ಎದೆಹಾಲುಣಿಸುವ ತಾಯಿಗೆ, ಪುರುಷ ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಮೆಂತೆ ಪರೋಟಾ ದಿ ಬೆಸ್ಟ್
ಮಾರುಕಟ್ಟೆಯಲ್ಲಿ ಸಾಕಷ್ಟು ಹಸಿರು ಸೊಪ್ಪುಗಳು ದೊರೆಯುತ್ತವೆ. ಮಕ್ಕಳು ಹಸಿರು ಸೊಪ್ಪುಗಳನ್ನು ತಿನ್ನಲು ಇಷ್ಟಪಡುವುದಿಲ್ಲವಾದರೂ, ಅವರಿಂದ ರುಚಿಕರವಾದ ಖಾದ್ಯವನ್ನು ತಯಾರಿಸಿದರೆ, ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ತುಂಬಾ ಪೌಷ್ಟಿಕವಾದ ಸೊಪ್ಪೆಂದರೆ ಮೆಂತೆ ಮತ್ತು ಈ ಮೆಂತ್ಯೆಯಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಮೆಂತೆ ಪರೋಟವು ಮನೆಗಳಲ್ಲಿ ಹೆಚ್ಚಾಗಿ ಪ್ರಚಲಿತದಲ್ಲಿವೆ.
ಮೆಂತೆ ಪರೋಟಾವನ್ನು ಬೆಲ್ಲದ ಜೊತೆ ತಿನ್ನುವ ಆನಂದವೇ ಬೇರೆ. ಇದನ್ನು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹೆಚ್ಚು ಸೇವಿಸುತ್ತಾರೆ. ಮೆಂತೆ ಸೊಪ್ಪಿನ ಪರೋಟಾವು ಕೇವಲ ರುಚಿ ಮಾತ್ರವಲ್ಲ, ಆಲೂಗಡ್ಡೆ ಅಥವಾ ಪನ್ನೀರ್ ಪರೋಟಾಗಳಿಗಿಂತ ಹೆಚ್ಚು ಆರೋಗ್ಯಕರ. ಜೊತೆಗೆ ತಯಾರಿಸೋದೂ ಸುಲಭ. ಮೆಂತೆ ಪರೋಟಾವನ್ನು ತಿನ್ನುವ ಅದ್ಭುತ ಪ್ರಯೋಜನಗಳನ್ನು ತಿಳಿಯಿರಿ.
ಸುಲಭವಾಗಿ ಜೀರ್ಣವಾಗುತ್ತದೆ
ಬೆಳಗ್ಗಿನ ಉಪಾಹಾರ ಅಥವಾ ಮಧ್ಯಾಹ್ನದ ಊಟದ ಸಮಯದಲ್ಲಿ ಮೆಂತ್ಯೆ ಪರಾಟವನ್ನು ತಿನ್ನಬಹುದು. ಈ ಪರಾಟಾಗಳು ಹೊಟ್ಟೆಗೆ ತುಂಬಾ ಸೌಮ್ಯವಾಗಿದ್ದು, ಸುಲಭವಾಗಿ ಜೀರ್ಣಿಸಬಹುದಿರುತ್ತವೆ. ಮೆಂತ್ಯೆ ಸೊಪ್ಪು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ, ಆದ್ದರಿಂದ ಮೆಂತ್ಯೆ ಪರೋಟಾವು ಹೊಟ್ಟೆಗೆ ತುಂಬಾ ಒಳ್ಳೆಯದು.
ಮೆಂತ್ಯೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ಇದು ಮಲಬದ್ಧತೆ, ಆಮ್ಲೀಯತೆ, ಅಜೀರ್ಣದಂತಹ ಸಾಮಾನ್ಯ ಹೊಟ್ಟೆಯ ಸಮಸ್ಯೆಗಳನ್ನು ಗುಣಪಡಿಸುವುದಲ್ಲದೆ ಚಳಿಗಾಲದ ಅಲರ್ಜಿಗಳನ್ನು ಕಡಿಮೆ ಮಾಡುತ್ತದೆ.
ತಡರಾತ್ರಿಯವರೆಗೂ ಹೊಟ್ಟೆ ತುಂಬುತ್ತದೆ
ಮೆಂತ್ಯ ಪರಾಟವು ಒಂದು ಸಂಪೂರ್ಣ ಆಹಾರ. ಆದ್ದರಿಂದ ಅದನ್ನು ತಿಂದರೆ ಹೊಟ್ಟೆ ಹೆಚ್ಚು ಸಮಯ ತುಂಬಿದಂತಿರುತ್ತದೆ.
ಮೊಸರು, ಉಪ್ಪಿನಕಾಯಿ, ಬೆಲ್ಲ ಜೊತೆಗೆ ಮೆಂತೆ ಪರೋಟಾ ಸೇವಿಸಬಹುದು. ಇದು ಸುದೀರ್ಘ ಕಾಲದವರೆಗೂ ಹೊಟ್ಟೆ ಹಸಿಯದಂತೆ ನೋಡಿಕೊಳ್ಳುತ್ತದೆ. ಇದು ಕ್ಯಾಲೊರಿಗಳನ್ನು ನಿಯಂತ್ರಿಸಲು ಸಹಕಾರಿ.
ಕೊಲೆಸ್ಟ್ರಾಲ್ ನಿಯಂತ್ರಣ
ಒಂದು ವೇಳೆ ಕೊಲೆಸ್ಟ್ರಾಲ್ ಈಗಾಗಲೇ ಅಧಿಕವಾಗಿದ್ದರೆ, ವೈದ್ಯರು ಎಣ್ಣೆ ಮತ್ತು ತುಪ್ಪವನ್ನು ತಿನ್ನುವುದು ಬೇಡ ಎಂದು ಹೇಳುತ್ತಾರೆ. ಆದ್ದರಿಂದ ಇಂತಹ ಸನ್ನಿವೇಶದಲ್ಲಿ ಎಣ್ಣೆಯಿಲ್ಲದೆ ಪರೋಟಾವನ್ನು ಬೇಯಿಸಿ ಸೇವಿಸಬೇಕು. ಕೊಲೆಸ್ಟ್ರಾಲ್ ಮಟ್ಟ ವು ಸಾಮಾನ್ಯವಾಗಿದ್ದರೆ, ಲಘು ಎಣ್ಣೆ ಹಾಕಿದ ಪರಾಟಾವನ್ನು ತಿನ್ನಬಹುದು.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಮೆಂತೆ ಪ್ರಯೋಜನಕಾರಿ. ಮೆಂತ್ಯೆ ಕಾಳುಗಳ ಬಳಕೆಯಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಅಲ್ಲದೆ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಮತ್ತು ದೇಹವು ಆರೋಗ್ಯದಿಂದ ಕೂಡಿರುತ್ತದೆ.
ಸ್ತನ್ಯಪಾನಕ್ಕೆ ಪ್ರಯೋಜನಕಾರಿ
ಮೆಂತೆ ಸೇವನೆಯಿಂದ ಮಹಿಳೆಯರಲ್ಲಿ ಎದೆ ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಆದ್ದರಿಂದ, ತಮ್ಮ ಮಕ್ಕಳಿಗೆ ಎದೆಹಾಲು ಉಣಿಸುವ ಮಹಿಳೆಯರಿಗೆ, ಈ ಪರೋಟಾ ಅಥವಾ ಪಲ್ಯ ಸಹ ನೀಡಬಹುದು.
ಪುರುಷರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ
ಮೆಂತೆಯು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಉತ್ಪಾದನೆಯನ್ನು ಸುಧಾರಿಸುತ್ತದೆ. ಪುರುಷರ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕ್ಕೆ ಈ ಹಾರ್ಮೋನ್ ತುಂಬಾ ಅವಶ್ಯಕ.
ಮೆಂತೆ ಸೊಪ್ಪಿನ ಪರೋಟಾ ಸೇಚನೆಯಿಂದ ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚುತ್ತದೆ. ಜೊತೆಗೆ ಈ ಹಾರ್ಮೋನುಗಳು ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇದರಿಂದ ಉತ್ತಮ ಲೈಂಗಿಕ ಜೀವನ ನಿಮ್ಮದಾಗಬಹುದು.
ಮೆಂತೆ ಸೊಫ್ಫಿನಿಂದ ಪರಾಟಾ ಮಾತ್ರವಲ್ಲ ಪಲ್ಯ, ಪಲಾವ್, ಹೀಗೆ ವಿವಿಧ ರೀತಿಯ ಆಹಾರ ಮಾಡಿ ಸೇವಿಸಬಹುದು. ಇದು ಆರೋಗ್ಯ ದೃಷ್ಟಿಯಲ್ಲಿ ಉತ್ತಮವಾಗಿದೆ.