ಈ 3 ಪಾನೀಯಗಳು ಮಲಬದ್ಧತೆಗೆ ಕಾರಣವಾಗಬಹುದು ಹುಷಾರ್!!
ಕಳಪೆ ಆಹಾರ ಮತ್ತು ಜೀವನಶೈಲಿಯ ಅಭ್ಯಾಸಗಳ ಪರಿಣಾಮವಾಗಿ ಮಲಬದ್ಧತೆ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸಿದ ನಂತರ ಜನರು ಇದನ್ನು ಅನುಭವಿಸಬಹುದು. ಆದರೆ ಕೆಲವರು ದೀರ್ಘಕಾಲದ ಮಲಬದ್ಧತೆಯಿಂದ ಬಳಲುತ್ತಾರೆ. ಸಾಮಾನ್ಯವಾಗಿ, ಪ್ರತಿಯೊಬ್ಬರ ಕರುಳಿನ ಅಭ್ಯಾಸಗಳು ವಿಭಿನ್ನವಾಗಿರುತ್ತವೆ, ಆದರೆ ದೀರ್ಘಕಾಲದ ಮಲಬದ್ಧತೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ವಾರಕ್ಕೆ ಮೂರಕ್ಕಿಂತ ಕಡಿಮೆ ಮಲ ವಿಸರ್ಜನೆಯನ್ನು ಹೊಂದಿರುತ್ತಾರೆ.
ಕರುಳಿನ ವಿಸರ್ಜನೆಯನ್ನು ಮತ್ತಷ್ಟು ನಿಧಾನಗೊಳಿಸುವ ಆಹಾರ ಮತ್ತು ಪಾನೀಯಗಳನ್ನು ಸೇವಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಮಲಬದ್ಧತೆಯನ್ನು ಇನ್ನಷ್ಟು ಹದಗೆಡಿಸುವ 3 ಪಾನೀಯಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳನ್ನು ಆದಷ್ಟು ಅವಾಯ್ಡ್ ಮಾಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
ಹಾಲು
ಹಾಲುನಮಗೆಲ್ಲಾ ತಿಳಿದಿರುವಂತೆ, ಆರೋಗ್ಯಕರ ಪೇಯವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ12, ಪ್ರೋಟೀನ್ ನಂತಹ ಪೋಷಕಾಂಶಗಳು ತುಂಬಿಕೊಂಡಿದ್ದು, ಕೆಲವು ಸಂದರ್ಭಗಳಲ್ಲಿ ಅಜೀರ್ಣಕ್ಕೆ ಕಾರಣವಾಗಬಹುದು.
ಈಗಾಗಲೇ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಆಗ ಹಾಲು ಈ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಹಸು ಹಾಲಿನಲ್ಲಿ ಕಂಡುಬರುವ ಕೇಸಿನ್ ಎಂದು ಕರೆಯಲಾಗುವ ಪ್ರೋಟೀನ್ ಸೂಕ್ಷ್ಮತೆಯಿಂದಾಗಿ ಹಸುಗೂಸುಗಳು ಮತ್ತು ಮಕ್ಕಳು ವಿಶೇಷವಾಗಿ ಅಪಾಯದಲ್ಲಿ ಸಿಲುಕುತ್ತಾರೆ.
ಡೈರಿ ಉತ್ಪನ್ನಗಳ ಅಲರ್ಜಿ ಇದ್ದರೆ ಗುದನಾಳದಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳ ಬಗ್ಗೆಯೂ ಸಹ ಗೊಂದಲವಾಗಬಹುದು. ಈ ಸಮಸ್ಯೆಯಿಂದ ಬಳಲುತ್ತಿರುವವರು ಡೈರಿ ಹಾಲು ಸೇವಿಸಿದರೆ ಅತಿಸಾರ ಅಥವಾ ವಾಂತಿ ಸಮಸ್ಯೆಯನ್ನು ಅನುಭವಿಸಬಹುದು. ಆದರೆ ಈ ಲಕ್ಷಣಗಳು ನಿರ್ಜಲೀಕರಣಕ್ಕೂ ಕಾರಣವಾಗಬಹುದು, ಇದು ಮಲಬದ್ಧತೆಗೆ ಪ್ರಮುಖ ಕಾರಣ.
ಆಲ್ಕೋಹಾಲ್
ಅತಿಯಾದ ಮದ್ಯ ಸೇವನೆಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಮತ್ತು ಮಲಬದ್ಧತೆಯೂ ಒಂದು. ಮದ್ಯ ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಮೊದಲನೆಯದಾಗಿ, ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಮತ್ತು ಮಲವನ್ನು ಹೀರಿಕೊಳ್ಳಲು ದೇಹಕ್ಕೆ ನೀರಿನ ಅವಶ್ಯಕತೆ ಇದೆ. ಮೃದುವಾದ ಮಲವು ಸುಲಭವಾಗಿ ಹಾದು ಹೋಗುತ್ತದೆ.
ಎರಡನೆಯದಾಗಿ, ಹೆಚ್ಚಿನ ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಪಾನೀಯಗಳು ದೇಹದ ಆಂತರಿಕ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಇದು ಜಠರಕರುಳಿನ ಚಲನೆಯನ್ನು ನಿಧಾನಗೊಳಿಸಬಹುದು, ಇದರಿಂದ ಮಲವಿಸರ್ಜನೆಗೆ ತೊಂದರೆ ಉಂಟು ಮಾಡಬಹುದು.
ಮೂರನೆಯದಾಗಿ, ಇದು ಕೆಟ್ಟ ಗಟ್ ಬ್ಯಾಕ್ಟೀರಿಯಾಗಳ ಅತಿಯಾದ ಬೆಳವಣಿಗೆಗೆ ಕಾರಣವಾಗಬಹುದು, ಇದು ಮಲಬದ್ಧತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ ಕರುಳಿನ ಒಳಪದರದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು ಮತ್ತು ಇದು ಇತರ ಜಠರ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.ಆಲ್ಕೋಹಾಲ್ ಮಲಬದ್ಧತೆಗೆ ಕಾರಣವೇ ಅಥವಾ ಅಲ್ಲವಾ ಎಂಬುದು ಸೇವಿಸುವ ಮದ್ಯದ ಪ್ರಮಾಣ ಮತ್ತು ವಿಧವನ್ನು ಅವಲಂಬಿಸಿರುತ್ತದೆ. ಆದರೆ ಏನೇ ಆದರೂ, ಆ ನಂತರ ಹೆಚ್ಚು ನೀರು ಕುಡಿಯುವುದನ್ನು ಮರೆಯಬೇಡಿ.
ಕಾಫಿ
ಕೆಲವರಿಗೆ ಕಾಫಿಯು ಕರುಳಿನ ಲ್ಲಿ ಸುಲಭವಾಗಿ ಹಾದುಹೋಗಲು ಸಹಾಯ ಮಾಡುತ್ತದೆ, ಮತ್ತೆ ಕೆಲವರಿಗೆ ಇದು ಮಲಬದ್ಧತೆಗೆ ಕಾರಣವಾಗಿರಬಹುದು. ಕಾಫಿಯಲ್ಲಿರುವ ಕೆಫೀನ್ ಜೀರ್ಣಾಂಗ ವ್ಯೂಹದಲ್ಲಿರುವ ಸ್ನಾಯುಗಳನ್ನು ಸಂಕುಚಿತಗೊಳಿಸಿ, ವಿಸರ್ಜನೆಗೆ ಸುಲಭವಾಗುವಂತೆ ಮಾಡುತ್ತದೆ.
ಆದರೆ ಕಾಫಿಯ ಬಗ್ಗೆ ಇನ್ನೊಂದು ಸತ್ಯವೆಂದರೆ ಇದು ಹೆಚ್ಚು ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ, ಇದು ದ್ರವವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ ಮತ್ತು ಮಲಬದ್ಧತೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಈಗಾಗಲೇ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ಅದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಇದನ್ನು ತಪ್ಪಿಸಲು ಡೆಕಾಫ್ ಕುಡಿಯಲು ಪ್ರಯತ್ನಿಸಿ. ಕಾಫಿಯ ರೀತಿಯಲ್ಲಿ ಆಂತರಿಕ ವ್ಯವಸ್ಥೆಯ ಮೇಲೆ ಇದು ಪರಿಣಾಮ ಬೀರುವುದಿಲ್ಲ.