Diwali Sweets: ಪಪ್ಪಾಯಿ ಹಲ್ವಾ ಮಾಡಿ ನೋಡಿ!
ಪ್ರತಿ ವರ್ಷ, ದೀಪಾವಳಿಯಲ್ಲಿ, ನೀವು ವಿಭಿನ್ನ ಸಿಹಿತಿಂಡಿಗಳನ್ನು ಮಾಡುತ್ತೀರಿ ಮತ್ತು ಅವುಗಳನ್ನು ಸ್ನೇಹಿತರು ಮತ್ತು ಸಂಬಂಧಿಕರಿಗೆ ತಿನ್ನಿಸುವಿರಿ, ಆದರೆ ಈ ಬಾರಿ ನೀವು ಪಪ್ಪಾಯಿ ಪುಡ್ಡಿಂಗ್ ಅನ್ನು (papaya pudding) ಸಿಹಿ ತಿಂಡಿಯಾಗಿ ಮಾಡಿ ಮತ್ತು ನಿಮ್ಮ ಕುಟುಂಬಕ್ಕೆ ಅದನ್ನು ತಿನ್ನಿಸಿ, ಇದರಿಂದ ಅವರು ಸಹ ವಿಭಿನ್ನ ರುಚಿಯನ್ನು ಸವಿಯುವ ಅವಕಾಶವನ್ನು ಪಡೆಯುತ್ತಾರೆ.
ಪಪ್ಪಾಯಿಯನ್ನು ಸಲಾಡ್ ಗಳಲ್ಲಿ ಅಥವಾ ತರಕಾರಿಗಳಾಗಿ ತಿಂದಿರಬೇಕು. ಆದರೆ ಇಂದು ಅದರಿಂದ ಸ್ವೀಟ್ ಹೇಗೆ ತಯಾರಿಸಬಹುದು ಎನ್ನೋ ಮಾಹಿತಿ ನೀಡಲಿದ್ದೇವೆ. ಇದನ್ನು ಮನೆಯಲ್ಲಿ ಪ್ರಯತ್ನಿಸಿ ದೀಪಾವಳಿ ಹಬ್ಬಕ್ಕೆ (diwali festival )ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ನೀಡಿ, ಇದರಿಂದ ಮುಂದಿನ ಬಾರಿ ಅವರು ಸಹ ಮನೆಯಲ್ಲಿ ಅದನ್ನು ಮಾಡುತ್ತಾರೆ ನೋಡಿ...
ಪಪ್ಪಾಯಿ ಪುಡ್ಡಿಂಗ್ (papaya pudding) ತಯಾರಿಸಲು ಬೇಕಾಗುವ ಸಾಮಗ್ರಿಗಳು
ಹಣ್ಣಾದ ಪಪ್ಪಾಯಿ
ಪೂರ್ಣ ಕ್ರೀಮ್ ಹಾಲು (full cream milk)
ದೇಸಿ ತುಪ್ಪ
ಬೆಲ್ಲ
ಗೋಡಂಬಿ
ಬಾದಾಮಿ
ಒಣದ್ರಾಕ್ಷಿ
ತೆಂಗಿನಕಾಯಿ
ಏಲಕ್ಕಿ ಪುಡಿ
ಪಪ್ಪಾಯಿ ಪುಡ್ಡಿಂಗ್ ಪಾಕ ವಿಧಾನ
ಮೊದಲು ಮಾಡಬೇಕಾದ ಕೆಲಸವೆಂದರೆ ಪಪ್ಪಾಯಿ ಪುಡ್ಡಿಂಗ್ ತಯಾರಿಸಲು ಪಪ್ಪಾಯಿ ಸಿಪ್ಪೆ ಸುಲಿಯುವುದು. ನಂತರ ಅದನ್ನು ಚೆನ್ನಾಗಿ ತೊಳೆದು ಮಧ್ಯದಿಂದ ಕತ್ತರಿಸಿ ಅದರ ಬೀಜಗಳನ್ನು ತೆಗೆಯಿರಿ. ಈಗ ಈ ಪಪ್ಪಾಯಿಯನ್ನು ತುರಿದುಕೊಳ್ಳಿ. ಪುಡ್ಡಿಂಗ್ ಗೆ ಬೇಯಿಸಿದ ಪಪ್ಪಾಯಿಯನ್ನು ಸಹ ಬಳಸಬಹುದು.
ನಂತರ ಬಾದಾಮಿ ಮತ್ತು ಗೋಡಂಬಿಯನ್ನು ನುಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಈಗ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು (ದಪ್ಪ ತಳದ ಪಾತ್ರೆ)ಇಟ್ಟು ಅದನ್ನು ಸ್ವಲ್ಪ ಬಿಸಿ ಮಾಡಿ. ಬಳಿಕ ಅದಕ್ಕೆ ತುಪ್ಪ ಹಾಕಿ. ತುಪ್ಪ ಸ್ವಲ್ಪ ಬಿಸಿಯಾದ ತಕ್ಷಣ ತುರಿದ ಪಪ್ಪಾಯಿ ಹಾಕಿ ಚೆನ್ನಾಗಿ ಕೈ ಆಡಿಸುತ್ತಿರಿ. ಪಪ್ಪಾಯಿಯನ್ನು ಚೆನ್ನಾಗಿ ಹುರಿಯುವವರೆಗೆ ಅದನ್ನು ಹಾಗೆ ಮಾಡಿ.
ಪಪ್ಪಾಯಿ ಹುರಿಯಲು ಪ್ರಾರಂಭಿಸಿದಾಗ, ಹಾಲನ್ನು ಸೇರಿಸಲು ಸಿದ್ಧರಾಗಿ. ಏಕೆಂದರೆ ಪಪ್ಪಾಯಿಯನ್ನು ಹುರಿದ ತಕ್ಷಣ, ನೀವು ಅದಕ್ಕೆ ಹಾಲನ್ನು ಸೇರಿಸಬೇಕು, ಮತ್ತು ಪಪ್ಪಾಯಿಗೆ ಸೇರಿಸಿದ ಹಾಲು ದಪ್ಪವಾಗುವವರೆಗೆ ಅದನ್ನು ಚೆನ್ನಾಗಿ ಸೌಟು ಹಾಕಿ ತಿರುವುತ್ತಿರಬೇಕು. ಇಲ್ಲವಾದರೆ ತಳ ಹತ್ತುವ ಸಾಧ್ಯತೆ ಇದೆ. ಆದುದರಿಂದ ಹೆಚ್ಚು ಜಾಗರೂಕರಾಗಿರುವುದು ಮುಖ್ಯ.
ಮಧ್ಯಮ ಶಾಖದ ಮೇಲೆ ಗ್ಯಾಸ್ ಮೇಲೆ ಮತ್ತೊಂದು ಪಾತ್ರೆಗೆ ಸ್ವಲ್ಪ ನೀರನ್ನು ಸೇರಿಸಿ ಮತ್ತು ಬೆಲ್ಲವನ್ನು (jaggery) ಸೇರಿಸಿ ಚೆನ್ನಾಗಿ ಕುಡಿಸಿ. ಬೆಲ್ಲ ಚೆನ್ನಾಗಿ ಕರಗಿ ನೀರಿನೊಂದಿಗೆ ಬೆರೆತಾಗ ಗ್ಯಾಸ್ ಆಫ್ ಮಾಡಿ. ಬೆಲ್ಲದ ಬದಲು ಸಕ್ಕರೆಯನ್ನೂ ಬಳಸಬಹುದು. ಆದರೆ ಬೆಲ್ಲ ಆರೋಗ್ಯಕ್ಕೆ ತುಂಬಾ ಉತ್ತಮ. ಆದುದರಿಂದ ಬೆಲ್ಲವನ್ನೇ ಬಳಕೆ ಮಾಡಿ.
ಪಪ್ಪಾಯಿಗೆ ಹಾಕಿದ ಹಾಲು ದಪ್ಪವಾದಾಗ, ಕರಗಿದ ಬೆಲ್ಲದಿಂದ ತಯಾರಿಸಿದ ಸಿರಪ್ ಅನ್ನು ಈ ಮಿಶ್ರಣಕ್ಕೆ ಸೇರಿಸಿ. ಈಗ ಬೆಲ್ಲ ದಪ್ಪಗಾಗುವುದರ ಜೊತೆಗೆ ಪಪ್ಪಾಯಿ ಯೊಂದಿಗೆ ಮಿಶ್ರಣವಾಗುವಂತೆ ಒಟ್ಟಿಗೆ ಬೇಯಿಸಿ. ಎಲ್ಲಾ ಸರಿಯಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ.
ಗ್ಯಾಸ್ ನಲ್ಲಿ ಕಡಿಮೆ ಉರಿಯಲ್ಲಿ ಒಂದು ಪ್ಯಾನ್ ಇಟ್ಟು, ದೇಸಿ ತುಪ್ಪ ಹಾಕಿ ಬಿಸಿ ಮಾಡಲು ಬಿಡಿ. ತುಪ್ಪ ಬಿಸಿಯಾದಾಗ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಸೇರಿಸಿ. ಒಣ ಹಣ್ಣು ಹೊಂಬಣ್ಣಕ್ಕೆ ತಿರುಗಿದಾಗ, ತಯಾರಿಸಿದ ಪಪ್ಪಾಯಿ ಪುಡ್ಡಿಂಗ್ ಗೆ ಸೇರಿಸಿ ಮತ್ತು ಮಿಶ್ರಣ ಮಾಡಿ. ಈಗ ರುಚಿಕರವಾದ ಪಪ್ಪಾಯಿ ಪುಡ್ಡಿಂಗ್ (pappaya pudding) ಸಿದ್ಧವಾಗಿದೆ.