ರೆಸಿಪಿ - ಮನೆಯಲ್ಲೇ ಸುಲಭವಾಗಿ ಮಾಡಿ ಸೋಯಾ ಸಾಸ್!
ಚೈನೀಸ್ ಫುಡ್‌ಗಳಾದ ಮಂಚೂರಿಯನ್, ನೂಡಲ್ಸ್ ಮುಂತಾದವು ಈಗ ಭಾರತದಲ್ಲೂ ಫೇಮಸ್. ಇವುಗಳನ್ನು ಸಾಕಷ್ಟು ಜನ ಮನೆಯಲ್ಲೇ ತಯಾರಿಸುತ್ತಾರೆ. ಚೈನೀಸ್ ಅಡುಗೆಯಲ್ಲಿ ಸೋಯಾ ಸಾಸ್ ಬಳಕೆ ಜಾಸ್ತಿ. ಮಾರುಕಟ್ಟೆ ಸುಲಭವಾಗಿ ಸಿಗೋ ಈ ಸಾಸ್ ಅಸಲಿ, ನಕಲಿ ಕಂಡು ಹಿಡಿಯೋದೇ ಪ್ರಾಬ್ಲಂ. ದುಬಾರಿಯಾಗಿರುವ ಇವು ಆರೋಗ್ಯಕ್ಕೂ ಒಳ್ಳೆಯದಲ್ಲ. ಮನೆಯಲ್ಲೇ ಸುಲಭವಾಗಿ ಈ ಸಾಸ್ ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು 4 ಟೀ ಚಮಚ ಸಕ್ಕರೆ 2 ಚಮಚ ಬಿಳಿ ವಿನೆಗರ್ ಅರ್ಧ ಟೀಚಮಚ ಉಪ್ಪು ಅಥವಾ ರುಚಿಗೆ ಅನುಗುಣವಾಗಿ 1 ಗ್ಲಾಸ್ ನೀರು ಅಜಿನೊಮೊಟೊ ಅರ್ಧ ಟೀಚಮಚ

ಸೋಯಾ ಸಾಸ್ ತಯಾರಿಸಲು, ಮೊದಲು ಗ್ಯಾಸ್ ಮೇಲೆ ಪ್ಯಾನ್ ಇರಿಸಿ. ಪ್ಯಾನ್ ಬಿಸಿಯಾದಾಗ, ಅದಕ್ಕೆ ನಾಲ್ಕು ಟೀ ಚಮಚ ಸಕ್ಕರೆ ಹಾಕಿ.
ಸೋಯಾ ಸಾಸ್ ತಯಾರಿಸಲು, ಮೊದಲು ಗ್ಯಾಸ್ ಮೇಲೆ ಪ್ಯಾನ್ ಇರಿಸಿ. ಪ್ಯಾನ್ ಬಿಸಿಯಾದಾಗ, ಅದಕ್ಕೆ ನಾಲ್ಕು ಟೀ ಚಮಚ ಸಕ್ಕರೆ ಹಾಕಿ.
ಈಗ ಸಕ್ಕರೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಚೆನ್ನಾಗಿ ಕರಗಲು ಬಿಡಿ. ಸಕ್ಕರೆ ಸುಡದಂತೆ ಪ್ಲೇಮ್ ಕಡಿಮೆ ಮಾಡಿ.
ಈಗ ಸಕ್ಕರೆಯನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಚೆನ್ನಾಗಿ ಕರಗಲು ಬಿಡಿ. ಸಕ್ಕರೆ ಸುಡದಂತೆ ಪ್ಲೇಮ್ ಕಡಿಮೆ ಮಾಡಿ.
ಸಕ್ಕರೆ ಕಪ್ಪು ಬಣ್ಣಕ್ಕೆ ಬರುವವರೆಗೆ ಬಿಡಿ.
ಸಕ್ಕರೆ ಕಪ್ಪು ಬಣ್ಣಕ್ಕೆ ಬರುವವರೆಗೆ ಬಿಡಿ.
ಈಗ ನೀರು ಸೇರಿಸಿ ಐದು ನಿಮಿಷ ಕುದಿಸಿ.
ಈಗ ನೀರು ಸೇರಿಸಿ ಐದು ನಿಮಿಷ ಕುದಿಸಿ.
5 ನಿಮಿಷಗಳ ನಂತರ, ಅದಕ್ಕೆ ಉಪ್ಪು ಮತ್ತು ವಿನೆಗರ್ ಸೇರಿಸಿ. ಮಿಕ್ಸ್ ಮಾಡಿ
5 ನಿಮಿಷಗಳ ನಂತರ, ಅದಕ್ಕೆ ಉಪ್ಪು ಮತ್ತು ವಿನೆಗರ್ ಸೇರಿಸಿ. ಮಿಕ್ಸ್ ಮಾಡಿ
ಪುನಃ 5 ನಿಮಿಷಗಳ ನಂತರ ಅದಕ್ಕೆ ಅಜಿನೊಮೊಟೊ ಸೇರಿಸಿ. ಚೆನ್ನಾಗಿ ಕುದಿಯಲು ಬಿಡಿ.
ಪುನಃ 5 ನಿಮಿಷಗಳ ನಂತರ ಅದಕ್ಕೆ ಅಜಿನೊಮೊಟೊ ಸೇರಿಸಿ. ಚೆನ್ನಾಗಿ ಕುದಿಯಲು ಬಿಡಿ.
ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈಗ ಸೋಯಾ ಸಾಸ್ ರೆಡಿ. ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿಟ್ಟರೆ ಈ ಸಾಸ್ ತಿಂಗಳುಗಟ್ಟಲೆ ಹಾಳಾಗುವುದಿಲ್ಲ.
ಗ್ಯಾಸ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈಗ ಸೋಯಾ ಸಾಸ್ ರೆಡಿ. ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿಟ್ಟರೆ ಈ ಸಾಸ್ ತಿಂಗಳುಗಟ್ಟಲೆ ಹಾಳಾಗುವುದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.