ಜ್ವರವಿದ್ದಾಗ ಚಿಕನ್ ತಿಂದರೆ ಓಕೇನಾ?
ಎಲ್ಲಾ ಪೋಷಕಾಂಶಗಳ ಉತ್ತಮ ಸಮತೋಲನ ಹೊಂದಿರುವ ಸೂಕ್ತ ಆಹಾರ ತೆಗೆದುಕೊಳ್ಳಬೇಕು. ಅನಾರೋಗ್ಯದಿಂದ ಬಳಲುತ್ತಿರುವಾಗ ಅತ್ಯಂತ ಮಹತ್ವದ್ದು. ರೋಗ ನಿರೋಧಕ ವ್ಯವಸ್ಥೆ ಈಗಾಗಲೇ ದುರ್ಬಲವಾಗಿರುವಾಗ ಮತ್ತು ದೇಹ ರಕ್ಷಿಸಿ ಕೊಳ್ಳಲು ಎಲ್ಲಾ ರೀತಿಯ ಕಸರತ್ತುಗಳನ್ನು ಜನ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ವೈದ್ಯರು ಯಾವಾಗಲೂ ಹಗುರ ಆಹಾರವನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಈ ರೀತಿಯ ಸಮಯಗಳಲ್ಲಿ, ಕೋಳಿ ಮಾಂಸ ಸೇವನೆಯ ಬಗ್ಗೆ ಜನರಿಗೆ ಸಾಮಾನ್ಯ ಅನುಮಾನವಿದೆ. ಅನಾರೋಗ್ಯದಿಂದ ಬಳಲುತ್ತಿರುವಾಗ ಅಥವಾ ಜ್ವರದಿಂದ ಬಳಲುತ್ತಿರುವಾಗ ಚಿಕನ್ ಸೇವಿಸಬಹುದೇ ಎಂದು ತಿಳಿಯಲು ಮುಂದೆ ಓದಿ.
ಜ್ವರದ ಸಮಯದಲ್ಲಿ ಚಿಕನ್
ಜ್ವರದಿಂದ ಬಳಲುತ್ತಿರುವಾಗ ಚಿಕನ್ ಸೇವಿಸುವುದು ಸಂಪೂರ್ಣವಾಗಿ ಸುರಕ್ಷಿತ. ಆದರೆ, ಅದನ್ನು ಹೇಗೆ ತಯಾರಿಸುತ್ತಾರೆ ಎಂಬುವುದು ಹಾಗೂ ಅದಕ್ಕೆ ಹಾಕುವ ಮಸಾಲೆ ಕಡೆ ಗಮನ ಹರಿಸಬೇಕು.
ಚಿಕನ್ ಪ್ರೋಟೀನ್ ಮತ್ತು ನಾರಿನಂಶದಿಂದ ತುಂಬಿದೆ, ನಮ್ಮ ದೇಹದಲ್ಲಿ ಜ್ವರದಿಂದ ಈ ಎರಡು ಅಂಶಗಳು ಕಡಿಮೆಯಾದಾಗ ದೇಹಕ್ಕೆ ಅಗತ್ಯವಿರುವ ಎರಡು ಪ್ರಮುಖ ಪೋಷಕಾಂಶಗಳನ್ನು ಚಿಕನ್ ನೀಡುತ್ತದೆ.
ಚಿಕನ್ ಪ್ರೋಟೀನ್ ಮತ್ತು ನಾರಿನಂಶದಿಂದ ತುಂಬಿದೆ, ನಮ್ಮ ದೇಹದಲ್ಲಿ ಜ್ವರದಿಂದ ಈ ಎರಡು ಅಂಶಗಳು ಕಡಿಮೆಯಾದಾಗ ದೇಹಕ್ಕೆ ಅಗತ್ಯವಿರುವ ಎರಡು ಪ್ರಮುಖ ಪೋಷಕಾಂಶಗಳನ್ನು ಚಿಕನ್ ನೀಡುತ್ತದೆ.
ಅತ್ಯುತ್ತಮ ರೂಪ
ಚಿಕನ್ ಸೂಪ್ ಜ್ವರದಿಂದ ಹೊರ ಬರಲು ಆಯ್ಕೆ ಮಾಡಬಹುದಾದ ಅತ್ಯುತ್ತಮ ಭಕ್ಷ್ಯ. ಬಿಸಿ ದ್ರವವು ದೇಹವನ್ನು ಆರೋಗ್ಯಯುತವನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಮತ್ತು ಚಿಕನ್‌ನ ಪ್ರೋಟೀನ್ ಅಂಶವು ದೇಹಕ್ಕೆ ಚೇತರಿಸಿ ಕೊಳ್ಳಲು ಸಾಕಷ್ಟು ಶಕ್ತಿಯನ್ನು ನೀಡುತ್ತದೆ.
ಚಿಕನ್ ಸೂಪ್ ದ್ರವಗಳು ಮತ್ತು ಎಲೆಕ್ಟ್ರೋಲೈಟ್ ಗಳ ಅದ್ಭುತ ಮೂಲ, ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಈ ಬಿಸಿ ದ್ರವವು ಉತ್ತಮ ಅರೋಗ್ಯ ವಾರ್ಡಕವಾಗಿದೆ, ಇದು ಕೆಮ್ಮು ಮತ್ತು ಸ್ಟಫಿ ಮೂಗಿನ ಸಮಸ್ಯೆ ಕಡಿಮೆ ಮಾಡುತ್ತದೆ, ಇದು ಅವುಗಳನ್ನು ಉಂಟು ಮಾಡುವ ನ್ಯೂಟ್ರೋಫಿಲ್ ಕ್ರಿಯೆಯನ್ನು ತಡೆಯುತ್ತದೆ.
ಅನಾರೋಗ್ಯದಿಂದ ಬಳಲುತ್ತಿರುವಾಗ ಹೊಂದಬಹುದಾದ ಇತರ ಕೆಲವು ಆರೋಗ್ಯಕರ ಚಿಕನ್ ಆಧಾರಿತ ಭಕ್ಷ್ಯಗಳೆಂದರೆ ಚಿಕನ್ ಸಲಾಡ್, ಗ್ರಿಲ್ಡ್ ಚಿಕನ್, ಹುರಿದ ಚಿಕನ್, ಚಿಕನ್ ಸ್ಟ್ಯೂ, ಬೇಯಿಸಿದ ಚಿಕನ್ ಟಿಕ್ಕಾ, ಕ್ವಿನೋವಾ ಚಿಕನ್ ಮತ್ತು ಚಿಕನ್ ಥುಕ್ಕಾ.
ಏನನ್ನು ತಪ್ಪಿಸಬೇಕು?
ಯಾವುದೇ ರೀತಿಯ ಫ್ರೈ ಮತ್ತು ಹೆವಿ ಚಿಕನ್ ಭಕ್ಷ್ಯಗಳನ್ನು ತಪ್ಪಿಸಿ. ಹೆಚ್ಚು ಮಸಾಲೆಗಳು, ಎಣ್ಣೆ, ಕ್ರೀಮ್ ಅಥವಾ ಸಮೃದ್ಧ ಪದಾರ್ಥಗಳಿಂದ ತಯಾರಿಸಲಾದ ಚಿಕನ್ ಭಕ್ಷ್ಯಗಳು ಚೇತರಿಕೆಗೆ ಅಡ್ಡಿಪಡಿಸಬಹುದು. ಇಂತಹ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಕಷ್ಟ ಮತ್ತು ದೇಹಕ್ಕೆ ಸಹಾಯ ಮಾಡುವ ಬದಲು ಮತ್ತಷ್ಟು ದುರ್ಬಲಗೊಳಿಸಬಹುದು.
ಚಿಕನ್ ನಗೆಟ್ಸ್, ಬಟರ್ ಚಿಕನ್, ಚಿಕನ್ ಮಸಾಲಾ, ಚಿಕನ್ ಲಾಲಿಪಾಪ್, ಚಿಲ್ಲಿ ಚಿಕನ್, ಚಿಕನ್ ಶವರ್ಮಾ ಮತ್ತು ಕ್ರೀಮ್ ಚಿಕನ್ ನಂತಹ ಭಕ್ಷ್ಯಗಳು ನೀವು ದೂರವಿರಬೇಕಾದ ಕೆಲವು ಆಯ್ಕೆಗಳಾಗಿವೆ.
ಚಿಕನ್ ಸೂಪ್ ಪಾಕ ವಿಧಾನ
ಅಗತ್ಯವಿರುವ ಪದಾರ್ಥಗಳು- 500 ಗ್ರಾಂ ಚೂರು ಮಾಡಿದ ಚಿಕನ್, 1 ಲೀಟರ್ ಚಿಕನ್ ಸ್ಟಾಕ್, 1 ಈರುಳ್ಳಿ, 1 ಕ್ಯಾರೆಟ್, 1 ಟೇಬಲ್ ಚಮಚ ಬೆಣ್ಣೆ, 2 ಸೆಲರಿ ಸ್ಟಿಕ್ಸ್, 1 ಟೇಬಲ್ ಚಮಚ ಪಾರ್ಸ್ಲಿ, 1 ಟೀ ಚಮಚ ಕಾರ್ನ್ ಫ್ಲೋರ್, ಉಪ್ಪು ಮತ್ತು ಮೆಣಸು ರುಚಿಗೆ ಅನುಗುಣವಾಗಿ.
ವಿಧಾನ-
1. ಈರುಳ್ಳಿ, ಕ್ಯಾರೆಟ್ ಮತ್ತು ಸೆಲರಿಯನ್ನು ನುಣ್ಣಗೆ ಕತ್ತರಿಸಿ. ಬಾಣಲೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ, ತರಕಾರಿಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಹುರಿಯಿರಿ.
2. ಏತನ್ಮಧ್ಯೆ, ನೀರಿನ ಜೊತೆಗೆ ಮತ್ತೊಂದು ಮಡಕೆಗೆ ಚಿಕನ್ ಸೇರಿಸಿ. ಸಂಪೂರ್ಣವಾಗಿ ಬೇಯುವವರೆಗೆ ಕುದಿಯಲು ಬಿಡಿ.
3. ಹುರಿದ ತರಕಾರಿಗಳನ್ನು ಚಿಕನ್ ಪಾಟ್ಗೆ ಸೇರಿಸಿ. ಕಾರ್ನ್ ಫ್ಲೋರ್ ಅನ್ನು 1 ಚಮಚ ನೀರಿನಲ್ಲಿ ಮಿಕ್ಸ್ ಮಾಡಿ ಮತ್ತು ಅದನ್ನು ಮಡಕೆಗೆ ಸೇರಿಸಿ.
4. ಇನ್ನೂ 10 ನಿಮಿಷಗಳ ಕಾಲ ಸಿಮ್ ಮಾಡಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು ಸೇರಿಸಿ. ಸಣ್ಣದಾಗಿ ಕತ್ತರಿಸಿದ ಪಾರ್ಸ್ಲಿಯಿಂದ ಅಲಂಕರಿಸಿ ಮತ್ತು ಬಿಸಿಯಾಗಿ ಸರ್ವ್ ಮಾಡಿ.