7 ತಿಂಗಳ ನಂತರ ತೆರೆದ ದೇವಾಲಯ: ಕೊರೋನಾ ರೋಗಿಗಳಿಗೆ 3000 ಕೆಜಿ ಸೇಬು..!
ಲಾಕ್‌ಡೌನ್ ನಂತರ ಮೊದಲ ಬಾರಿ ದೇವಾಲಯ ಪುನರಾರಂಭ | 3000 ಸೇಬು ಪ್ರದರ್ಶನ
ಅಹಮದಾಬಾದ್‌ನ ಶ್ರೀ ಸ್ವಾಮಿನಾರಾಯಣ ದೇವಾಲಯ ಲಾಕ್‌ಡೌನ್ ನಂತರ ತೆರೆಯಲಾಗಿದೆ.
ಈ ನಿಟ್ಟಿನಲ್ಲಿ ಸುಮಾರು 3000 ಸೇಬಿನ ಹಣ್ಣನ್ನು ಪ್ರದರ್ಶನ ಮಾಡಲಾಯಿತು. ಸುಮಾರು 7 ತಿಂಗಳಿಂದ ದೇವಸ್ಥಾನ ಮುಚ್ಚಲಾಗಿತ್ತು.
ಹಸಿರು, ಕೆಂಪು, ಹಳದಿ ಬಣ್ಣದ ಸೇಬು ಹಣ್ಣನ್ನು ಸಣ್ಣ ಸಣ್ಣ ರಾಶಿಗಳಾಗಿ ಮಾಡಲು ಪ್ರದರ್ಶನಕ್ಕೆ ಇಡಲಾಗಿತ್ತು. ನವರಾತ್ರಿ ಹಿನ್ನೆಲೆಯಲ್ಲಿ 7 ತಿಂಗಳ ನಂತರ ದೇವಸ್ಥಾನ ಬಾಗಿಲು ತೆರೆಯಲಾಗಿದೆ.
ಈ ದೇವಲಾಯದ ಪ್ರಸಿದ್ಧ ಪ್ರವಾಸಿ ತಾಣವೂ ಆಗಿದ್ದು, ಮಾರ್ಚ್ ಕೊನೆಯ ವಾರ ಮುಚ್ಚಲ್ಪಟ್ಟಿತ್ತು. ಪೂಜೆಯ ವೇಳೆ ಇರಿಸಲಾಗಿದ್ದ ಹಣ್ಣನ್ನು ಕೊರೋನಾ ರೋಗಿಗಳಿಗೆ ಹಂಚಲು ನಿರ್ಧರಿಸಲಾಗಿದೆ.
ಪೂಜೆಯ ನಂತರ ಹಣ್ಣುಗಳನ್ನು ಕೊರೋನಾ ರೋಗಿಗಳು ಮತ್ತು ಆರೋಗ್ಯ ಸಿಬ್ಬಂದಿಗೆ ಹಂಚಲಾಗುತ್ತದೆ ಎಂದು ದೇವಸ್ಥಾನ ಪುರೋಹಿತರು ಹೇಳಿದ್ದಾರೆ.
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಹಲವು ದೇವಾಲಯಗಳನ್ನು ತೆರೆಯಲಾಗಿದೆ. ಆದರೆ ಭಕ್ತಾದಿಗಳಿಗೆ ಕಠಿಣ ನಿರ್ಬಂಧಗಳನ್ನು ವಿಧಿಸಲಾಗಿದೆ.