ವಿಜಯದಶಮಿ: ಅದೃಷ್ಟ ತಂದುಕೊಡೋ ಆಹಾರಗಳಿವು
ವಿಜಯ ದಶಮಿ ದಿನ ಈ ಆಹಾರ ಸೇವಿಸಿದ್ರೆ ಸಿಗುತ್ತೆ ಅದೃಷ್ಟ | ಹಬ್ಬಕ್ಕೆ ಲಕ್ ತಂದುಕೊಡೋ ಅಹಾರಗಳಿವು

ದಸರಾ ಆಚರಣೆ, ಆಹಾರ, ಸಂಪ್ರದಾಯಗಳಿಗೆ ಅವುಗಳದ್ದೇ ಆದ ಅರ್ಥವಿದೆ. ಎಲ್ಲೆಡೆ ವಿಜಯ ದಶಮಿಯನ್ನು ಸಂಭ್ರಮದಿಂದ ಆಚರಿಸಲಾಗ್ತಿದೆ. ದಸರಾ ಸಂಭ್ರಮದ ದಿನ ನೀವು ಸೇವಿಸೋ ಆಹಾರ ನಿಮ್ಮ ಅದೃಷ್ಟವನ್ನು ನಿರ್ಧರಿಸುತ್ತದೆ.
ದಸರಾವನ್ನು ದೇಶಾದ್ಯಂತ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಿದ್ದು, ಆ ಸಂದರ್ಭದಲ್ಲಿ ವಿಶೇಷ ಅಡುಗೆಯನ್ನೂ ಮಾಡಲಾಗುತ್ತದೆ.
ಬಗೆ ಬಗೆಯ ವಿಶೇಷ ಸಿಹಿ ಖಾದ್ಯಗಳನ್ನು ಮಾಡಲಾಗುತ್ತದೆ. ಅವುಗಳನ್ನು ಸೇವಿಸೋದ್ರಿಂದ ನಿಮಗೆ ಅದೃಷ್ಟವೂ ಬರುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ.
ಜಿಲೇಬಿ/ಜಲೇಬಿ:
ಗುಜರಾತ್ ಮೂಲದ ವಿಶೇಷ ಸಿಹಿ ತಿಂಡಿ ಜಿಲೇಬಿ ದಸರಾ ದಿನ ಸೇವಿಸೋದು ತುಂಬಾ ಒಳ್ಳೆಯದು. ಶ್ರೀರಾಮನಿಗೆ ಶಶ್ಕುಲಿ ಅನ್ನೋ ಸಿಹಿ ತಿಂಡಿ ತುಂಬಾ ಇಷ್ಟವಿತ್ತು.
ಅದನ್ನೆ ಈಗ ಜಿಲೇಬಿ ಎನ್ನಲಾಗುತ್ತದೆ. ಹಾಗಾಗಿ ರಾವಣನನ್ನು ಸೋಲಿಸಿದ ಖುಷಿಯನ್ನು ಜಿಲೇಬಿ ತಿಂದು ಸಂಭ್ರಮಿಸಲಾಗುತ್ತದೆ. ಇದು ಭಾರತದ ಅತ್ಯಂತ ಸಾಂಪ್ರದಾಯಿಕ ಸಿಹಿಗಳಲ್ಲೊಂದು.
ಫಾಫ್ಡ:
ಜಲೇಬಿ ಜೊತೆ ಫಾಫ್ಡವನ್ನು ನೀಡಲಾಗುತ್ತದೆ. ಇದನ್ನು ಯಾಕೆ ಸೇವಿಸುತ್ತಾರೆಂದರೆ ಹಬ್ಬದ ಉಪವಾಸವನ್ನು ಕಡಲೆ ಹಿಟ್ಟಿನಿಂದ ಮಾಡಿದ ಆಹಾರದಿಂದ ಕೊನೆಗೊಳಿಸಬೇಕು. ಹಾಗಾಗಿ ಫಾಫ್ಡ ಸೇವಿಸುತ್ತಾರೆ.</p>
ಸಿಹಿ ದೋಸೆ:
ಸಿಹಿ ದೋಸೆ ದಸರಾ ದಿನದ ವಿಶೇಷ ಆಹಾರ. ಇದನ್ನು ಬೆಲ್ಲ, ತೆಂಗಿನಕಾಯಿ, ಅಕ್ಕಿ ಹಿಟ್ಟು, ಗೋಧಿ ಸೇರಿಸಿ ಮಾಡಲಾಗುತ್ತದೆ. ಕರ್ನಾಟಕದಲ್ಲಿ ನೀರು ದೊಸೆ ಮಾಡಿ, ಅದನ್ನು ಸಣ್ಣದಾಗಿ ಹೆಚ್ಚಿ, ಅದಕ್ಕೆ ಬೆಲ್ಲೆ, ಕಾಯಿ ಹೂರ್ಣ ಮಿಕ್ಸ್ ಮಾಡುವ ಖಾದ್ಯವೂ ತಯಾರಿಸುತ್ತಾರೆ.
ಸರಸ್ವತಿ ಪೂಜೆ ದಿನ ಇದನ್ನು ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಇದನ್ನು ಮಾಡುವುದು ಸುಲಭ, ಹೆಚ್ಚು ಕ್ಯಾಲೊರಿಯೂ ಇರುವುದಿಲ್ಲ.
ಪಾನ್ ಬೀಡಾ:
ಪಾನ್ ಅಥವಾ ವೀಳ್ಯದೆಲೆ ದಸರಾ ದಿನ ತಿನ್ನುವುದರ ಜೊತೆಗೆ ಹನುಮಂತನಿಗೂ ಅರ್ಪಿಸಲಾಗುತ್ತದೆ. ಪಾನ್ ಎಂದರೆ ಗೌರವ ಮತ್ತು ಪ್ರೀತಿಯ ಸಂಕೇತ ಎಂದು ನಂಬಲಾಗುತ್ತದೆ.
ದಸರಾ ದಿನ ಪಾನ್ ತಿನ್ನೋ ಅಭ್ಯಾಸ ಬಿಹಾರದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ. ಆಯಾ ಭಾಗದ ಜನರ ಜೀವನಶೈಲಿಗೆ ಅನುಗುಣವಾಗಿ ದೇವರಿಗೆ ಅರ್ಪಿಸುವ ನೇವೇದ್ಯವೂ ಒಂದಾಗಿರುತ್ತೆ.
ಮೊಸರು:
ಮೊಸರು ಮತ್ತು ಸಕ್ಕರೆ ತಿನ್ನೋ ಅಭ್ಯಾಸ ಹಿಂದಿನಿಂದಲೂ ಇದೆ. ಇದು ಅದೃಷ್ಟ ತಂದು ಕೊಡುತ್ತದೆ ಎಂದು ನಂಬಲಾಗುತ್ತದೆ. ದೇವಿಗೆ ಮೊಸರನ್ನು ಸರ್ವಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ.
ಇದನ್ನು ದುರ್ಗಾಮಾತೆಗೂ ನೀಡಲಾಗುತ್ತದೆ. ಒರಿಸ್ಸಾದಲ್ಲಿ ಅನ್ನವನ್ನು ನೆನೆಸಿ ಮೊಸರು ಬೆರೆಸಿ ದೇವರಿಗೆ ಅರ್ಪಿಸಲಾಗುತ್ತದೆ.
ರಸಗುಲ್ಲಾ:
ಪಶ್ಚಿಮ ಬಂಗಾಳದಲ್ಲಿ ರಸಗುಲ್ಲಾ ಅದೃಷ್ಟ ತರುವ ತಿಂಡಿ ಎಂದು ನಂಬಲಾಗುತ್ತದೆ. ಸಾಫ್ಟ್ ಆಗಿರೋ ರಸಗುಲ್ಲಾ ಸಕ್ಕರೆ ನೀರಲ್ಲಿ ಮುಳುಗಿಡಲಾಗುತ್ತದೆ.
ಇದನ್ನು ದಸರಾ ಮತ್ತು ನವರಾತ್ರಿ ಸಂದರ್ಭ ದೇವರಿಗೆ ಅರ್ಪಿಸಲಾಗುತ್ತದೆ. ರಸಗುಲ್ಲಾ ಪಶ್ಚಿಮ ಬಂಗಾಳದ ಸಿಹಿಯಾಗಿದ್ದು, ದುರ್ಗ ಪೂಜೆಯಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.