ಮನೆಯಿಂದ ಬಡತನ ಓಡಿಸಲು ಏನು ಮಾಡಬೇಕು?; ಇಲ್ಲಿದೆ ಉಪಾಯ..!
ನಮ್ಮಿಂದಾಗುವ ಕೆಲವೊಂದು ತಪ್ಪುಗಳೇ ನಮ್ಮ ಹಣದ ಸಮಸ್ಯೆಗೆ ಹಾಗೂ ಬಡತನಕ್ಕೆ ಕಾರಣವಾಗುತ್ತದೆ. ಬಡತನ ಓಡಿಸಲು ಏನು ಮಾಡಬೇಕೆಂದು ಇಲ್ಲಿದೆ ಡೀಟೇಲ್ಸ್.
ನಿಮ್ಮ ಮನೆಯಲ್ಲಿನ ಬಡತನ ಓಡಿಸಲು ಬರಿಕಾಲಿನಲ್ಲಿ ಯಾವತ್ತಿಗೂ ಬಾತ್ ರೂಂಗೆ ಹೋಗಬೇಡಿ, ಸ್ನಾನ ಮಾಡುವಾಗ ಬರಿಕಾಲಿನಲ್ಲಿ ಇರಬೇಡಿ.
ನಿಮ್ಮ ಮನೆಯಿಂದ ಬಡತನ ದೂರ ಮಾಡಲು ಶುಕ್ರವಾರ ಮೊಸರು ಹಾಗೂ ಬೆಣ್ಣೆ ದಾನ ಮಾಡಬೇಕು. ಮಹಿಳೆಯರಿಗೆ ಗೌರವ ಕೊಡಬೇಕು ಎಂದಿದ್ದಾರೆ.
ಶುಕ್ರವಾರದ ದಿನ ಅರಿಶಿನ, ಬೆಲ್ಲ ಹಾಗೂ ಕಡ್ಲೆಹಿಟ್ಟನ್ನು ಯಾವುದಾದರೂ ಒಂದು ಮಣ್ಣಿನ ಗುಂಡಿಯಲ್ಲಿ ಹಾಕಿದರೆ ಬಡತನ ದೂರ ಆಗುತ್ತದೆ.
ಮನೆಯ ಉತ್ತರ ದಿಕ್ಕಿನಲ್ಲಿ ಬಾತ್ ರೂಂ ಇದ್ದರೆ ಬಡತನ ಬರುತ್ತದೆ. ಹೀಗಿದ್ದರೆ ಬಾತ್ ರೂಂನಲ್ಲಿ ಉಪ್ಪು ಇಡಿ ಇದರಿಂದ ನಿಮ್ಮ ಬಡತನ ಹೋಗುತ್ತದೆ.
ನಿಮ್ಮ ಬಡತನ ದೂರಮಾಡಬೇಕು ಎಂದಾದರೆ ಯಾವುದಾದರೂ ಗುರುವಿನ ಕೈಯಿಂದ ಬಹುಮಾನ ಸ್ವೀಕರಿಸಿದರೆ, ಬಡತನ ದೂರ ಆಗುತ್ತದೆ ಎನ್ನಲಾಗಿದೆ.
ನಿಮ್ಮ ಮನೆಯಲ್ಲಿ ಸಂಜೆ ಹೊತ್ತು ದೀಪ ಹಚ್ಚಿ ಪೂಜೆ ಮಾಡಿ ಬಡತನ ಬರಲ್ಲ, ವರ್ಷಕೊಮ್ಮೆ ತೀರ್ಥಯಾತ್ರೆ ಮಾಡಿ ಬಡವರ ಸೇವೆ ಮಾಡಬೇಕು.