ತೂಕ ಇಳಿಸಲು ಗೋಧಿ ಬದಲು ಈ ಹಿಟ್ಟಿನ ಚಪಾತಿ ಟ್ರೈ ಮಾಡಿ!
ರೊಟ್ಟಿ, ಚಪಾತಿ ಅಥವಾ ಫುಲ್ಕಾ ಹೆಚ್ಚಿನವರಿಗೆ ಊಟ ಪೂರ್ಣಗೊಳ್ಳುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳಲು ಬಯಸಿದರೆ ಗೋಧಿ ಹಿಟ್ಟಿ ಚಪಾತಿ ಯಾ ರೊಟ್ಟಿಯಿಂದ ದೂರವಿರುವುದು ಉತ್ತಮ. ತಿನ್ನಲು ಇದನ್ನು ನಿಷೇಧಿಸಲಾಗಿದೆ, ಏಕೆಂದರೆ ಅದರಲ್ಲಿ ಗ್ಲುಟನ್ ಪ್ರಮಾಣವು 12 ರಿಂದ 13 ಪ್ರತಿಶತದಷ್ಟು ಇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಗೋಧಿ ಹಿಟ್ಟಿನಲ್ಲಿ ಹೆಚ್ಚು ಗ್ಲುಟನ್ ಕೂಡ ಸೇರಿಸಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಗೋಧಿಯ ಬದಲು, ಇತರ ಹಿಟ್ಟುಗಳಿಂದ ರೊಟ್ಟಿ ತಯಾರಿಸಿ ನೋಡಿ. ಇವು ಆರೋಗ್ಯಕ್ಕೂ ಒಳ್ಳೆಯದು ಮತ್ತು ತೂಕವನ್ನು ಕಡಿಮೆ ಮಾಡುತ್ತದೆ.
ಓಟ್ಸ್ ಚಪಾತಿ:
ಓಟ್ಸ್ ಗ್ಲುಟನ್ ಇಲ್ಲದ ಧಾನ್ಯವಾಗಿದ್ದು, ಅನೇಕ ಜೀವಸತ್ವಗಳು, ಫೈಬರ್, ಆಂಟಿಆಕ್ಸಿಡೆಂಟ್ ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ತೂಕ ಇಳಿಸುತ್ತದೆ. ಜೊತೆಗೆ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಓಟ್ಸ್ ಚಪಾತಿ ಮಾಡಲು, ಮೊದಲು ಓಟ್ಸ್‌ನ್ನು ನುಣ್ಣಗೆ ಹಿಟ್ಟು ಮಾಡಿಕೊಳ್ಳಿ. ನೀರು ಸೇರಿಸಿ ಮೃದುವಾಗಿ ಕಲೆಸಿ. ಲಟ್ಟಿಸಿ, ಬೇಯಿಸಿದರೆ ಓಟ್ಸ್ ಚಪಾತಿ ರೆಡಿ.
ರಾಗಿ ರೊಟ್ಟಿ:
ಪ್ರೋಟೀನ್‌ನಲ್ಲಿ ಸಮೃದ್ಧವಾಗಿರುವ ರಾಗಿ ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿ ಮಾಡುತ್ತದೆ. ಜೊತೆಗೆ ತೂಕವನ್ನು ಕಡಿಮೆ ಮಾಡುತ್ತದೆ.
ಬಾರ್ಲಿ ಚಪಾತಿ:
ಬಾರ್ಲಿ ಜೀರ್ಣಕ್ರಿಯೆ ಜೊತೆ ಕೊಲೆಸ್ಟ್ರಾಲ್ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಬಾರ್ಲಿ ಹಿಟ್ಟನ್ನು ಬೆಚ್ಚಗಿನ ನೀರಿನಲ್ಲಿ ಕಲೆಸಿ ಚಪಾತಿ ತಯಾರಿಸಬಹುದು.
ಕಡಲೆ ಹಿಟ್ಟಿನ ಚಪಾತಿ:
ಕಡಲೆ ಹಿಟ್ಟಿನ ಚಪಾತಿ ತುಂಬಾ ಪೌಷ್ಟಿಕಾಂಶಗಳಿದ ಕೂಡಿರುತ್ತದೆ. ಈ ಹಿಟ್ಟು ಅಂಗಡಿಗಳಲ್ಲಿ ಸುಲಭವಾಗಿ ದೊರೆಯುತ್ತದೆ. ನೀರು, ಹಾಲು ಯಾ ಮೊಸರಿನೊಂದಿಗೆ ಕಡಲೆ ಹಿಟ್ಟನ್ನು ಕಲೆಸಿ ರೋಟಿ ಯಾ ಚಪಾತಿ ತಯಾರಿಸಬಹುದು.
ಜೋಳದ ರೊಟ್ಟಿ:
ಗ್ಲುಟನ್ ಮುಕ್ತವಾಗಿರುವ ಜೋಳದಲ್ಲಿ ಮೆಗ್ನೀಷಿಯಮ್ ಸಮೃದ್ಧವಾಗಿದೆ. ಮೂಳೆಗಳನ್ನು ಬಲಪಡಿಸುತ್ತದೆ. ಇದಲ್ಲದೆ ಇದು ತೂಕ ಇಳಿಕೆಗೂ ತುಂಬಾ ಪರಿಣಾಮಕಾರಿ
ಬಾದಾಮಿ ಚಪಾತಿ:
ಬಾದಾಮಿ ಪೊಟ್ಯಾಷಿಯಮ್, ವಿಟಮಿನ್, ಮೆಗ್ನೀಷಿಯಮ್ ಮತ್ತು ಇತರೆ ಪೋಷಕಾಂಶಗಳನ್ನು ಹೊಂದಿರುತ್ತದೆ. ರಕ್ತದ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಆ್ಯಂಟಿ ಆಕ್ಸಿಡೆಂಟ್ಸ್ ಭರಿತ ಬಾದಾಮಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಬಾದಾಮಿ ಹಿಟ್ಟು ಮಾರುಕಟ್ಟೆಯಲ್ಲಿ ಸಿಗುತ್ತದೆ.
ಮಿಕ್ಸ್‌ಡ್ ಹಿಟ್ಟಿನ ಚಪಾತಿ:
6 ಬಗೆಯ ರೊಟ್ಟಿಗಳನ್ನು ಸೇವಿಸಿದ ನಂತರ, ಏಳನೇ ದಿನ ಮೇಲೆ ಹೇಳಿದ ಎಲ್ಲಾ ಹಿಟ್ಟುಗಳನ್ನು ಬೆರೆಸಿ ಅದರ ರೊಟ್ಟಿ ಅಥವಾ ಪರೋಟಾ ತಯಾರಿಸಬಹುದು.