'ನಾನೂ ಬಡತನ ಕಂಡಿದ್ದೇನೆ': ಆಸ್ಟ್ರೇಲಿಯಾದಲ್ಲಿ ಬಡವರಿಗೆ ತುತ್ತು ನೀಡಿದ ಭಾರತದ ಬಾಣಸಿಗ
ಆಸ್ಟ್ರೇಲಿಯಾದಲ್ಲಿ ಭಾರತೀಯ ಬಾಣಸಿಗನ ಸಮಾಜ ಸೇವೆ | ಹಸಿದವರ ಕಂಡು ಕರಗಿತು ಭಾರತೀಯ ಬಾಣಸಿಗನ ಮನಸು..
ಆಸ್ಟ್ರೇಲಿಯಾದಲ್ಲಿ ಭಾರತೀಯ ಬಾಣಸಿಗ ಸಮಾಜ ಸೇವೆಯಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೊರೋನಾ ಸೋಂಕಿನ ವೇಳೆ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿದ ದಮಾನ್ ಶ್ರೀ ವಾಸ್ತವ್ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.
ಬಹಳಷ್ಟು ದಾನಿಗಳು ದಮಾನ್‌ರೊಂದಿಗೆ ಕೈ ಜೋಡಿಸಿ ಬಡವರ ಹಸಿವು ನೀಗಿಸಿದ್ದಾರೆ.
ಕೊರೋನಾ ವೈರಸ್ ವಿಶ್ವದೆಲ್ಲೆಡೆ ತಂದ ಫಜೀತಿ ಹೇಳ ತೀರದು.
ಭಾರತದಲ್ಲಿ ಮಾತ್ರವಲ್ಲ ಮುಂದುವರಿದ ದೇಶಗಳಲ್ಲೂ ಜನರು ಹೊತ್ತು ಹೊತ್ತು ಊಟಕ್ಕೂ ಪರದಾಡುವಂತೆ ಮಾಡಿದೆ.
ಆಸ್ಟ್ರೇಲಿಯಾದಲ್ಲಿ ಭಾರತೀಯ ಬಾಣಸಿಗ ದಮಾನ್ ಶ್ರೀ ವಾಸ್ತವ್ ಹಸಿದವರಿಗೆ ಊಟದ ವ್ಯವಸ್ಥೆ ಮಾಡಿ, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಹಸಿದ ನಿರ್ಗತಿಕರು, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿ, ಸೈ ಎನಿಸಿಕೊಂಡಿದ್ದಾರೆ.
ಆಸ್ಟ್ರೇಲಿಯಾಗೆ ಹೋದ ಮೊದಲ ದಿನಗಳು ಮತ್ತು ಭಾರತದಲ್ಲಿ ಊಟಕ್ಕೆ ಪರದಾಡಿದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ದಮಾನ್.
ಆಸ್ಟ್ರೇಲಿಯಾಗೆ ಬಂದ ಆರಂಭದ ದಿನಗಳಲ್ಲಿ ಆಹಾರವಿಲ್ಲದೆ ಪರದಾಡಿದ್ದನ್ನು ನೆನಪಿಸಿಕೊಳ್ಳುತ್ತಾರೆ ಶೆಫ್
ಹಸಿವಿನಿಂದದ ಬಳಲಿದ ದಿನಗಳು ನನಗಿನ್ನೂ ನೆನಪಲ್ಲಿದೆ. ಆ ನೋವು ಇಂಥದ್ದೊಂದು ಕಾರ್ಯಕ್ಕೆ ಮಂದಾಗುವಂತೆ ಮಾಡಿತು ಎನ್ನುತ್ತಾರೆ ಶ್ರೀ ವಾಸ್ತವ್.
ದಮಾನ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ.
ಸ್ಥಳೀಯ ಸಂಸ್ಥೆಯೂ ಇವರಿಗಾಗಿ ಟ್ರಕ್ ವ್ಯವಸ್ಥೆ ಮಾಡಿದ್ದು, ತಮ್ಮ ಕಾರ್ಯವನ್ನು ಮತ್ತಷ್ಟು ವಿಸ್ತರಿಸಿದ್ದಾರೆ. ಇಂಥವರ ಸಂಖ್ಯೆ ವೃದ್ಧಿಸಲಿ.