ಪನೀರ್-ಬ್ರೆಡ್ಡನ್ನು ಎಷ್ಟು ದಿನ ಫ್ರಿಜ್‌ನಲ್ಲಿ ಶೇಖರಿಸಿಡಬಹುದು?
ರೆಫ್ರಿಜರೇಟರ್‌ನ ಆವಿಷ್ಕಾರ ಜನರಿಗೆ ಬಹಳ ಉಪಯುಕ್ತವಾಗಿದೆ. ಇಂದು ಪ್ರತಿ ಮನೆಯಲ್ಲೂ ಇದನ್ನು ಬಳಸಲಾಗುತ್ತದೆ. ತರಕಾರಿ ಖರೀದಿಸುವವರಿಗೆ ರೆಫ್ರಿಜರೇಟರ್ ಬಹಳ ಮುಖ್ಯ. ಬಿಡುವಿಲ್ಲದ ಜೀವನದಲ್ಲಿ ವಸ್ತುಗಳನ್ನು ಶೇಖರಿಸಿಡಲು ರೆಫ್ರಿಜರೇಟರ್ ಜೀವನಿದ ಅವಿಭಾಜ್ಯ ಅಂಗವಾಗಿದೆ. ಜನರು ತರಕಾರಿಗಳ ಜೊತೆಗೆ ಮೊಟ್ಟೆ, ಬ್ರೆಡ್ ಮತ್ತು ಉಳಿದ ಆಹಾರವನ್ನು ಫ್ರಿಡ್ಜ್‌ನಲ್ಲಿ ಇಡುತ್ತಾರೆ. ಇದರಿಂದ ಹೆಚ್ಚು ಕಾಲ ಹಾಳಾಗುವುದಿಲ್ಲ. ಆದರೆ, ಈ ವಸ್ತುಗಳನ್ನೆಲ್ಲಾ ಎಷ್ಟು ದಿನದವರೆಗೆ ಫ್ರಿಜ್‌ನಲ್ಲಿ ಇಡುವುದು ಉತ್ತಮ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಹೌದು ಎಲ್ಲಾ ವಸ್ತುಗಳಿಗೂ ಇಂತಿಷ್ಟು ದಿನ ಎಂದು ಕೊನೆಯ ದಿನ ಇದ್ದೇ ಇರುತ್ತದೆ. ಹಾಗೆ ಫ್ರಿಜ್ನಲ್ಲಿ ಇಟ್ಟ ವಸ್ತುಗಳೂ ಕೆಟ್ಟು ಹೋಗುತ್ತವೆ. ಇಂದು ಫ್ರಿಡ್ಜ್‌ನಲ್ಲಿ ಇಡಬೇಕಾದ ಸಾಮಾನ್ಯ ವಸ್ತುಗಳ ಎಕ್ಸ್ ಪೈರಿ ದಿನಾಂಕದ ಬಗ್ಗೆ ಇಲ್ ಹೇಳುತ್ತೇವೆ ನೋಡಿ.
ಇಂದಿನ ದಿನಗಳಲ್ಲಿ ಜನರು ಫ್ರಿಡ್ಜ್ ಅನ್ನು ವಸ್ತುಗಳನ್ನು ಬಹಳ ಕಾಲ ತಾಜಾವಾಗಿಡಲು ಬಳಸುತ್ತಾರೆ. ಜನರ ಜೀವನದಲ್ಲಿ ಇದು ಬಹಳ ಮುಖ್ಯ. ಆದರೆ, ಹಾಗೆ ಎಲ್ಲಾ ವಸ್ತುಗಳನ್ನು ದೀರ್ಘ ಕಾಲದವರೆಗೆ ಫ್ರಿಜ್‌ನಲ್ಲಿ ಇಡುವುದು ಸರಿಯಲ್ಲ. ಇದು ಆರೋಗ್ಯಕ್ಕೆ ಅಪಾಯ.
ಶೀತದ ತಾಪಮಾನದಿಂದಾಗಿ ಪರಿಸ್ಥಿತಿ ಹದಗೆಡುವುದಿಲ್ಲ, ಆದರೆ ಸ್ವಲ್ಪ ಸಮಯದ ನಂತರ ರೆಫ್ರಿಜರೇಟರ್ ನಲ್ಲೂ ಪರಿಸ್ಥಿತಿ ಬಿಗಡಾಯಿಸುತ್ತದೆ. ಇದರಲ್ಲಿ ಪನ್ನೀರ್ ನಿಂದ ಬ್ರೆಡ್ ವರೆಗೂ ಎಲ್ಲಾ ವಸ್ತುಗಳು ಸಹ ಫ್ರಿಜ್ ನಲ್ಲಿ ಅಧಿಕ ಸಮಯ ಇಟ್ಟರೆ ಹಾಳಾಗುತ್ತದೆ. ಇಷ್ಟು ದಿನ ಬಳಸದೇ ಇದ್ದಾಗ ಈ ವಸ್ತುಗಳನ್ನು ಫ್ರಿಡ್ಜ್ ನಿಂದ ಹೊರಗೆ ಎಸೆಯುವುದು ಒಳ್ಳೆಯದು.
ಪನ್ನೀರ್ ಹಾಲಿನಿಂದ ಮಾಡಿದ ಒಂದು ಐಟಂ. ಇದನ್ನು ಕೋಣೆಯ ತಾಪಮಾನದಲ್ಲಿ ದಿನದಲ್ಲಿ ಉಪಯೋಗಿಸಬೇಕು. ಆದರೆ ಫ್ರಿಜ್‌ನಲ್ಲಿ ಇದನ್ನು ಸ್ವಲ್ಪ ಹೆಚ್ಚು ಕಾಲ ಶೇಖರಿಸಿಡಬಹುದು.
ಪನ್ನೀರ್ ಅನ್ನು ಫ್ರಿಡ್ಜ್ ನಲ್ಲಿ ಇಟ್ಟುಕೊಳ್ಳುವ ಅತ್ಯುತ್ತಮ ವಿಧಾನವೆಂದರೆ ಅದನ್ನು ಪ್ಲಾಸ್ಟಿಕ್ ಕಂಪಾರ್ಟ್ ಮೆಂಟ್ ನಲ್ಲಿ ಶೇಖರಿಸಿ ಇಡುವುದು. ಇದನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ನೀರು ತುಂಬಿದ ಪಾತ್ರೆಯಲ್ಲಿ ಮುಳುಗಿಸಿ ಇಡಿ. ನಂತರ ಅದನ್ನು ಒಂದು ವಾರದವರೆಗೆ ಶೇಖರಿಸಿಡಬಹುದು.
ಕೋಣೆಯ ತಾಪಮಾನದಲ್ಲಿ ನಾಲ್ಕರಿಂದ ಐದು ದಿನ ಬ್ರೆಡ್ ಅನ್ನು ಶೇಖರಿಸಿಡಬಹುದು. ನೀವು ಅದನ್ನು ರೆಫ್ರಿಜರೇಟರ್‌ನಲ್ಲಿ ಇಡುವುದಾದರೆ, ಅದನ್ನು ಚೆನ್ನಾಗಿ ಪ್ಯಾಕ್ ಮಾಡಿ. ಒಮ್ಮೆ ಬ್ರೆಡ್ ಪ್ಯಾಕೆಟ್ ತೆರೆದ ನಂತರ, ಅದನ್ನು ಬಿಗಿಯಾದ ಪ್ಯಾಕ್ ನೊಂದಿಗೆ ಸಂಗ್ರಹಿಸಿ. ಪೇಪರ್ ನಲ್ಲಿ ಸುತ್ತಿಯೂ ನೀವು ಅದನ್ನು ಸ್ಟೋರ್ ಮಾಡಬಹುದು.
ಐಸ್ ಕ್ರೀಮ್ ಅನ್ನು ರೆಫ್ರಿಜರೇಟರ್ ನಲ್ಲಿಯೇ ಸಂಗ್ರಹಿಸಿಡಬಹುದು. ಇದು ಡೈರಿ ಉತ್ಪನ್ನವಾಗಿರುವುದರಿಂದ, ಅದನ್ನು ಹೊರಗಿಡುವಾಗ ಕರಗುತ್ತದೆ. ಆದರೆ ಇದನ್ನು ಫ್ರಿಡ್ಜ್ ನಲ್ಲಿ ಒಂದು ವಾರ ಮಾತ್ರ ಇಟ್ಟು ತಿನ್ನಬೇಕು, ಆ ನಂತರ ಅವುಗಳನ್ನು ಬಳಸುವುದು ಆರೋಗ್ಯಕ್ಕೆ ಹಾನಿಕಾರಕ.
ಹಣ್ಣು ಮತ್ತು ತರಕಾರಿಗಳ ಬಗ್ಗೆ ಹೇಳುವುದಾದರೆ , ಪ್ರತಿಯೊಂದು ತರಕಾರಿಯನ್ನು ಸಂಗ್ರಹಿಸಲು ಬೇರೆ ಬೇರೆ ಸಮಯವಿದೆ. ಕೆಲವು ತರಕಾರಿಗಳು ಬಹಳ ಕಾಲ ತಾಜಾವಾಗಿ ಉಳಿದರೆ, ಕೆಲವು ಬೇಗ ಹಾಳಾಗುತ್ತದೆ. ಹಣ್ಣುಗಳನ್ನು ದೀರ್ಘಕಾಲದವರೆಗೆ ಫ್ರಿಡ್ಜ್ ನಲ್ಲಿ ಟ್ಟುಕೊಳ್ಳಬಹುದು.
ಜನರು ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸುತ್ತಾರೆ. ಆದರೆ ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು. ಇದರಿಂದ ಪೋಷಕಾಂಶಗಳನ್ನು ನಷ್ಟವಾಗುವುದು. ನೀವು ಎಂದಿಗೂ ಮೊಟ್ಟೆಗಳನ್ನು ಫ್ರಿಡ್ಜ್ ನಲ್ಲಿ ಇಡಬಾರದು.
ಈ ವಸ್ತುಗಳನ್ನು ಸಾಧ್ಯವಾದಷ್ಟು ಫ್ರಿಜ್‌ನಲ್ಲಿ ದೀರ್ಘಕಾಲ ಇಟ್ಟು ಬಳಕೆ ಮಾಡುವುದನ್ನು ಅವಾಯ್ಡ್ ಮಾಡಿ. ಹಾಗಿದ್ದರೆ ಮಾತ್ರ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಇಲ್ಲವಾದರೆ ಕೆಲವೊಂದು ರೋಗಕ್ಕೆ ಕಾರಣವಾಗಲೂ ಬಹುದು.