ರಾಶಿಯ ಅನುಸಾರ ಹಿಂದಿನ ಜನ್ಮದಲ್ಲಿ ನೀವು ಏನಾಗಿದ್ದೀರಿ ತಿಳಿಯಿರಿ
ನಮ್ಮಲ್ಲಿ ಹೆಚ್ಚಿನವರು, ನಮ್ಮ ಹಿಂದಿನ ಜನ್ಮಗಳಲ್ಲಿ ನಾವು ಏನಾಗಿದ್ದೇವೆ ಎಂದು ತಿಳಿಯಲು ಬಯಸುತ್ತೇವೆ ಅಲ್ವಾ?. ಆದರೆ ನಾವು ರಾಶಿಚಕ್ರ ಚಿಹ್ನೆಗಳ ಆಧಾರದ ಮೇಲೆ ಹೋದರೆ, ಪ್ರತಿ ರಾಶಿಚಕ್ರವು ಅವರ ಹಿಂದಿನ ಜೀವನದಲ್ಲಿ ಏನಾಗಿರಬಹುದು ಅನ್ನೋದು ಇಲ್ಲಿದೆ.
ಮೇಷ ರಾಶಿ (Aries): ಈ ರಾಶಿಯವರು ಹಿಂದಿನ ಜನ್ಮದಲ್ಲಿ ಕವಿಯಾಗಿದ್ದರು. ಅಲ್ಲದೇ ಈ ರಾಶಿಯವರು ಸಹಾನುಭೂತಿಯಿಂದ ತುಂಬಿದವರು ಮತ್ತು ಜನರು ಸಹಾಯಕ್ಕಾಗಿ ಈ ರಾಶಿಯವರ ಬಳಿ ಬರುತ್ತಿದ್ದರು.
ವೃಷಭ (Taurus): ಈ ರಾಶಿಯವರು ಹಿಂದಿನ ಜನ್ಮದಲ್ಲಿ ಆಕ್ರಮಣಶೀಲತೆಯಿಂದ ತುಂಬಿದ ಯೋಧರಾಗಿದ್ದರು. ಫಲಿತಾಂಶ ಏನೇ ಇರಲಿ, ಇವರು ನಂಬಿಕೆಯಿಂದ ಹೋರಾಡುವುದನ್ನು ಮಾತ್ರ ಬಿಡುತ್ತಿರಲಿಲ್ಲ.
ಮಿಥುನ (Gemini): ಈ ರಾಶಿಯವರು ಆರಾಮವಾಗಿ ಅಭಿವೃದ್ಧಿ ಹೊಂದಿದ ಶ್ರೀಮಂತ ಉದ್ಯಮಿಯಾಗಿದ್ದರು. ಅಷ್ಟೇ ಅಲ್ಲ ಈ ರಾಶಿಯವರು ಹಿಂದಿನ ಜನ್ಮದಲ್ಲಿ ಜೀವನದ ಸುಖಭೋಗಗಳಲ್ಲಿಯೂ ಮುಳುಗಿಹೋಗಿದ್ದರು.
ಕರ್ಕಾಟಕ (Cancer): ಕರ್ಕಾಟಕ ರಾಶಿಯವರು ಹಿಂದಿನ ಜನ್ಮದಲ್ಲಿ ಹಾಸ್ಯಮಯ, ಬಹುಮುಖ ಮತ್ತು ಬುದ್ಧಿಜೀವಿಯಾಗಿದ್ದ ಬರಹಗಾರರಾಗಿದ್ದರು. ಇವರು ಉತ್ತಮ ರೀತಿಯಲ್ಲಿ ಬರೆಯುತ್ತಿದ್ದರು.
ಸಿಂಹರಾಶಿ (Leo): ಸಿಂಹ ರಾಶಿ, ಈ ರಾಶಿಯವರು ಬಹುಶಃ ಸೂಲಗಿತ್ತಿ ಅಥವಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗುತ್ತದೆ. ಅಂದರೆ ಯಾವುದೇ ಕೆಲಸಗಳಲ್ಲಿ ಇವರು ಸಹಾಯ ಮಾಡುವ ವೃತ್ತಿಯನ್ನು ಹೊಂದಿದ್ದರು.
ಕನ್ಯಾರಾಶಿ (Virgo): ಕನ್ಯಾ ರಾಶಿಯವರು ಹಿಂದಿನ ಜನ್ಮದಲ್ಲಿ ರಾಜಮನೆತನದವರಾಗಿದ್ದರು ಎನ್ನಲಾಗುತ್ತದೆ, ಅವರು ಅತಿ ಅಹಂಕಾರದ ಸ್ವಭಾವವನ್ನು ಸಹ ಹೊಂದಿದ್ದರು. ಜೊತೆಗೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ಇಷ್ಟಪಡುತ್ತಿದ್ದರು.
ತುಲಾ ರಾಶಿ (Libra): ತುಲಾ ರಾಶಿಯವರೇ, ನೀವು ನಿಮ್ಮ ಹಿಂದಿನ ಜನ್ಮದಲ್ಲಿ ವೈದ್ಯರಾಗಿ ಕೆಲಸ ಮಾಡಿದ್ದೀರಿ. ಇತರರ ಸೇವೆಗಾಗಿ ನೀವು ನಿಮ್ಮ ಜೀವನದಲ್ಲಿ ಅನೇಕ ತ್ಯಾಗಗಳನ್ನು ಮಾಡಿದ್ದೀರಿ ಮತ್ತು ಸಾಕಷ್ಟು ಗುಣಪಡಿಸುವ ಮತ್ತು ನೈಸರ್ಗಿಕ ಔಷಧಿಗಳನ್ನು ತಯಾರಿಸಿದ್ದರು.
ವೃಶ್ಚಿಕ (Scorpio): ನಿಮ್ಮ ಹಿಂದಿನ ಜೀವನದಲ್ಲಿ, ನೀವು ಕಲಾವಿದರಾಗಿದ್ದಿರಿ. ನೀವು ಸೃಜನಶೀಲತೆಯನ್ನು ಹೊಂದಿದ ವ್ಯಕ್ತಿಯಾಗಿದ್ದೀರಿ. ಅಲ್ಲದೇ ತುಂಬಾ ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವ ಕೂಡ ಇವರದ್ದಾಗಿತ್ತು ಎನ್ನಲಾಗುತ್ತೆ.
ಧನು (Sagitarius): ಧನು ರಾಶಿಯವರು ಹಿಂದಿನ ಜನ್ಮದಲ್ಲಿ ಬಹುಶಃ ವಿಜ್ಞಾನಿ ಮತ್ತು ಬಹಳ ನಿಗೂಢ ವ್ಯಕ್ತಿಯಾಗಿದ್ದಿರಿ. ಸಂಶೋಧನೆಗಳನ್ನು ಮಾಡುತ್ತಾ ಅಥವಾ ಏನೋ ಒಂದು ಹೊಸತನ್ನು ಹುಡುಕುತ್ತ ಕಳೆದು ಹೋಗಿರುವಂತಹ ವ್ಯಕ್ತಿತ್ವ ಇವರದ್ದು.
ಮಕರ (Capricorn): ಮಕರ ರಾಶಿಯವರು ಹಿಂದಿನ ಜನ್ಮದಲ್ಲಿ ಖಂಡಿತವಾಗಿಯೂ ಪ್ರಯಾಣಿಕರಾಗಿದ್ದಿರಿ. ಟ್ರಾವೆಲ್ ಮಾಡೋದು ಅಂದ್ರೆ ಈ ರಾಶಿಯರಿಗೆ ತುಂಬಾನೆ ಇಷ್ಟವಾಗುತ್ತಿತ್ತು. ಇವರು ಹೆಚ್ಚಾಗಿ ಟ್ರಾವೆಲ್ ಮಾಡಿ ಖುಷಿ ಪಡುತ್ತಿದ್ದರು.
ಕುಂಭ (Aquarius): ನಿಮ್ಮ ಹಿಂದಿನ ಜೀವನದಲ್ಲಿ, ನೀವು ಅತ್ಯಂತ ಮಹತ್ವಾಕಾಂಕ್ಷೆಯ ಮತ್ತು ನಿಮ್ಮ ಕೆಲಸವನ್ನು ಹೇಗೆ ಮಾಡಬೇಕೆಂದು ತಿಳಿದಿರುವ ಅತ್ಯಂತ ದೃಢನಿಶ್ಚಯವುಳ್ಳ ವ್ಯಕ್ತಿಯಾಗಿದ್ದಿರಿ. ಶ್ರದ್ಧೆಯಿಂದ ಕೆಲಸ ಮಾಡುವ ವ್ಯಕ್ತಿತ್ವ ಇವರದ್ದಾಗಿತ್ತು.
ಮೀನ ರಾಶಿ (Pisces): ಮೀನ ರಾಶಿಯವರು ತಮ್ಮ ಹಿಂದಿನ ಜನ್ಮಗಳಲ್ಲಿ ದಂಗೆಕೋರರಾಗಿದ್ದರು. ಜಗಳ, ದರೋಡೆ, ಪ್ರತಿಭಟನೆ ಮೊದಲಾದ ಕೆಲಸಗಳಲ್ಲಿ ಇವರು ಎಂದಿಗೂ ಮುಂದೆ ಇದ್ದರು.