ಇವುಗಳನ್ನ ತಿನ್ನುವುದರಿಂದ ನಿಮ್ಮ ಆಯಸ್ಸು 10 ವರ್ಷ ಕಡಿಮೆಯಾಗುವುದು ಖಂಡಿತ!
ನಮ್ಮ ಡಯೆಟ್‌ನಲ್ಲಿ ಕೆಲವು ಆಹಾರಗಳನ್ನು ಸೇರಿಸಿಕೊಂಡರೆ ಸಾಕು. ವಯಸ್ಸು ಕಡಿಮೆ ಮಾಡಿಕೊಂಡು, ಸುಂದರವಾಗಿ ಕಾಣಲು ಏನು ತಿನ್ನಬೇಕು ಎಂದು ತಿಳಿದುಕೊಳ್ಳೋಣ...

ವಯಸ್ಸಾಗುವುದು ಸಹಜ. ಆದರೆ ಲೈಫ್‌ಸ್ಟೈಲ್ ಮತ್ತು ಆಹಾರ ಪದ್ಧತಿ ಬದಲಿಸಿಕೊಂಡರೆ ವಯಸ್ಸನ್ನು ಹಿಮ್ಮುಖಗೊಳಿಸಬಹುದು. ಮುಖದ ಮೇಲೆ ವಯಸ್ಸಿನ ಛಾಯೆ ಕಾಣದಂತೆ ಮಾಡಬಹುದು. ಕೆಲವು ಆಹಾರಗಳನ್ನು ಡಯೆಟ್‌ನಲ್ಲಿ ಸೇರಿಸಿಕೊಂಡರೆ ಸಾಕು. ಯಾವ ಆಹಾರಗಳು ಯೌವನ ಕಾಪಾಯುತ್ತವೆ ಎಂದು ತಿಳಿದುಕೊಳ್ಳೋಣ...
ದಾಳಿಂಬೆ
1. ದಾಳಿಂಬೆ...
ದಾಳಿಂಬೆ ತಿಂದರೆ ಯೌವನ ಕಾಪಾಡಿಕೊಳ್ಳಬಹುದು. ಚರ್ಮಕ್ಕೆ ಉತ್ತಮ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ದಾಳಿಂಬೆಯಲ್ಲಿ ಯಾಂಟಿ ಏಜಿಂಗ್ ಗುಣಗಳಿವೆ. ದಿನಾ ಒಂದು ಹಿಡಿ ದಾಳಿಂಬೆ ತಿಂದರೆ ಸಾಕು.
2. ಮೊಟ್ಟೆಗಳು...
ಕೂದಲು, ಚರ್ಮ ಮತ್ತು ಉಗುರುಗಳು 98% ಪ್ರೋಟೀನ್‌ನಿಂದ ಮಾಡಲ್ಪಟ್ಟಿವೆ. ಪ್ರೋಟೀನ್ ವೃದ್ಧಾಪ್ಯದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಪ್ರೋಟೀನ್ ಕೊರತೆಯಿಂದ ಮುಖದ ಮೇಲೆ ವಯಸ್ಸಾದ ಛಾಯೆ ಕಾಣಿಸುತ್ತದೆ. ಆದ್ದರಿಂದ, ನಿಯಮಿತವಾಗಿ ಮೊಟ್ಟೆ ತಿನ್ನಬೇಕು. ಇದು ನಿಮ್ಮನ್ನು ಯುವಕರಂತೆ ಕಾಣುವಂತೆ ಮಾಡುತ್ತದೆ.
ಹಸಿರು ತರಕಾರಿಗಳು
ಪಾಲಕ್ ಮತ್ತು ಮೆಂತ್ಯ ಸೊಪ್ಪಿನಲ್ಲಿ ಆಂಟಿಆಕ್ಸಿಡೆಂಟ್‌ಗಳು, ಪಾಲಿಫಿನಾಲ್‌ಗಳು ಮತ್ತು ಕ್ಲೋರೊಫಿಲ್ ಸಮೃದ್ಧವಾಗಿವೆ. ಇವು ಕಾಲಜನ್ ಅನ್ನು ರಕ್ಷಿಸುತ್ತದೆ, ಇದು ಮೃದುವಾದ ಚರ್ಮಕ್ಕೆ ಸಹಾಯ ಮಾಡುತ್ತದೆ.
ಅವಕಾಡೊ..
ಲಿನೋಲೆಕ್ ಆಮ್ಲ (LA) ಮತ್ತು ಆಲ್ಫಾ-ಲಿನೋಲೆನಿಕ್ ಆಮ್ಲ (ALA) ಹೊರತುಪಡಿಸಿ ದೇಹವು ಎಲ್ಲಾ ಕೊಬ್ಬುಗಳನ್ನು ತಯಾರಿಸಬಲ್ಲದು. ಇವು ಬಲವಾದ ಜೀವಕೋಶಗಳ ಗೋಡೆಗಳು ಮತ್ತು ಸುಂದರ ಚರ್ಮ, ಆರೋಗ್ಯಕರ ಕೂದಲನ್ನು ನಿರ್ಮಿಸಲು ಸಹಾಯ ಮಾಡುತ್ತದೆ.
ಕಲ್ಲಂಗಡಿ ಹಣ್ಣು
ಕಲ್ಲಂಗಡಿಯಲ್ಲಿ ವಿಟಮಿನ್ ಸಿ, ಲೈಕೋಪೀನ್ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ, ಇದು ಜೀವಕೋಶಗಳಲ್ಲಿ ನೀರು ಮತ್ತು ಪೋಷಕಾಂಶಗಳ ಸಮತೋಲನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನಿ. ಹೊಳೆಯುವ ಚರ್ಮ ಪಡೆಯಿರಿ. ಬ್ಲೂಬೆರ್ರಿ, ನಿಂಬೆಹಣ್ಣು ಕೂಡ ಯೌವನ ಕಾಪಾಡಲು ಸಹಾಯ ಮಾಡುತ್ತದೆ.
ಮೊಸರು
ಮೊಸರು
ಚರ್ಮದ ಜೀವಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂನ ಉತ್ತಮ ಮೂಲವಾಗಿರುವುದರಿಂದ, ಇದು ಜೀವಕೋಶಗಳನ್ನು ಪುನಃ ತುಂಬಲು ಮತ್ತು ಪುನರುತ್ಪಾದಿಸಲು ಸಹಾಯ ಮಾಡುತ್ತದೆ. ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ತೆಗೆದುಹಾಕಿ ಯೌವನದಂತೆ ಕಾಣುವಂತೆ ಮಾಡುತ್ತದೆ.