ತಿರುಪತಿ ತಿಮ್ಮಪ್ಪನ ಕಣ್ಣುಗಳು ಯಾವಾಗಲೂ ಮುಚ್ಚಿರೋದಕ್ಕೆ ಕಾರಣವೇನು?
ತಿರುಪತಿ ಬಾಲಾಜಿ ದೇವಾಲಯವು ವಿಷ್ಣುವಿನ ಒಂದು ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತ. ಧಾರ್ಮಿಕ ನಂಬಿಕೆ ಪ್ರಕಾರ, ವೆಂಕಟೇಶ್ವರನು ತನ್ನ ಭಕ್ತರನ್ನು ಸಮಸ್ಯೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಅವತಾರ ತಾಳಿದನು. ಆದರೆ ವೆಂಕಟೇಶ್ವರನ ಕಣ್ಣುಗಳ ಮೇಲೆ ಬಿಳಿ ನಾಮ ಬಳಿದು ಮುಚ್ಚೋದು ಯಾಕೆ ಅನ್ನೋದು ಗೊತ್ತಾ?
ದೇಶದಲ್ಲಿ ಅನೇಕ ದೇವಾಲಯಗಳಿವೆ, ಅವುಗಳು ಕಾಯ್ದುಕೊಂಡಿರುವ ರಹಸ್ಯದಿಂದಾಗಿಯೇ ಬಹಳ ಪ್ರಸಿದ್ಧವಾಗಿವೆ. ಅವುಗಳಲ್ಲಿ ತಿರುಪತಿ ಬಾಲಾಜಿ ದೇವಾಲಯವೂ (Tirupati Balaji Temple) ಒಂದು. ಇದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿದೆ. ಈ ದೇವಾಲಯವು ಅನೇಕ ನಂಬಿಕೆಗಳಿಗೆ ಹೆಸರುವಾಸಿ. ತಿರುಪತಿ ಬಾಲಾಜಿ ದೇವಾಲಯವು ವಿಷ್ಣುವಿನ ಒಂದು ರೂಪವಾದ ವೆಂಕಟೇಶ್ವರನಿಗೆ ಸಮರ್ಪಿತ. ನಂಬಿಕೆ ಪ್ರಕಾರ, ವೆಂಕಟೇಶ್ವರನು ತನ್ನ ಭಕ್ತರನ್ನು ಸಮಸ್ಯೆಗಳಿಂದ ರಕ್ಷಿಸಲು ಕಲಿಯುಗದಲ್ಲಿ ಅವತರಿಸಿದ.
ಭಗವಾನ್ ವೆಂಕಟೇಶ್ವರನೊಂದಿಗೆ (Venkateshwara) ಕಲಿಯುಗ ಕೊನೆಗೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ವೆಂಕಟೇಶ್ವರನನ್ನು ಪೂಜಿಸುವುದರಿಂದ ಭಕ್ತನ ಎಲ್ಲ ಆಸೆಗಳು ಈಡೇರುತ್ತವೆ. ಇಲ್ಲಿ ಹರಕೆ ಹೊತ್ತು ಎಷ್ಟೋ ಭಕ್ತರು ಬರುತ್ತಾರೆ. ಅಲ್ಲದೇ ತಿರುಪತಿ ತಿಮ್ಮಪ್ಪನ ಹುಂಡಿಗೆ ಚಿನ್ನ (Gold), ವಜ್ರ (Diamond), ಕೊಟ್ಯಾಂತರ ಹಣವನ್ನು ದಾನ ಮಾಡುವವರು ಇದ್ದಾರೆ. ಇದೆಲ್ಲವೂ ಅವರವರ ನಂಬಿಕೆ.
ನೀವು ಎಂದಾದರೂ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರೆ, ತಿಮ್ಮಪ್ಪನ ಕಣ್ಣುಗಳು ಮುಚ್ಚಿರೋದನ್ನು ಕಾಣಬಹುದು. ವೆಂಕಟೇಶ್ವರನ ಕಣ್ಣುಗಳ ಎದುರು ದೊಡ್ಡದಾದ ಬಿಳಿ ನಾಮದಿಂದ ಮುಚ್ಚಲಾಗಿದೆ ಇದನ್ನ ನೀವು ನೋಡಿರಬಹುದು, ಆದರೆ ವೆಂಕಟೇಶ್ವರನ ಕಣ್ಣುಗಳನ್ನು ಮುಚ್ಚಿಡಲು (clossed eyes) ಕಾರಣವೇನು ಎಂದು ನಿಮಗೆ ತಿಳಿದಿದೆಯೇ? ನಿಮಗೆ ಗೊತ್ತಿಲ್ಲದಿದ್ದರೆ, ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಭಗವಾನ್ ವೆಂಕಟೇಶ್ವರನ ಕಣ್ಣುಗಳನ್ನು ಮುಚ್ಚುವ ರಹಸ್ಯ ಇದು
ಧಾರ್ಮಿಕ ನಂಬಿಕೆಯ ಪ್ರಕಾರ, ಭಗವಾನ್ ವೆಂಕಟೇಶ್ವರನು ಕಲಿಯುಗದಲ್ಲಿ ತಿರುಪತಿ ದೇವಸ್ಥಾನದಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಭಗವಾನ್ ವೆಂಕಟೇಶ್ವರನು ತನ್ನ ಪ್ರಕಾಶಮಾನವಾದ ಮತ್ತು ಶಕ್ತಿಯುತ ಕಣ್ಣುಗಳಿಗೆ ಹೆಸರುವಾಸಿ.
ವೆಂಕಟೇಶ್ವರನ ಕಣ್ಣುಗಳಲ್ಲಿನ ಕಾಸ್ಮಿಕ್ ಶಕ್ತಿಯಿಂದ (cosmic power) ಭಕ್ತರು ಅವನ ಕಣ್ಣುಗಳನ್ನು ನೇರವಾಗಿ ನೋಡಲು ಸಾಧ್ಯವಿಲ್ಲ. ಆದ್ದರಿಂದ ವೆಂಕಟೇಶ್ವರನ ಕಣ್ಣುಗಳನ್ನು ಬಿಳಿ ಮುಖವಾಡದಿಂದ ಮುಚ್ಚಲಾಗುತ್ತದೆ. ಈ ಮುಖವಾಡವನ್ನು ಗುರುವಾರ ಮಾತ್ರ ಬದಲಾಯಿಸಲಾಗುತ್ತದೆ, ಆದ್ದರಿಂದ ಭಕ್ತರು ಈ ಸಮಯದಲ್ಲಿ ಒಂದು ಕ್ಷಣ ಅವರ ಕಣ್ಣುಗಳನ್ನು ನೋಡಬಹುದು.
ಈ ದಿನ, ಶ್ರೀಗಂಧದಿಂದ ಸ್ನಾನ
ಗುರುವಾರ, ವೆಂಕಟೇಶ್ವರನನ್ನು ಶ್ರೀಗಂಧದಿಂದ ಸ್ನಾನ ಮಾಡಿಸಲಾಗುತ್ತದೆ. ನಂತರ ಅವನ ವಿಗ್ರಹಕ್ಕೆ ಶ್ರೀಗಂಧವನ್ನು ಹಚ್ಚಲಾಗುತ್ತದೆ. ಭಗವಾನ್ ವೆಂಕಟೇಶ್ವರನ ಹೃದಯಕ್ಕೆ ಶ್ರೀಗಂಧವನ್ನು ಹಚ್ಚುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ (Lakshmi) ಚಿತ್ರ ಕಾಣಸಿಗುತ್ತದೆ ಎಂದು ಹೇಳಲಾಗುತ್ತದೆ.