MalayalamNewsableKannadaKannadaPrabhaTeluguTamilBanglaHindiMarathimynation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ತಲೆ ಮೇಲ್ಯಾಕೆ ಕೈ ಇಟ್ಟಿದ್ದೀ? ತೆಗಿ ಅಂತಾರಲ್ಲ ಮನೆಯಲ್ಲಿ ಹಿರಿಯರು, ಯಾಕೆ?

ತಲೆ ಮೇಲ್ಯಾಕೆ ಕೈ ಇಟ್ಟಿದ್ದೀ? ತೆಗಿ ಅಂತಾರಲ್ಲ ಮನೆಯಲ್ಲಿ ಹಿರಿಯರು, ಯಾಕೆ?

ಕೆಲವೊಮ್ಮೆ ನಾವು ತಿಳಿದೋ ತಿಳಿಯದೆಯೋ ತಲೆ ಮೇಲೆ ಕೈ ಇಟ್ಟು ಕುಳಿತಾಗ, ನಮ್ಮ ಹಿರಿಯರು ಹಾಗೆ ಮಾಡ್ಬೇಡಿ, ಯಾವತ್ತೂ ತಲೆ ಮೇಲೆ ಕೈ ಇಡಬೇಡಿ ಅನ್ನುತ್ತಾರೆ. ಆದರೆ ಅವರು ಯಾಕೆ ಹೀಗೆ ಹೇಳ್ತಾರೆ ಅನ್ನೋದು ಗೊತ್ತಾ ನಿಮಗೆ? 

2 Min read
Suvarna News
Published : Mar 25 2024, 04:56 PM IST
Share this Photo Gallery
  • FB
  • TW
  • Linkdin
  • Whatsapp
  • Google NewsFollow Us
18
Asianet Image

ಅನೇಕ ಬಾರಿ, ಯಾವುದೋ ಆಲೋಚನೆಯಲ್ಲಿ ಅಥವಾ ಯಾವುದೋ ತೊಂದರೆಯಲ್ಲಿ ಮುಳುಗಿ, ನಾವು ನಮ್ಮ ತಲೆಯ ಮೇಲೆ ಕೈಗಳನ್ನು (hands on head) ಇಟ್ಟುಕೊಂಡು ಕುಳಿತುಕೊಳ್ಳುತ್ತೇವೆ.ತಲೆ ಮೇಲೆ ಕೈಯಿಟ್ಟು ಕುಳಿತುಕೊಳ್ಳಬಾರದು ಎಂದು ನಮ್ಮ ಹಿರಿಯರು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ತಲೆಯ ಮೇಲೆ ಕೈಗಳನ್ನು ಏಕೆ ಇಡಬಾರದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?  ಬನ್ನಿ ಅದರ ಬಗ್ಗೆ ತಿಳಿಯೋಣ. 

28
Asianet Image

ಸೂರ್ಯ ದುರ್ಬಲನಾಗುತ್ತಾನೆ
ಜ್ಯೋತಿಷ್ಯದ ಪ್ರಕಾರ, ದೇಹದ ಪ್ರತಿಯೊಂದೂ ಭಾಗವೂ ಒಂದು ಗ್ರಹಕ್ಕೆ ಸಂಬಂಧಿಸಿದೆ. ಅಂತೆಯೇ, ಹಣೆ ಸೂರ್ಯನಿಗೆ ಸಂಬಂಧಿಸಿದೆ. ಹಣೆಯ ಮೇಲೆ ಕೈ ಇಟ್ಟರೆ, ಅದು ಜಾತಕದಲ್ಲಿ ಸೂರ್ಯನನ್ನು ದುರ್ಬಲಗೊಳಿಸುತ್ತದೆ (weak).

38
Asianet Image

ವಿಧಿಗೆ ಅಡ್ಡಿ
ಹಣೆಯ ಮೇಲೆ ಕೈ ಇಡುವುದು ನೀವು ನಿಮ್ಮ ಅದೃಷ್ಟವನ್ನು ನಿಮ್ಮ ಕೈಗಳಿಂದ ತಡೆಹಿಡಿಯುತ್ತಿದ್ದೀರಿ ಎಂದು ತೋರಿಸುತ್ತದೆ. ಇದು ಅದೃಷ್ಟದ (luck) ಇಳಿಕೆಗೆ ಕಾರಣವಾಗುತ್ತದೆ. ಹಾಗಾಗಿ ಏನೇ ಸಮಸ್ಯೆ ಬಂದರೂ ಹಣೆ ಅಥವಾ ತಲೆ ಮೇಲೆ ಕೈ ಇಟ್ಟು ಕೂರಬೇಡಿ. 

48
Asianet Image

ದುರಾದೃಷ್ಟ 
ಹಣೆ ಮೇಲೆ ಕೈ ಇಡುವ ಮೂಲಕ, ನೀವು ನಿಮ್ಮ ಅದೃಷ್ಟವನ್ನು ತಡೆಯುವುದು ಮಾತ್ರವಲ್ಲದೆ, ಅದರಿಂದ ದುರಾದೃಷ್ಟವನ್ನು(unluck) ಉತ್ತೇಜಿಸುತ್ತೀರಿ. ಅದಕ್ಕಾಗಿಯೇ ಹಿರಿಯರು ಈ ತಪ್ಪನ್ನು ಮಾಡದಂತೆ ನಿಮ್ಮನ್ನು ತಡೆಯುತ್ತಾರೆ. 

58
Asianet Image

ಲಕ್ಷ್ಮಿ ಕೋಪಗೊಳ್ಳುತ್ತಾಳೆ
ಯಾರಾದರೂ ಸಂಜೆ ಮನೆಯ ಬಾಗಿಲ ಬಳಿ ಅಥವಾ ಮನೆಯಲ್ಲಿ ಹಣೆಯ ಮೇಲೆ ಕೈ ಇಟ್ಟುಕೊಂಡು ಕುಳಿತರೆ, ಲಕ್ಷ್ಮಿ ದೇವಿಯು ಇದರಿಂದ ಕೋಪಗೊಂಡು ಆ ಮನೆಯ ಬಾಗಿಲಿನಿಂದ ಹಿಂದಿರುಗುತ್ತಾಳೆ ಎನ್ನುವ ನಂಬಿಕೆ ಸಹ ಇದೆ. 

68
Asianet Image

ತೊಂದರೆಗಳು ಬರುತ್ತವೆ
ಹಣೆಯ ಮೇಲೆ ಕೈ ಇಡುವುದನ್ನು ತೊಂದರೆಗಳ problems) ಆಗಮನದ ಸೂಚಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಹಣೆಯ ಮೇಲೆ ಕೈಗಳನ್ನು ಇಡುವುದನ್ನು ನಿಷೇಧಿಸಲಾಗಿದೆ. ವಿಶೇಷವಾಗಿ ಸೂರ್ಯಾಸ್ತ ಮತ್ತು ಸೂರ್ಯೋದಯದ ಸಮಯದಲ್ಲಿ, ಹಣೆಯ ಮೇಲೆ ಕೈಯನ್ನು ಮರೆಯಬಾರದು. 
 

78
Asianet Image

ಬಡತನಕ್ಕೆ ಆಹ್ವಾನ
ಹಣೆಯ ಮೇಲೆ ಕೈ ಇಟ್ಟು ಕೂರೋದರಿಂದ ಲಕ್ಷ್ಮೀ ದೇವಿಯು (Goddess Lakshmi) ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಈ ಕಾರಣದಿಂದಾಗಿ, ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ, ಜೊತೆಗೆ ಬಡತನವೂ ಹೆಚ್ಚಾಗುತ್ತದೆ ಎನ್ನಲಾಗಿದೆ. 

88
Asianet Image

ಸಮಸ್ಯೆ ಹೆಚ್ಚುತ್ತವೆ
ಹಣೆ ಮೇಲೆ ಕೈ ಇಡುವುದನ್ನು ದುಃಖದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನೀವು ಈ ತಪ್ಪನ್ನು ಮಾಡಿದರೆ, ಅದು ಜೀವನವನ್ನು ದುಃಖಗಳಿಂದ ತುಂಬಬಹುದು. ಅಂದರೆ ನೀವು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಎಂದು ಹೇಳಲಾಗುತ್ತದೆ. 
 

About the Author

Suvarna News
Suvarna News
ಹಬ್ಬ
 
Recommended Stories
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved