ಮಾಡಿದ ಅಡುಗೆ ಉಪ್ಪಾಗಿದ್ಯಾ? ಇಲ್ಲಿದೆ ಅದಕ್ಕೊಂದು ಪರಿಹಾರ
ಉಪ್ಪು (Salt) ಇಲ್ಲದ ಅಡುಗೆ ಹೇಗಿರುತ್ತೆ? ಆಹಾರದಲ್ಲಿನ ಉಪ್ಪನ್ನು ಕಡಿಮೆ ಮಾಡಿದರೆ, ಅದರ ರುಚಿಯು ಕಡಿಮೆಯಾಗುತ್ತೆ ಮತ್ತು ಉಪ್ಪು ಹೆಚ್ಚಾದರೂ ಸಹ, ಆಹಾರದ ರುಚಿ ಹಾಳಾಗುತ್ತದೆ. ಒಂದು ವೇಳೆ ಅತಿಥಿಗಳು ಮನೆಗೆ ಬರುವಾಗ, ನೀವು ಆಹಾರದಲ್ಲಿ ಮಿಸ್ ಆಗಿ ಹೆಚ್ಚು ಉಪ್ಪನ್ನು (salty food) ಸೇರಿಸಿದ್ದರೆ,ಏನಾಗುತ್ತೆ? ಅಯ್ಯೋ, ಯೋಚಿಸಲು ಸಾಧ್ಯವಿಲ್ಲ ಅಲ್ವಾ?. ಆದಿರನ್ನು ಯೋಚಿಸುವ ಅಗತ್ಯವಿಲ್ಲ. ಇಲ್ಲಿದೆ ಉಪ್ಪನ್ನು ಕಡಿಮೆ ಮಾಡೋ ಈಸಿ ವೇ.
ಹೆಚ್ಚು ಉಪ್ಪು ಆಹಾರದ ರುಚಿಯನ್ನು (tasty food)ಹಾಳುಮಾಡಬಹುದು. ಈ ಕಾರಣದಿಂದ, ಅತಿಥಿಗಳ ಮುಂದೆ ನೀವು ಅವಮಾನಕ್ಕೆ ಒಳಗಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ಚಿಂತಿಸಬೇಕಾಗಿಲ್ಲ.ಹಾಗಿದ್ರೆ ಏನು ಮಾಡಬೇಕು? ಚಿಂತೆ ಬಿಡಿ, ಯಾಕಂದ್ರೆ ಇಂದು ನಿಮಗಾಗಿ ಸ್ಪೆಷಲ್ ಟಿಪ್ಸ್ ಅಂದ್ರೆ ಕಿಚನ್ ಹ್ಯಾಕ್ಸ್ (Kitchen Hacks) ನಾವಿಲ್ಲಿ ತಂದಿದ್ದೇವೆ.
ನೀವು ಮಾಡಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿದ್ದರೆ, ಚಿಂತಿಸುವ ಅಗತ್ಯವಿಲ್ಲ. ಕೆಲವು ಸುಲಭ ಸಲಹೆಗಳನ್ನು ಅನುಸರಿಸುವ ಮೂಲಕ ನೀವು ಅಡುಗೆಯಲ್ಲಿರುವ ಉಪ್ಪಿನ ಪ್ರಮಾಣವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಆದ್ದರಿಂದ ಆ ಟ್ರಿಕ್ಸ್ ಬಗ್ಗೆ ತಿಳಿದುಕೊಳ್ಳೋಣ. ಅಡುಗೆಯಲ್ಲಿ ಉಪ್ಪನ್ನು ಸಮತೋಲನಗೊಳಿಸಲು ಈ ಕೆಳಗಿನ ಸಲಹೆಗಳನ್ನು ಅನುಸರಿಸಿ…
ಹುರಿದ ಬೇಸನ್ ಬಳಸಿ
ನಿಮ್ಮ ಅಡುಗೆಯು ಹೆಚ್ಚು ಉಪ್ಪಾಗಿದ್ದರೆ, ಅದನ್ನು ಸರಿ ಮಾಡಲು ನೀವು ಹುರಿದ ಕಡಲೆ ಹಿಟ್ಟು (fried besan) ಬಳಸಬಹುದು. ಇದಕ್ಕಾಗಿ, ನೀವು ಮೊದಲು ಬೇಸನ್ ತೆಗೆದುಕೊಂಡು ಸ್ವಲ್ಪ ಹುರಿಯಬೇಕು. ನಂತರ ಅದನ್ನು ಅಡುಗೆಯಲ್ಲಿ ಮಿಶ್ರಣ ಮಾಡಿ. ಇದು ನಿಮ್ಮ ಅಡುಗೆಯಲ್ಲಿರುವ ಉಪ್ಪನ್ನು ಸಮತೋಲನಗೊಳಿಸುತ್ತದೆ. ಈ ಟ್ರಿಕ್ಸ್ ಅನ್ನು ನೀವು ಡ್ರೈ ಮತ್ತು ಗ್ರೇವಿ ಅಡುಗೆಗಳೆರಡರಲ್ಲೂ ಬಳಸಬಹುದು. ಗ್ರೇವಿ ಅಡುಗೆಗೆ ಬೇಸನ್ ಸೇರಿಸುವುದರಿಂದ ಗ್ರೇವಿಯನ್ನು ದಪ್ಪ ಮತ್ತು ರುಚಿಕರವಾಗಿಸುತ್ತದೆ.
ಮೊಸರನ್ನು ಬಳಸಿ
ಅಡುಗೆಯಲ್ಲಿ ಹೆಚ್ಚು ಉಪ್ಪು ಇದ್ದಾಗ ಚಿಂತಿಸುವ ಅಗತ್ಯವಿಲ್ಲ. ಮೊಸರನ್ನು (curd)ಬಳಸುವ ಮೂಲಕ ನೀವು ಉಪ್ಪನ್ನು ಸುಲಭವಾಗಿ ಕಡಿಮೆ ಮಾಡಬಹುದು. ಮೊಸರನ್ನು ಬಳಸಲು, ಮೊದಲಿಗೆ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಮೊಸರನ್ನು ಒಂದು ಬೌಲ್‌ನಲ್ಲಿ ಹಾಕಿ ಮತ್ತು ನಂತರ ಅದನ್ನು ಗ್ರೇವಿಯೊಂದಿಗೆ ಬೆರೆಸಿ ಮತ್ತು ಗ್ರೇವಿಯನ್ನು ಎರಡು ನಿಮಿಷಗಳ ಕಾಲ ಕುದಿಸಿ. ನಿಮ್ಮ ಅಡುಗೆ ರುಚಿ ಸಂಪೂರ್ಣವಾಗಿ ಉತ್ತಮವಾಗಿರುತ್ತದೆ.
ಬೇಯಿಸಿದ ಆಲೂಗಡ್ಡೆ
ನಿಮ್ಮ ಅಡುಗೆ ತುಂಬಾ ಉಪ್ಪಾಗಿದ್ದರೆ, ಅದನ್ನು ಸರಿಪಡಿಸಲು ನೀವು ಬೇಯಿಸಿದ ಆಲೂಗಡ್ಡೆಯನ್ನು (boiled potato) ಬಳಸಬಹುದು. ಮೊದಲನೆಯದಾಗಿ, ಗ್ರೇವಿಗೆ ಅನುಗುಣವಾಗಿ ಬೇಯಿಸಿದ ಆಲೂಗಡ್ಡೆಯನ್ನು ತೆಗೆದುಕೊಂಡು, ಅದನ್ನು ಮ್ಯಾಶ್ ಮಾಡಿ ಮತ್ತು ಅದನ್ನು ಅಡುಗೆಯೊಂದಿಗೆ ಮಿಶ್ರಣ ಮಾಡಿ. ನೀವು ಇದನ್ನು ದಾಲ್ ಉಪ್ಪಾದಾಗಲು ಬಳಸಬಹುದು. ನಿಮ್ಮ ಅಡುಗೆ ಸಂಪೂರ್ಣವಾಗಿ ರುಚಿಕರವಾಗಿರುತ್ತದೆ.
ನಿಂಬೆ ರಸ (lemon juice)
ನಿಂಬೆ ರಸವನ್ನು ಬಳಸುವ ಮೂಲಕ, ನೀವು ಅಡುಗೆಯಲ್ಲಿನ ಹೆಚ್ಚುವರಿ ಉಪ್ಪನ್ನು ಸುಲಭವಾಗಿ ಸರಿ ಮಾಡಬಹುದು. ನಿಮ್ಮ ಡ್ರೈ, ಗ್ರೇವಿ ತುಂಬಾ ಉಪ್ಪಾಗಿದ್ದರೆ, ಗ್ರೇವಿ ಅಥವಾ ಅಡುಗೆಗೆ ಅನುಗುಣವಾಗಿ 2 ರಿಂದ 3 ಟೀಸ್ಪೂನ್ ನಿಂಬೆ ರಸವನ್ನು ಮಿಶ್ರಣ ಮಾಡಿ. ಅಡುಗೆಯಲ್ಲಿ ಉಪ್ಪಿನ ರುಚಿ ಸಮತೋಲನದಲ್ಲಿರುತ್ತದೆ.