ಹಾಲು , ಮೊಸರು ಜೊತೆ ಈ ಆಹಾರ ಸೇವಿಸಿದ್ರೆ ಆರೋಗ್ಯ ಕೆಡುತ್ತೆ ಜೋಕೆ
ದೇಹವನ್ನು ಫಿಟ್ ಆಗಿಡಲು ಸರಿಯಾದ ಆಹಾರ ಕ್ರಮ ಅಗತ್ಯ. ಬೇಕಾಬಿಟ್ಟಿ ಆಹಾರಗಳನ್ನು ಸೇವಿಸುವಂತಿಲ್ಲ. ಆಹಾರ ಸೇವಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಈ ನಿಯಮಗಳನ್ನು ಕಡೆಗಣಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದರೆ ಹಾಲು ಅಥವಾ ಮೊಸರಿನೊಂದಿಗೆ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಸೇವಿಸಿದರೆ ಹಲವು ಸಮಸ್ಯೆಗಳು ಕಾಡುವುದು ಖಚಿಸಿ. ಯಾವೆಲ್ಲಾ ಆಹಾರಗಳನ್ನು ಮೊಸರಿನ ಸೇವಿಸಬಾರದು ನೋಡೋಣ...
ಈ ವಸ್ತುಗಳನ್ನು ಮೊಸರಿನೊಂದಿಗೆ ಬಳಸಬೇಡಿ....
ಮೊಸರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮೊಸರು ಬಳಸುವುದು ತುಂಬಾ ಮುಖ್ಯ. ಆದರೆ ಮೊಸರಿನೊಂದಿಗೆ ಕೆಲವು ಪದಾರ್ಥಗಳನ್ನು ಅಪ್ಪಿ ತಪ್ಪಿಯೂ ಸೇವಿಸಬಾರದು.
ಮೊಸರಿನೊಂದಿಗೆ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಡಿ. ಎರಡೂ ವಿಭಿನ್ನ ಕಿಣ್ವಗಳನ್ನು ಹೊಂದಿವೆ. ಎರಡೂ ವಸ್ತುಗಳ ಸೇವನೆಯು ಜೀರ್ಣಿಸಲು ತುಂಬಾ ಕಷ್ಟವಾಗುವಂತೆ ಮಾಡುತ್ತದೆ.
ಮೊಸರನ್ನು ಎಂದಿಗೂ ಬಿಸಿ ಚೀಸ್ ಮತ್ತು ಮೀನಿನೊಂದಿಗೆ ಸೇವಿಸಬಾರದು. ಈ ತಪ್ಪು ಮಾಡಿದಲ್ಲಿ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೇ, ಹೊಟ್ಟೆ ನೋವಾಗಬಹುದು.
ಕೆಲವೊಂದು ವಸ್ತುಗಳನ್ನು ಹಾಲಿನೊಂದಿಗೆ ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಳಗೆ ನೀಡಿರುವ ವಸ್ತುಗಳು ಹಾಲಿನೊಂದಿಗೆ ಸೇವನೆ ಮಾಡುವುದು ಅಪಾಯಕಾರಿ.
ಹಸಿರು ತರಕಾರಿ ಮತ್ತು ಮೂಲಂಗಿಗಳನ್ನು ಸೇವಿಸಿದ ನಂತರ ಹಾಲನ್ನು ಸೇವಿಸಬೇಡಿ.
ಉದ್ದಿನ ಬೇಳೆಯನ್ನು ಸೇವಿಸಿದ ನಂತರವೂ ಹಾಲನ್ನು ಕುಡಿಯಬೇಡಿ.
ಅಲ್ಲದೆ, ಮಾಂಸ, ಮೊಟ್ಟೆ ಮತ್ತು ಚೀಸ್ ನಂತರ ಹಾಲನ್ನು ಕುಡಿಯಬೇಡಿ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜೊತೆಗೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಜೇನುತುಪ್ಪದೊಂದಿಗೆ ಈ ಪದಾರ್ಥಗಳನ್ನು ತಿನ್ನಬೇಡಿ
ಜೇನುತುಪ್ಪ ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಬೆಣ್ಣೆ ಮತ್ತು ತುಪ್ಪವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ. ಅಲ್ಲದೆ, ಜ್ವರ ಬಂದಾಗ ಜೇನುತುಪ್ಪವನ್ನು ಸೇವಿಸಬಾರದು.