ಮೈದಾ ಬೇಡವೇ ಬೇಡ; ಇದೊಂದು ಹಾಕಿದ್ರೆ ಪದರು ಪದರಾಗುತ್ತೆ, ಮೃದುವಾದ, ಮಂಗಳೂರು ಬನ್ಸ್ ರೆಡಿ ಆಗುತ್ತೆ!
Mangalore buns recipe with wheat flour: ಬನ್ಸ್ ಮಾಡಿದರೂ ಕೂಡ ಕೊರಟಾಗತ್ತೆ, ಮೈದಾ ಹಾಕಬೇಕು ಎಂದೆಲ್ಲ ದೂರು ಇರುವುದು. ಆದರೆ ಮೈದಾ ಹಾಕದೆ ಕೂಡ ಬನ್ಸ್ ಮಾಡಬಹುದು. ಹೌದು, ಮೃದುವಾಗಿ ಪದರು ಪದರಾಗಿ ಬನ್ಸ್ ಮಾಡುವುದು ಹೇಗೆ? ಇಲ್ಲಿ ಸಿಂಪಲ್ ವಿಧಾನವಿದೆ.

ಬಾಳೆಹಣ್ಣಿನ ಆಯ್ಕೆ ಹೇಗಿರಬೇಕು?
ನಾಲ್ಕು ಅಥವಾ ಐದು ಬಾಳೆಹಣ್ಣನ್ನು ತಗೊಳ್ಳಿ, ಬಾಳೆಹಣ್ಣು ಸಿಹಿ ಇರುತ್ತದೆ, ಹೀಗಾಗಿ ಎರಡು ಚಮಚ ಸಕ್ಕರೆ ಹಾಕಿ, ಇನ್ನೂ ಸಿಹಿ ಬೇಕು ಎಂದರೆ ಇನ್ನೂ ಸ್ವಲ್ಪ ಬಾಳೆಹಣ್ಣು ಹಾಕಿಕೊಳ್ಳಿ.
ಏನೇನು ಹಾಕಬೇಕು?
ಈ ಬಾಳೆಹಣ್ಣಿಗೆ ಒಂದು ಚಮಚ ಜೀರಿಗೆ, ಸ್ವಲ್ಪ ಸೋಡಾ, ಅರ್ಧ ಕಪ್ ಮೊಸರು ತಗೊಳ್ಳಿ. ಇದನ್ನೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ. ಅಷ್ಟೇ ಅಲ್ಲದೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಳ್ಳಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ
ಗೋಧಿ ಹಿಟ್ಟು ಹಾಕಿ
ಈ ಮಿಶ್ರಣಕ್ಕೆ ಎರಡು ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಇವೆಲ್ಲವನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಿ, ಮತ್ತೆ ಈ ಹಿಟ್ಟು ಡ್ರೈ ಆದರೆ ಮತ್ತೆ ಬಾಳೆಹಣ್ಣು ಪೇಸ್ಟ್ ಹಾಕಿಕೊಳ್ಳಿ. ಹಿಟ್ಟು ಮೆತ್ತಗೆ ಆಗಬಾರದು, ಗಟ್ಟಿಯೂ ಆಗಬಾರದು, ಹಾಗೆ ರೆಡಿ ಮಾಡಿಕೊಳ್ಳಬೇಕು.
ದಪ್ಪದಾಗಿ ಲಟ್ಟಿಸಿಕೊಳ್ಳಿ
ರಾತ್ರಿ ಕಲಸಿಟ್ಟ ಹಿಟ್ಟನ್ನು ಬೆಳಗ್ಗೆ ಬಳಸಿಕೊಂಡರೆ ಉತ್ತಮ. ಸ್ವಲ್ಪ ದಪ್ಪಗೆ ಬನ್ಸ್‌ಗೆ ಲಟ್ಟಿಸಿಕೊಂಡರೆ ಪದರ ಪದರ ಥರ ಬನ್ಸ್ ರೆಡಿ ಆಗುವುದು. ಇದನ್ನು ಕಾದ ಎಣ್ಣೆಗೆ ಹಾಕಿ ಕರೆಯಿರಿ, ಆಮೇಲೆ ಚಟ್ನಿ, ಸಾಂಭಾರ್ ಜೊತೆಗೆ ಸವಿಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

