ಕೆಲವೆಡೆ ನಕಲಿ ಮೊಟ್ಟೆ ಸಹ ಮಾರಾಟ ಮಾಡುತ್ತಾರಂತೆ... ಅದನ್ನು ಪತ್ತೆ ಮಾಡೋದು ಹೇಗೆ?
ಮೊಟ್ಟೆ ಪ್ರೊಟೀನ್‌ನಿಂದ ತುಂಬಿದ ಉತ್ತಮವಾದ ಪೌಷ್ಟಿಕ ಆಹಾರವಾಗಿದೆ. ಆದರೆ ದುಡ್ಡಿನ ಆಸೆಗಾಗಿ ಕೆಲವೆಡೆ ನಕಲಿ ಮೊಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಅದರ ಬಗ್ಗೆ ಹಲವಾರು ವರದಿಗಳು ಸಹ ಬಂದಿವೆ. ಅಸಲಿ ಮೊಟ್ಟೆಯಂತೆ ಕಾಣುವ ಇದು ಆರೋಗ್ಯಕ್ಕೆ ಮಾರಕವಾಗಿದೆ. ಆದರೆ ಒಂದು ಬಾರಿ ನೋಡಿದ ಕೂಡಲೇ ಈ ಮೊಟ್ಟೆ ನಕಲಿಯೋ ಅಥವಾ ಅಸಲಿಯೋ ಎಂದು ಕಂಡು ಹಿಡಿಯುವುದು ಕಷ್ಟವಾಗುತ್ತದೆ. ಆದುದರಿಂದ ಮೊಟ್ಟೆ ಸೇವನೆ ಮಾಡುವ ಸಮಯದಲ್ಲಿ ತುಂಬಾನೇ ಕೇರ್ ಫುಲ್ ಆಗಿರಬೇಕು.
ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಕೂಡ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ. ಆದರೆ ಇದರಿಂದ ಮಾರಕವಾಗುವ ಸಾಮಾನ್ಯ ಜನರ ಜೀವನಕ್ಕೆ. ಹಾಗಿದ್ದರೆ ಈ ಅಸಲಿ ನಕಲಿಯ ವ್ಯತ್ಯಾಸ ಕಂಡು ಹಿಡಿಯೋದು ಹೇಗೆ? ಬನ್ನಿ ನಕಲಿ -ಅಸಲಿ ಮೊಟ್ಟೆಗಳನ್ನು ಕಂಡು ಹಿಡಿಯುವುದು ಹೇಗೆ ನೋಡೋಣ...
ಹೊಳಪು : ನಕಲಿ ಮೊಟ್ಟೆಯನ್ನು ಕಂಡು ಹಿಡಿಯುವ ಒಂದು ಸುಲಭ ವಿಧಾನ ಎಂದರೆ ಅದರ ಹೊಳಪು. ಒಂದು ವೇಳೆ ಮೊಟ್ಟೆಯ ಮೇಲಿನ ಪದರ ಹೆಚ್ಚು ಹೊಳಪಿನಿಂದ ಕೂಡಿದ್ದರೆ ಅದು ನಕಲಿ ಎಂದು ಅರ್ಥ. ಯಾಕೆಂದರೆ ನಿಜವಾದ ಮೊಟ್ಟೆ ಹೊಳೆಯುವುದಿಲ್ಲ..
ಟಚ್ ಮಾಡಿ : ಮೊಟ್ಟೆಯನ್ನು ಕೈಯಲ್ಲಿ ಸ್ವಲ್ಪ ಒತ್ತಿ ನೋಡಿ. ಅದು ತುಂಬಾ ರಫ್ ಆಗಿದ್ದರೆ ಅದು ನಕಲಿ. ಯಾಕೆಂದರೆ ಅಸಲಿ ಮೊಟ್ಟೆಯ ಪದರ ಸ್ಮೂತ್ ಆಗಿರುತ್ತದೆ.
ಬೆಂಕಿ : ನಕಲಿ ಮೊಟ್ಟೆಯನ್ನು ಬೆಂಕಿಯ ಬಳಿ ತೆಗೆದುಕೊಂಡು ಹೋದ ಕೂಡಲೇ ಅದಕ್ಕೆ ಬೆಂಕಿ ಹತ್ತುತ್ತದೆ. ಯಾಕೆಂದರೆ ಅದು ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಈ ರೀತಿಯ ಸಮಸ್ಯೆ ಕಂಡು ಬರುತ್ತದೆ.
ಶಬ್ದ ಬರುತ್ತದೆ : ನಕಲಿ ಮೊಟ್ಟೆಯನ್ನು ಅಲ್ಲಾಡಿಸಿ ನೋಡಿದಾಗ ಅದರಿಂದ ಶಬ್ದ ಬರುತ್ತದೆ. ಆದರೆ ಅಸಲಿ ಮೊಟ್ಟೆಯಲ್ಲಿ ಯಾವುದೇ ರೀತಿಯ ಶಬ್ದ ಬರುವುದಿಲ್ಲ.
ಮಿಕ್ಸ್ ಆದರೆ : ಮೊಟ್ಟೆಯನ್ನು ಒಡೆದು ಸ್ವಲ್ಪ ಸಮಯ ಬಿಟ್ಟಾಗ ಬಿಳಿ ಮತ್ತು ಹಳದಿ ದ್ರವ ಜೊತೆಯಾಗಿ ಮಿಕ್ಸ್ ಆದರೆ ಅದು ನಕಲಿ ಮೊಟ್ಟೆ. ಈ ಎರಡು ದ್ರವಗಳನ್ನು ಒಂದೇ ಕೆಮಿಕಲ್ ಬಳಸಿ ಮಾಡುವುದರಿಂದ ಅವೆರಡು ಬೇಗನೆ ಮಿಕ್ಸ್ ಆಗುತ್ತವೆ..
ನಕಲಿ ಮೊಟ್ಟೆ ಪ್ಲಾಸ್ಟಿಕ್ ನಿಂದ ಮಾಡಿರುವುದರಿಂದ ಅವುಗಳ ಸೇವನೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದುದರಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕಾಗುತ್ತದೆ.