ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಕುಕ್ಕರ್‌ನಲ್ಲಿ ಪರ್ಫೆಕ್ಟ್ ಕಿಚಡಿ ರೆಡಿ!
ಕಿಚಿಡಿ ಒಂದು ಆರೋಗ್ಯಕರ ಆಹಾರ. ಅನಾರೋಗ್ಯದಿಂದ ಬಳಲುತ್ತಿರುವರಿಂದ ಹಿಡಿದು ತೂಕ ಇಳಿಸಿಕೊಳ್ಳಲು ಬಯಸುವರಿಗೂ ಕೂಡ ಇದು ಬೆಸ್ಟ್ ಆಯ್ಕೆ. ಸುಲಭವಾಗಿ ಜೀರ್ಣವಾಗುವ ಖಿಚಿಡಿ ಪ್ರೋಟೀನ್ ಭರಿತವಾಗಿದೆ. ಆದರೆ ಈ ಕಿಚಿಡಿ ಮಾಡುವ ತಳ ಹಿಡಿಯುವುದು ಅಥವಾ ಪಾತ್ರೆಗೆ ಅಂಟಿಕೊಳ್ಳುವಂತಹ ಸಮಸ್ಯೆಗಳನ್ನು ಎದುರಿಸುವುದು ಕಾಮನ್. ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಕುಕ್ಕರ್‌ನಲ್ಲಿಯೇ ಪರ್ಫೆಕ್ಟ್ ಕಿಚಡಿ ತಯಾರಿಸಬಹುದು.
ಜ್ವರ ಅಥವಾ ಯಾವುದೇ ರೀತಿಯ ಹೊಟ್ಟೆ ಸಮಸ್ಯೆಯಾಗಲಿ, ಕಿಚಿಡಿ ಬೆಸ್ಟ್ ಆಹಾರ.
ಆದರೆ ಅನೇಕ ಬಾರಿ ಇದನ್ನು ಮಾಡುವಾಗ ಕುಕ್ಕರ್‌ನಿಂದ ಹೊರಬರುತ್ತದೆ ಹಾಗೂ ಅರಿಶಿನದ ನೀರು ಎಲ್ಲೆಡೆ ಹರಡುತ್ತದೆ. ಕೆಲವೊಮ್ಮೆ ತಳ ಸಹ ಸೀದು ಹೋಗುತ್ತದೆ.
ಅಂತಹ ಪರಿಸ್ಥಿತಿಯಲ್ಲಿ, ಈ ಟ್ರಿಕ್ ಫಾಲೋ ಮಾಡಿ ನೋಡಿ. ಯಾವುದೇ ರಗಳೆ ಇಲ್ಲದೆ ಪರ್ಫೆಕ್ಟ್ ಕಿಚಡಿ ನಿಮಿಷಗಳಲ್ಲಿ ರೆಡಿಯಾಗುತ್ತದೆ.
1 ಬೌಲ್ ರೈಸ್, 2 ಬೌಲ್ ಹೆಸರು ಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ ಹಾಗೂ ಅರಿಶಿನ ತೆಗೆದುಕೊಳ್ಳಿ.
ಮೊದಲು ಹೆಸರು ಬೇಳೆ ಹಾಗೂ ಅಕ್ಕಿಯನ್ನು ನೀರಿನಲ್ಲಿ ತೊಳೆಯಿರಿ.
ಅಕ್ಕಿ ಮತ್ತು ಬೇಳೆಯನ್ನು ಕುಕ್ಕರ್‌ಗೆ ಹಾಕಿ. ಅಗತ್ಯವಿದಷ್ಟು ನೀರು ಹಾಕಿ. ನಂತರ ಕುಕ್ಕರ್‌ಗೆ ಉಪ್ಪು ಮತ್ತು ಅರಿಶಿನ ಪುಡಿ ಹಾಕಿ ಮಿಕ್ಸ್ ಮಾಡಿ.
ಒಂದು ಚಮಚ ಸಾಸಿವೆ ಎಣ್ಣೆಯನ್ನು ಸೇರಿಸಿ.
ಎಣ್ಣೆ ಹಾಕುವುದರಿಂದ ಕಿಚಡಿ ಕುಕ್ಕರ್‌ನಿಂದ ಹೊರಗೆ ಬರುವುದಿಲ್ಲ ಮತ್ತು ಅದರ ರುಚಿ ಹೆಚ್ಚುತ್ತದೆ.
ಈಗ ಕುಕ್ಕರ್ ಅನ್ನು ಗ್ಯಾಸ್ ಮೇಲಿಡಿ. ಐದು ಸೀಟಿಗಳ ನಂತರ ಖಿಚಿಡಿ ರೆಡಿ.
ಇನ್ನೊಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಜೀರಿಗೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಕುಕ್ಕರ್‌ನ ಮುಚ್ಚಳ ತೆಗೆದು ತಕ್ಷಣ ಅದನ್ನು ಕಿಚಡಿಗೆ ಮಿಕ್ಸ್ ಮಾಡಿ.
ಈಗ ಪರ್ಫೆಕ್ಟ್ ಕಿಚಡಿ ಸವಿಯಲು ರೆಡಿ.