- Home
- Astrology
- Festivals
- ಕಲಿಯುಗದಲ್ಲಿ ಏನಾಗಲಿದೆ ಎಂದು ಅಂದೇ ಭವಿಷ್ಯ ನುಡಿದಿದ್ದ ಶ್ರೀಕೃಷ್ಣ…. ಈಗ ಎಲ್ಲವೂ ನಿಜವಾಗುತ್ತಿದೆ!
ಕಲಿಯುಗದಲ್ಲಿ ಏನಾಗಲಿದೆ ಎಂದು ಅಂದೇ ಭವಿಷ್ಯ ನುಡಿದಿದ್ದ ಶ್ರೀಕೃಷ್ಣ…. ಈಗ ಎಲ್ಲವೂ ನಿಜವಾಗುತ್ತಿದೆ!
ಕಲಿಯುಗದ ಬಗ್ಗೆ ಅನೇಕ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಮಹಾಭಾರತದ ಅವಧಿಯಲ್ಲಿ ಶ್ರೀಕೃಷ್ಣನು ಪಾಂಡವರಿಗೆ ಕಲಿಯುಗದ ಬಗ್ಗೆ ಕೆಲವು ವಿಷಯಗಳನ್ನು ಹೇಳಿದ್ದನು, ಅಂದು ಹೇಳಿದ ಮಾತು ಇಂದು ನಿಜವಾಗುತ್ತಿದೆ.
- FB
- TW
- Linkdin
Follow Us
)
ಕಲಿಯುಗದ ಬಗ್ಗೆ ಶ್ರೀ ಕೃಷ್ಣನು ಪಾಂಡವರಿಗೆ ಹೇಳಿದ್ದೇನು?
ಕಲಿಯುಗವನ್ನು ಅನೇಕ ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಮತ್ತು ಕಲಿಯುಗದಲ್ಲಿ ಸಂಭವಿಸುವ ಘಟನೆಗಳ ಬಗ್ಗೆ ಅನೇಕ ಜನರು ಭವಿಷ್ಯ ನುಡಿದಿದ್ದಾರೆ. ಮಹಾಭಾರತದ(Mahabharat) ಅವಧಿಯಲ್ಲಿ ಕಲಿಯುಗಕ್ಕೆ ಸಂಬಂಧಿಸಿದ ಕೆಲವು ಸತ್ಯಗಳನ್ನು ಭಗವಾನ್ ಶ್ರೀ ಕೃಷ್ಣನು ಪಾಂಡವರಿಗೆ ಹೇಳಿದ್ದನು, ಅದು ಇಂದಿನ ಕಾಲದಲ್ಲಿ ನಿಜವಾಗಿವೆ. ಕಲಿಯುಗದ ಕಹಿ ಸತ್ಯಗಳು ಯಾವುವು ನೋಡೋಣ.
ಸ್ಮರಣಶಕ್ತಿ ಕಡಿಮೆಯಾಗುತ್ತದೆ
ಮಹಾಭಾರತದ ಕಾಲದಲ್ಲಿ, ಕಲಿಯುಗದಲ್ಲಿ ಮನುಷ್ಯರ ಸ್ಮರಣಶಕ್ತಿ ಕಡಿಮೆಯಾಗುತ್ತದೆ ಎಂದು ಶ್ರೀಕೃಷ್ಣ ಪರಮಾತ್ಮನು (Lord Shri Krishna) ಪಾಂಡವರಿಗೆ ಹೇಳಿದ್ದನು. ಅಂದರೆ, ಮನುಷ್ಯರ ಸ್ಮರಣಶಕ್ತಿ ಕ್ರಮೇಣ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಮನುಷ್ಯರಲ್ಲಿ ಧರ್ಮ, ಸತ್ಯ ಮತ್ತು ಸಹಿಷ್ಣುತೆ ಕೂಡ ಕಡಿಮೆಯಾಗುತ್ತದೆ. ಇಂದಿನ ಕಾಲದಲ್ಲಿ, ಈ ಭವಿಷ್ಯವಾಣಿ (prediction) ನಿಜವೆಂದು ಸಾಬೀತಾಗುತ್ತಿದೆ.
ವ್ಯಕ್ತಿಯನ್ನು ಅವನ ಗುಣಗಳಿಂದಲ್ಲ, ಹಣದಿಂದ ಗುರುತಿಸುತ್ತಾರೆ
ಸಾಮಾನ್ಯವಾಗಿ ಒಳ್ಳೆಯ ವ್ಯಕ್ತಿಯನ್ನು ಅವನ ನಡವಳಿಕೆ ಮತ್ತು ಗುಣಗಳಿಂದ ಗುರುತಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಲಿಯುಗದಲ್ಲಿ ಇದು ಸಂಭವಿಸುವುದಿಲ್ಲ. ಕಲಿಯುಗದಲ್ಲಿ ಒಬ್ಬ ವ್ಯಕ್ತಿಯನ್ನು ಅವನ ಗುಣಗಳಿಂದಲ್ಲ(character) ಬದಲಾಗಿ ಅವನ ಹಣದಿಂದ ಗುರುತಿಸಲಾಗುತ್ತದೆ ಎಂದು ಶ್ರೀಕೃಷ್ಣ ಸ್ವತಃ ಹೇಳಿದ್ದಾನೆ. ಅಂದರೆ, ಒಬ್ಬ ವ್ಯಕ್ತಿಯು ಶ್ರೀಮಂತನಾಗಿದ್ದಷ್ಟೂ, ಅವನು ಹೆಚ್ಚು ಸದ್ಗುಣಶೀಲನೆಂದು ಪರಿಗಣಿಸಲಾಗುತ್ತದೆ.
ಜ್ಞಾನವಿಲ್ಲದಿದ್ದರೂ ಜನರು ವಿದ್ವಾಂಸರಾಗುತ್ತಾರೆ
ಕಲಿಯುಗದ ಆಗಮನಕ್ಕೂ ಮುನ್ನ ಶ್ರೀಕೃಷ್ಣನು, ಕಲಿಯುಗದಲ್ಲಿ ಮಹಾನ್ ವಿದ್ವಾಂಸರು ಮತ್ತು ಬುದ್ಧಿಜೀವಿಗಳು ಎಂದು ಕರೆಯಲ್ಪಡುವವರು ಜನರ ಮೇಲೆ ಪ್ರಾಬಲ್ಯ ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದನು. ಆದರೆ ಈ ಜನರು ಜ್ಞಾನ ಮತ್ತು ಧರ್ಮದ ಮೇಲೆ ಕೇಂದ್ರೀಕರಿಸುವುದಿಲ್ಲ, ಬದಲಾಗಿ ಯಾರು ಸಾಯುತ್ತಾರೆ? ಯಾರ ಆಸ್ತಿಯನ್ನು ಹೇಗೆ ಸಂಪಾದಿಸುವುದು ? ಎಂಬುದರ ಮೇಲೆ ಮಾತ್ರ ಗಮನಹರಿಸುತ್ತಾರೆ.
ಮನುಷ್ಯ ದುಃಖದಲ್ಲಿ ಒಂಟಿಯಾಗಿರುತ್ತಾನೆ
ಕಲಿಯುಗದಲ್ಲಿ, ಒಬ್ಬ ವ್ಯಕ್ತಿಯು ದುಃಖದಲ್ಲಿ ಒಂಟಿಯಾಗಿರುತ್ತಾನೆ (alone in sorrow). ಆದರೆ ಸಂತೋಷದ ಸಮಯದಲ್ಲಿ ಅಂದರೆ ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ, ಸುತ್ತಲೂ ಸಾಕಷ್ಟು ಜನಸಂದಣಿ ಇರುತ್ತದೆ. ಆದರೆ ಕಷ್ಟ ಮತ್ತು ದುಃಖದ ಸಮಯದಲ್ಲಿ, ಒಂಟಿಯಾಗಿ ಜೀವನ ಕಳೆಯಬೇಕಾಗುತ್ತದೆ ಎಂದಿದ್ದರು. ಕೃಷ್ಣ ಹೇಳಿದ ಪ್ರತಿ ಮಾತುಗಳು ಇಂದು ನಿಜವಾಗಿದೆ.