5 ನಿಮಿಷದಲ್ಲಿ ಮನೆಯಲ್ಲೇ ತಯಾರಿಸಬಹುದು ಫ್ರೆಶ್ ಕಬ್ಬಿನ ಹಾಲು!
ಬೇಸಿಗೆಯಲ್ಲಿ ತಣ್ಣನೆಯ ಕಬ್ಬಿನ ಹಾಲು ಕುಡಿಯಲು ಇಷ್ಟಪಡುವುದು ಸಾಮಾನ್ಯ. ಈಗ ಲಾಕ್‌ಡೌನ್ ಹಾಗೂ ಕೊರೋನಾ ಕಾರಣದಿಂದ ಕಬ್ಬಿನ ಹಾಲಿಗಾಗಿ ಮನೆಯಿಂದ ಹೊರಗೆ ಹೋಗುವುದು ಮತ್ತು ಕುಡಿಯುವುದು ಅಪಾಯ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ತಾಜಾ ಮತ್ತು ರುಚಿಯಾದ ಕಬ್ಬಿನ ಹಾಲನ್ನು ತಯಾರಿಸಬಹುದು. ಕಬ್ಬು ಇಲ್ಲದೆ ಈ ಜ್ಯೂಸ್ ತಯಾರಿಸಲು, ಬೆಲ್ಲ - ½ ಕೆಜಿ , ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಬ್ಲ್ಯಾಕ್ ಸಾಲ್ಟ್ ಮತ್ತು ನಿಂಬೆ ಹಣ್ಣು ಬೇಕು.
ಬೆಲ್ಲವನ್ನು ಕಬ್ಬಿನಿಂದಲೇ ತಯಾರಿಸಲಾಗುತ್ತದೆ. ಆದ್ದರಿಂದ ಬೆಲ್ಲದಿಂದ ಕಬ್ಬಿನ ಹಾಲು ತಯಾರಿಸಬಹುದು. ಮೊದಲು ಬೆಲ್ಲವನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
ಇದರ ನಂತರ, ಅದನ್ನು ಅರ್ಧ ಘಂಟೆಯವರೆಗೆ ನೀರಿನಲ್ಲಿ ನೆನಸಿ ಮತ್ತು ಬೆಲ್ಲದ ನೀರನ್ನು ಸೋಸಿ.
ನಂತರ ಪುದೀನ, ಕೊತ್ತಂಬರಿ ಸೊಪ್ಪು ನಿಂಬೆ ರಸ, ಕಪ್ಪು ಉಪ್ಪನ್ನು ಮಿಕ್ಸಿ ಮಾಡಿ ಕೊಳ್ಳಿ.
ಬೆಲ್ಲದ ನೀರಿಗೆ ರುಬ್ಬಿದ ಪೇಸ್ಟ್ ಸೇರಿಸಿ ಮತ್ತೆ ಚೆನ್ನಾಗಿ ಮಿಕ್ಸ್ ಮಾಡಿ.
ಅದನ್ನು ಫಿಲ್ಟರ್ ಮಾಡಿ.
ಮಾರುಕಟ್ಟೆಯಲ್ಲಿ ಸಿಗುವ ನೊರೆ ನೊರೆಯಾಗಿರುವ ಕಬ್ಬಿನ ಹಾಲು ಬಯಸಿದಲ್ಲಿ ಅದನ್ನು ಹ್ಯಾಂಡ್ ಬ್ಲೆಂಡರ್ನೊಂದಿಗೆ ಮಿಕ್ಸ್ ಮಾಡಿ.
ನಿಮಿಷಗಳಲ್ಲಿ ಸಿದ್ಧವಾದ ತಾಜಾ ಕಬ್ಬಿನ ಜ್ಯೂಸ್‌ಗೆ ಐಸ್ ಕ್ಯೂಬ್‌ಗಳನ್ನು ಸೇರಿಸಿ ಎಂಜಾಯ್ ಮಾಡಿ.
ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ.
ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಗೊಳಿಸುತ್ತದೆ. ಒಂದು ಲೋಟ ಕಬ್ಬಿನ ರಸವು ಬೇಸಿಗೆಯ ಎಲ್ಲಾ ಆಯಾಸವನ್ನು ಕಡಿಮೆ ಮಾಡುತ್ತದೆ.