ಆಲೂಗಡ್ಡೆಗಳನ್ನು ಸುದೀರ್ಘ ಕಾಲ ಹಾಳಾಗದಂತೆ ಕಾಪಾಡುವುದು ಹೇಗೆ?
ಆಲೂಗಡ್ಡೆಯನ್ನು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಬಳಸಲಾಗುತ್ತದೆ. ಇದನ್ನು ತರಕಾರಿಗಳ ರಾಜ ಎಂದೂ ಕರೆಯಲಾಗುತ್ತದೆ. ಏಕೆಂದರೆ ನಿಮಗೆ ಏನೂ ಮಾಡಬೇಕೆಂದು ತಿಳಿಯದೇ ಇದ್ದಾಗ, ಅಥವಾ ಆಲೂಗಡ್ಡೆಯಿಂದ ಏನಾದರೊಂದನ್ನು ಬೇಗ ಮಾಡಿಬಿಡಬಹುದು. ಅಲ್ಲದೇ, ನೀವು ಅದನ್ನು ತರಕಾರಿಯಾಗಿ ತಯಾರಿಸಲಿ ಅಥವಾ ಅನ್ನ, ಪರೋಟಾಕ್ಕೆ ಬಳಸಿ, ಅದು ರುಚಿರುಚಿಯಾಗಿರುತ್ತದೆ. ಅದಕ್ಕಾಗಿಯೇ ಜನರು ಹೆಚ್ಚಾಗಿ ಆಲೂಗಡ್ಡೆಯನ್ನು ಸಂಗ್ರಹಿಸುತ್ತಾರೆ. ಆದರೆ, ಇದು ಹಾಳಾಗದಂತೆ ಕಾಪಾಡಿಕೊಳ್ಳುವುದು ಹೇಗೆ?
ಮನೆಯಲ್ಲಿ ಹೆಚ್ಚು ಹೆಚ್ಚು ಆಲೂಗಡ್ಡೆ ಸಂಗ್ರಹಿಸಿಡುವುದರಿಂದ ಕೆಲವೊಮ್ಮೆ, ಅವು ಮೊಳಕೆಯೊಡೆಯುತ್ತವೆ ಅಥವಾ ಮುನ್ನೆಚ್ಚರಿಕೆಗಳ ಕೊರತೆಯಿಂದಾಗಿ ತ್ವರಿತವಾಗಿ ಹಾನಿಗೊಳಗಾಗುತ್ತವೆ. ಹಾಗಾದರೆ ಇಂತಹ ಸಂದರ್ಭದಲ್ಲಿ ಅವುಗಳನ್ನು ರಕ್ಷಣೆ ಮಾಡುವುದು ಹೇಗೆ? ಬಹುಕಾಲದವರೆಗೆ ಆಲೂಗಡ್ಡೆಯನ್ನು ರಕ್ಷಿಸುವುದು ಹೇಗೆ ತಿಳಿಯೋಣ...
ಅನೇಕ ಮನೆಗಳಲ್ಲಿ ಹೆಚ್ಚಾಗಿ ಆಲೂಗಡ್ಡೆಗಳನ್ನು ಸಂಗ್ರಹಿಸಲಾಗುತ್ತದೆ, ಆದ್ದರಿಂದ ಅಗತ್ಯವಿದ್ದರೆ ಅವುಗಳನ್ನು ಆಗಾಗ್ಗೆ ಮಾರುಕಟ್ಟೆಯಿಂದ ತರಬೇಕಾಗಿಲ್ಲ. ಆದರೆ ಅವುಗಳನ್ನು ಹೇಗೆ ಸಂಗ್ರಹಿಸುವುದು ಎಂದು ಕೆಲವೇ ಜನರಿಗೆ ತಿಳಿದಿದೆ.
ನೀವು ಆಲೂಗಡ್ಡೆಗಳನ್ನು ಮನೆಯಲ್ಲಿ ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಕೆಲವು ಮಾರ್ಗಗಳು ಸಮಸ್ಯೆಯನ್ನು ಸುಲಭಗೊಳಿಸಬಹುದು. ಅಂತಹ ಮಾರ್ಗಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ...
ಆಲೂಗಡ್ಡೆಗಳನ್ನು ತೇವಾಂಶವಿರುವ ಸ್ಥಳಗಳಲ್ಲಿ ಇಡುವುದನ್ನು ತಪ್ಪಿಸಿ. ಅದೇ ಸಮಯದಲ್ಲಿ, ಅವುಗಳನ್ನು ಪ್ಲಾಸ್ಟಿಕ್ ಚೀಲಗಳು ಇತ್ಯಾದಿಗಳಲ್ಲಿ ಕಟ್ಟಿಡಬಾರದು. ಇದರ ತೇವಾಂಶವು ಆಲೂಗಡ್ಡೆಯನ್ನು ಬೇಗ ಹಾಳುಮಾಡಬಹುದು.
ಅಂತೆಯೇ ಆಲೂಗಡ್ಡೆಗಳನ್ನು ರೆಫ್ರಿಜರೇಟರ್ನಲ್ಲಿಯೂ ಇಡಬೇಡಿ. ರೆಫ್ರಿಜರೇಟರ್‌ನಲ್ಲಿ ಇಡುವುದು ಆಲೂಗಡ್ಡೆಯಲ್ಲಿರುವ ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ. ಇದು ಆರೋಗ್ಯಕ್ಕೆ ಅಪಾಯಕಾರಿ.
ಆಲೂಗಡ್ಡೆಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಬೇಕಾದರೆ, ಅವುಗಳಲ್ಲಿ ರುವ ಹಾನಿಗೊಳಗಾದ ಅಥವಾ ಕಲೆಯಾದ ಆಲೂಗಡ್ಡೆಗಳನ್ನು ಇಡುವ ಮೊದಲು ಬೇರ್ಪಡಿಸಿ, ಏಕೆಂದರೆ ಒಂದು ಕೊಳೆತ ಆಲೂಗಡ್ಡೆ ಇತರೆ ಆಲೂಗಡ್ಡೆಗಳನ್ನು ಸಹ ಹಾಳುಮಾಡಬಹುದು.
ಆಲೂಗಡ್ಡೆಗಳನ್ನು ಶೇಖರಿಸಿಡುತ್ತಿದ್ದರೆ ಅವುಗಳನ್ನು ತೊಳೆಯುವುದನ್ನು ತಪ್ಪಿಸಿ. ಏಕೆಂದರೆ ಅವುಗಳಿಗೆ ಸ್ವಲ್ಪ ತೇವಾಂಶ ಉಳಿದರೂ ಆಲೂಗಡ್ಡೆ ಬೇಗನೆ ಹಾಳಾಗುತ್ತದೆ.
ಈಗಾಗಲೇ ಆಲೂಗಡ್ಡೆಯನ್ನು ಹೊಂದಿದ್ದರೆ ಮತ್ತು ಮಾರುಕಟ್ಟೆಯಿಂದ ಹೊಸ ಆಲೂಗಡ್ಡೆಗಳನ್ನು ಖರೀದಿಸಿದ್ದರೆ, ಅವುಗಳನ್ನು ಹಳೆಯ ಆಲೂಗಡ್ಡೆಯಿಂದ ಪ್ರತ್ಯೇಕವಾಗಿರಿಸಿ. ಹಳೆಯ ಆಲೂಗಡ್ಡೆಯನ್ನು ಮೊದಲಿಗೆ ಬಳಸಲು ಸುಲಭವಾಗುತ್ತದೆ.
ಆಲೂಗಡ್ಡೆಗಳನ್ನು ಕತ್ತಲೆ ಮತ್ತು ಶುಷ್ಕ ಸ್ಥಳಗಳಲ್ಲಿ ಇರಿಸಿ. ಇದು ಅವು ಬೇಗನೆ ಮೊಳಕೆಯೊಡೆಯುವುದನ್ನು ತಡೆಯುತ್ತದೆ ಮತ್ತು ಅವುಗಳನ್ನು ಬಳಸಬಹುದು.
ಕೆಲವರು ಆಗಾಗ್ಗೆ ಹಣ್ಣುಗಳು ಮತ್ತು ಆಲೂಗಡ್ಡೆಗಳನ್ನು ಒಟ್ಟಿಗೆ ಹಾಕುತ್ತಾರೆ. ಅಂತೆಯೇ ಆಲೂ ಮತ್ತು ಈರುಳ್ಳಿಯನ್ನು ಒಟ್ಟಿಗೆ ಇಡಬೇಡಿ. ಇದರಿಂದ ಆಲೂಗಡ್ಡೆ ಬೇಗ ಹಾಳಾಗುತ್ತದೆ.