ಅಡುಗೆ ಎಣ್ಣೆ ಬಳಸದೇ ರುಚಿಯಾದ ಮೀನು ಫ್ರೈ ಮಾಡುವುದು ಹೇಗೆ? ಆರೋಗ್ಯಕ್ಕೂ ಉತ್ತಮ
ಮೀನು ಆರೋಗ್ಯಕ್ಕೆ ಉತ್ತಮ. ಆದರೆ ಮೀನು ಫ್ರೈ ಮಾಡಲು ಎಣ್ಣೆ ಬಳಸಲಾಗುತ್ತದೆ. ಆರೋಗ್ಯ ದೃಷ್ಟಿಯಿಂದ ಆಯಿಲ್ ಫ್ರೈ ಅಥವಾ ಆಯಿಲ್ ಬಳಸಿ ಮಾಡುವ ತವಾ ಫ್ರೈ ಉತ್ತಮವಲ್ಲ. ಆದರೆ ಅತ್ಯಂತ ರುಚಿರುಚಿಯಾದ, ಆರೋಗ್ಯಕ್ಕೂ ಉತ್ತಮವಾದ ಮೀನು ಫ್ರೈ ಅಡುಗೆ ಎಣ್ಣೆ ಹಾಕದೇ ಮಾಡುವುದು ಹೇಗೆ?

ಮೀನು ಆಹಾರಗಳು ಉತ್ತಮ ಪೌಷ್ಠಿಕಾಂಶಗಳನ್ನು ಹೊಂದಿದೆ. ಹಲವು ಬಗೆಯ ಖಾದ್ಯಗಳನ್ನು ಮೀನಿನ ಮೂಲಕ ತಯಾರಿಸಲಾಗುತ್ತದೆ. ಈ ಪೈಕಿ ಬಹುತೇಕರ ಫೇವರಿಟ್ ಫಿಶ್ ಫ್ರೈ. ಮೀನು ಫ್ರೈಗೆ ಎಣ್ಣೆ ಬೇಕೆ ಬೇಕು. ಫ್ರೈ ಮೀನು ಮತ್ತಷ್ಟು ರುಚಿಯಾಗಿರುತ್ತದೆ. ಆದರೆ ಅಡುಗೆ ಎಣ್ಣೆ ಬಳಕೆ ಮಾಡದವರು, ಕಡಿಮೆ ಅಡುಗೆ ಎಣ್ಣೆ ಬಳಕೆ ಮಾಡುವವರಿಗೆ ಅತ್ಯಂತ ರುಚಿ ರುಚಿಯಾದ ಹಾಗೂ ಆರೋಗ್ಯಕ್ಕೂ ಉತ್ತಮವಾದದ ಮೀನು ಫ್ರೈ ಮಾಡಲು ಸಾಧ್ಯವಿದೆ. ಅದು ಯಾವುದೇ ಅಡುಗೆ ಎಣ್ಣೆ ಬಳಕೆ ಮಾಡದೇ ಮಾಡುವ ವಿಧಾನ ಇದು.
ಅಡುಗ ಎಣ್ಣೆ ಬಳಸದೆ ರುಚಿಯಾದ ಮೀನು ಫ್ರೈ ಎಲ್ಲರಿಗೂ ಸವಿಯಬಹುದು. ಇಲ್ಲಿ ಅಡುಗ ಎಣ್ಣೆ ಬದಲು ಬಾಳೆ ಎಲೆ ಬಳಕೆ ಮಾಡಲಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದೆ. ಜೊತೆಗೆ ರುಚಿಯಲ್ಲೂ ಯಾವುದೇ ಕಾಂಪ್ರಮೈಸ್ ಇಲ್ಲ. ಈ ಬಾಳೆ ಎಲೆ ಮೀನು ಫ್ರೈ ಮಾಡೋದು ಹೇಗೆ?
ಬೇಕಾಗುವ ಸಾಮಾಗ್ರಿಗಳು
ಮೀನು : 1 ಕೆಜಿ
ಅರಿಶಿನ ಪುಡಿ: 1 ಚಮಚ
ಮೆಣಸಿನ ಪುಡಿ : 2 ಚಮಚ
ಕಾಶ್ಮೀರಿ ಮೆಣಸಿನ ಪುಡಿ: 1 ಚಮಚ
ಗರಂ ಮಸಾಲ: 1 ಚಮಚ
ಕರಿಮೆಣಸಿನ ಪುಡಿ : 1 ಚಮಚ
ನಿಂಬೆ ರಸ: 1 ನಿಂಬೆಹಣ್ಣಿನ
ಉಪ್ಪು : ರುಚಿಗೆ ತಕ್ಕಷ್ಟು
ಕರಿಬೇವು : 2 ಎಸಳು
ಬಾಳೆ ಎಲೆ: 1
ಮಾಡುವ ವಿಧಾನ
ಮೊದಲು ಮೀನನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಿ. ನಂತರ ಅದಕ್ಕೆ ಅರಿಶಿನ ಪುಡಿ, ಮೆಣಸಿನ ಪುಡಿ, ಗರಂ ಮಸಾಲ, ಕರಿಮೆಣಸಿನ ಪುಡಿ, ಕಾಶ್ಮೀರಿ ಮೆಣಸಿನ ಪುಡಿ, ಉಪ್ಪು ಮತ್ತು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಇದನ್ನು ಸ್ವಲ್ಪ ಹೊತ್ತು ಹಾಗೆಯೇ ಇಡಬೇಕು. ನಂತರ ಒಂದು ಬಾಳೆ ಎಲೆಯ ಮೇಲೆ ಮೀನನ್ನು ಹರಡಿ, ಬಾಳೆ ಎಲೆಯ ಸಮೇತ ಬಿಸಿ ಪಾತ್ರೆಯಲ್ಲಿ ಇಟ್ಟು, ಮುಚ್ಚಳ ಮುಚ್ಚಿ, ಕಡಿಮೆ ಉರಿಯಲ್ಲಿ ಬೇಯಿಸಬೇಕು. ಇದಕ್ಕೆ ಎಣ್ಣೆ ಹಾಕುವ ಅಗತ್ಯವಿಲ್ಲ. ಬೇಗನೆ ಫ್ರೈ ಆಗುತ್ತದೆ. ಎಣ್ಣೆಯಿಲ್ಲದೆ ಮಾಡಬಹುದಾದ ಒಂದು ಮೀನಿನ ಫ್ರೈ ಇದು.