ಬೆಂಡೆಕಾಯಿ ಪಲ್ಯ ಮಾಡುವಾಗ ಈ ಒಂದು ಬಿಳಿ ಪದಾರ್ಥ ಹಾಕಿ.. ಗರಿಗರಿಯಾಗಿ, ಹೆಚ್ಚು ರುಚಿಯಾಗಿರುತ್ತೆ
How to remove sliminess from bhindi: ಬೆಂಡೆಕಾಯಿ ಪಲ್ಯ ಮಾಡುವಾಗ ಅದಕ್ಕೆ ಈ ಒಂದು ಪದಾರ್ಥ ಸೇರಿಸಿದ ತಕ್ಷಣ, ಬೆಂಡೆಕಾಯಿಯ ಜಿಗುಟುತನ ಮಾಯವಾಗಿ ಅದು ಹೇಗೆ ಮಿರಮಿರ ಅಂತ ಮಿಂಚುತ್ತೆ ಹಾಗೂ ಗರಿಗರಿಯಾಗಿ, ಕ್ರಿಸ್ಪಿಯಾಗಿ ಸಿದ್ಧವಾಗುತ್ತದೆ ಎಂದು ಇವತ್ತು ತಿಳಿಯೋಣ.
ರುಚಿ ರುಚಿಯಾಗಿ ಗರಿಗರಿಯಾಗಿ ಬರುತ್ತೆ
ರುಚಿ ರುಚಿಯಾಗಿ ಗರಿಗರಿಯಾಗಿ ಬರುತ್ತೆ
ಬೆಂಡೆಕಾಯಿ ಎಷ್ಟೋ ಜನರ ನೆಚ್ಚಿನ ತರಕಾರಿಗಳಲ್ಲಿ ಒಂದಾಗಿದೆ. ಮಸಾಲಾ ಬೆಂಡೆಕಾಯಿ ಇರಲಿ ಅಥವಾ ಸಿಂಪಲ್ ಬೆಂಡೆಕಾಯಿ ಫ್ರೈ ಇರಲಿ, ಇದರ ರುಚಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುತ್ತದೆ. ಆದರೆ, ಬೆಂಡೆಕಾಯಿ ಪಲ್ಯ ಮಾಡುವಾಗ ಅದರ ಜಿಗುಟುತನ (ಲೋಳೆ) ದೊಡ್ಡ ಸಮಸ್ಯೆಯಾಗುತ್ತದೆ. ಎಷ್ಟೋ ಜನರು ಈ ಜಿಗುಟುತನವನ್ನು ಹೋಗಲಾಡಿಸಲು ಹೆಚ್ಚು ಎಣ್ಣೆ ಬಳಸುತ್ತಾರೆ. ಆದರೆ ಈಗ ನಮ್ಮ ದಕ್ಷಿಣ ಭಾರತದ ಮಹಿಳೆಯೊಬ್ಬರು ಅತ್ಯಂತ ಸುಲಭವಾದ ಮತ್ತು ಸಾಂಪ್ರದಾಯಿಕ ಉಪಾಯವೊಂದನ್ನು ತಿಳಿಸಿಕೊಟ್ಟಿದ್ದಾರೆ. ಇದರಿಂದ ಬೆಂಡೆಕಾಯಿ ಜಿಗುಟುತನವಿಲ್ಲದೆ ರುಚಿಯಾಗಿ ಮತ್ತು ಗರಿಗರಿಯಾಗಿ ಮೂಡಿಬರುತ್ತದೆ. ಬನ್ನಿ, ಆ ಉಪಾಯ ಏನೆಂದು ತಿಳಿಯೋಣ.
ಬೆಂಡೆಕಾಯಿಯ ಜಿಗುಟುತನಕ್ಕೆ ಮೊಸರೇ ಸರಳ ಪರಿಹಾರ!
ಬೆಂಡೆಕಾಯಿಯ ಜಿಗುಟುತನಕ್ಕೆ ಮೊಸರೇ ಸರಳ ಪರಿಹಾರ!
ಬೆಂಡೆಕಾಯಿಯ ಒಳಗೆ 'ಮ್ಯೂಸಿಲೇಜ್' (Mucilage) ಎಂಬ ನೈಸರ್ಗಿಕ ಜಿಗುಟು ಪದಾರ್ಥ ಇರುತ್ತದೆ. ಬೆಂಡೆಕಾಯಿಯನ್ನು ಕತ್ತರಿಸುವಾಗ ಅಥವಾ ಬೇಯಿಸುವಾಗ ಇದು ಹೊರಬರಲು ಪ್ರಾರಂಭಿಸುತ್ತದೆ. ಇಂತಹ ಸಂದರ್ಭದಲ್ಲಿ, ಪಲ್ಯ ಮಾಡುವಾಗ ಸ್ವಲ್ಪ ಮೊಸರು (Curd) ಸೇರಿಸುವುದರಿಂದ ಅದರ ಜಿಗುಟುತನ ಸಂಪೂರ್ಣವಾಗಿ ಇಲ್ಲವಾಗುತ್ತದೆ. ಇದು ಅಜ್ಜಿ-ತಾತನ ಕಾಲದಿಂದಲೂ ಬಳಸಲಾಗುತ್ತಿರುವ ಸಾಂಪ್ರದಾಯಿಕ ವಿಧಾನವಾಗಿದೆ. ಮೊಸರಿನಲ್ಲಿರುವ ನೈಸರ್ಗಿಕ ಆಮ್ಲೀಯ ಅಂಶವು (Acidic element) ಬೆಂಡೆಕಾಯಿಯ ಜಿಗುಟು ಪದಾರ್ಥದೊಂದಿಗೆ ಪ್ರಕ್ರಿಯೆ ನಡೆಸಿ, ಅದರ ಲೋಳೆಯನ್ನು ಕಡಿಮೆ ಮಾಡುತ್ತದೆ. ಇದೇ ಕಾರಣಕ್ಕೆ ಮೊಸರು ಹಾಕಿದ ನಂತರ ಬೆಂಡೆಕಾಯಿ ಪಲ್ಯ ಬಿಡಿಬಿಡಿಯಾಗಿ ಮತ್ತು ಗರಿಗರಿಯಾಗಿ ಬರುತ್ತದೆ.
ರುಚಿಯೂ ಕೂಡ ಹೆಚ್ಚಾಗುತ್ತೆ
ರುಚಿಯೂ ಕೂಡ ಹೆಚ್ಚಾಗುತ್ತೆ
ಮೊಸರು ಕೇವಲ ಜಿಗುಟುತನವನ್ನು ಮಾತ್ರ ದೂರ ಮಾಡುವುದಿಲ್ಲ, ಬದಲಿಗೆ ಬೆಂಡೆಕಾಯಿಯ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ದಕ್ಷಿಣ ಭಾರತದ ಅಡುಗೆಗಳಲ್ಲಿ ಹುಳಿ ರುಚಿಗಾಗಿ ಮೊಸರು ಮತ್ತು ಹುಣಸೆಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಮೊಸರು ಹಾಕುವ ಸರಿಯಾದ ವಿಧಾನ
ಮೊಸರು ಹಾಕುವ ಸರಿಯಾದ ವಿಧಾನ
*ಬೆಂಡೆಕಾಯಿಯನ್ನು ಬಾಣಲೆಗೆ ಹಾಕಿದ ತಕ್ಷಣವೇ ಮೊಸರು ಸೇರಿಸಬಾರದು.
*ಮೊದಲು ಬೆಂಡೆಕಾಯಿಯನ್ನು ಎಣ್ಣೆ ಮತ್ತು ಮಸಾಲೆಗಳೊಂದಿಗೆ 4 ರಿಂದ 5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ.
*ಅದರ ನಂತರ, ಉರಿಯನ್ನು ಕಡಿಮೆ ಮಾಡಿ (ಸಿಮ್‌ನಲ್ಲಿಟ್ಟು) 1 ರಿಂದ 2 ಚಮಚ ಚೆನ್ನಾಗಿ ಕಡಿದ ಮೊಸರನ್ನು ಹಾಕಿ.
*ಮೊಸರು ಹಾಕಿದ ನಂತರ ಕೈ ಬಿಡದೆ ಸೌಟಿನಿಂದ ತಿರುಗಿಸುತ್ತಲೇ ಇರಿ, ಇಲ್ಲದಿದ್ದರೆ ಮೊಸರು ಒಡೆಯುವ ಸಾಧ್ಯತೆ ಇರುತ್ತದೆ.
*ಆಮೇಲೆ ಬೆಂಡೆಕಾಯಿಯನ್ನು ನಿಮಗೆ ಬೇಕಾದಷ್ಟು ಗರಿಗರಿಯಾಗುವ ತನಕ ಬೇಯಿಸಿ. ಬೆಂಡೆಕಾಯಿಗೆ ಮೊಸರು ಹಾಕುವ ಈ ಸುಲಭ ಟ್ರಿಕ್ ಇಂದಿಗೂ ಅಷ್ಟೇ ಪರಿಣಾಮಕಾರಿಯಾಗಿದೆ ಮತ್ತು ಇದು ಅಡುಗೆಯ ಪ್ರಕ್ರಿಯೆಯನ್ನು ಸುಲಭಗೊಳಿಸುವುದರ ಜೊತೆಗೆ ಅದ್ಭುತ ರುಚಿಯನ್ನೂ ನೀಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.