Puri and Sabji) ಉತ್ತರ ಭಾರತದಲ್ಲಿ ಸಾಕಷ್ಟು ಪ್ರಸಿದ್ಧವಾಗಿರುವ ಆಹಾರವಾಗಿದೆ. ಪುರಿಯೊಂದಿಗೆ ಮಸಾಲೆಯುಕ್ತ ಆಲೂಗಡ್ಡೆ-ಬಟಾಣಿ ಅಥವಾ ಆಲೂಗಡ್ಡೆ-ಹೂಕೋಸು ಕರಿ ಜನರಿಗೆ ಅಚ್ಚುಮೆಚ್ಚಿನದು.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಆಹಾರ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved