MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಈ ಕನಸು ಬಿದ್ರೆ ಎಚ್ಚೆತ್ತುಕೊಳ್ಳಿ, ಮುಂದೆ ಏನೋ ಕೆಟ್ಟದ್ದು ನಡೆಯುತ್ತೆ!

ಈ ಕನಸು ಬಿದ್ರೆ ಎಚ್ಚೆತ್ತುಕೊಳ್ಳಿ, ಮುಂದೆ ಏನೋ ಕೆಟ್ಟದ್ದು ನಡೆಯುತ್ತೆ!

ಕನಸುಗಳೇ ಇಲ್ಲದ ಜನರು ಇರಲು ಸಾಧ್ಯವೇ ಇಲ್ಲ. ಒಂದಲ್ಲ ಒಂದು ರೀತಿಯ ಕನಸನ್ನು ಪ್ರತಿಯೊಬ್ಬರೂ ಕಾಣುತ್ತಾರೆ. ಸ್ವಪ್ನಗ್ರಂಥದ ಪ್ರಕಾರ, ಕನಸುಗಳು ವ್ಯಕ್ತಿಯ ಜೀವನದಲ್ಲಿ ಮುಂಚಿತವಾಗಿ ಬರಲಿರುವ ಘಟನೆಗಳ ಸೂಚನೆಯನ್ನು ನೀಡುತ್ತವೆ. ಅಂತಹ ಕೆಲವು ಕನಸುಗಳನ್ನು ಕನಸಿನ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ, ಅವುಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅವುಗಳ ಬಗ್ಗೆ ತಿಳಿಯೋಣ. 

2 Min read
Suvarna News
Published : Jul 30 2022, 05:04 PM IST
Share this Photo Gallery
  • FB
  • TW
  • Linkdin
  • Whatsapp
19

ಸ್ವಪ್ನಗ್ರಂಥದ ಪ್ರಕಾರ, ಪ್ರತಿಯೊಂದು ಕನಸು ಒಂದಲ್ಲ ಒಂದು ವಿಷಯದೊಂದಿಗೆ ಸಂಬಂಧ ಹೊಂದಿರಬೇಕು. ಇದು ಮುಂಬರುವ ಶುಭ ಅಥವಾ ಅಶುಭ ಘಟನೆಯ ಸಂಕೇತವೂ ಆಗಿರಬಹುದು. ಕೆಲವೊಮ್ಮೆ ಕನಸುಗಳ ಮೂಲಕ ಒಬ್ಬ ವ್ಯಕ್ತಿಯು ಮುಂದೆ ಏನು ನಡೆಯಬಹುದು ಅನ್ನೋದನ್ನು ತಿಳಿಯುತ್ತಾನೆ, ತನಗೆ ಬಿದ್ದ ಕನಸಿನ ಅರ್ಥ ಏನಿರಬಹುದು ಅನ್ನೋದನ್ನು ಸಹ ತಿಳಿಯಲು ಪ್ರಯತ್ನಿಸುತ್ತಾರೆ.  

29

ಸ್ವಪ್ನಗ್ರಂಥದಲ್ಲಿ, ಕನಸುಗಳ ಒಳ್ಳೆಯ ಮತ್ತು ಕೆಟ್ಟ ಅರ್ಥಗಳನ್ನು ವಿವರವಾಗಿ ತಿಳಿಸಲಾಗಿದೆ. ಅಂತಹ ಕೆಲವು ಕನಸುಗಳ ಬಗ್ಗೆ ತಿಳಿದುಕೊಳ್ಳಿ. ಇಲ್ಲಿ ಕೆಲವೊಂದು ಕನಸುಗಳ ಬಗ್ಗೆ ತಿಳಿಸಲಾಗಿವೆ. ಇವು ಮುಂಬರುವ ದಿನಗಳಲ್ಲಿ ಜೀವನದಲ್ಲಿ ಸಾಕಷ್ಟು ಬಿಕ್ಕಟ್ಟು ಉಂಟು ಮಾಡಲಿದೆ. ಅವುಗಳ ಬಗ್ಗೆ ತಿಳಿಯೋಣ.

39

ಕನಸಿನಲ್ಲಿ ಗುಲಾಬಿಯನ್ನು ನೋಡುವುದು

ಒಬ್ಬ ವ್ಯಕ್ತಿಯು ಕನಸಿನಲ್ಲಿ ಗುಲಾಬಿ ಹೂವು ಅರಳುತ್ತಿರುವುದು ಕಂಡುಬಂದರೆ ಅಥವಾ ನೀವು ಸ್ವತಃ ಗುಲಾಬಿ ಹೂವನ್ನು ತಿನ್ನುವುದನ್ನು ನೋಡಿದರೆ, ಆಗ ಜಾಗರೂಕರಾಗಿರಬೇಕು. ಏಕೆಂದರೆ ಭವಿಷ್ಯದಲ್ಲಿ ನೀವು ಗಂಭೀರ ಕಾಯಿಲೆಗೆ ಗುರಿಯಾಗುವ ಸಾಧ್ಯತೆ ಇದೆ.

49

ಕನಸಿನಲ್ಲಿ ನಿಮ್ಮನ್ನು ನೀವು ವಯಸ್ಸಾದವರಂತೆ ಅಥವಾ ಮಗುವಿನಂತೆ ಕಂಡರೆ

ಸ್ವಪ್ನಗ್ರಂಥದ ಪ್ರಕಾರ, ಕನಸಿನಲ್ಲಿ ನೀವು ನಿಮ್ಮನ್ನು ವಯಸ್ಸಾದವರಂತೆ ಅಥವಾ ಮಗುವಿನಂತೆ ಕಂಡರೆ, ಅದರರ್ಥ ಜೀವನದಲ್ಲಿ ಅನೇಕ ಸಮಸ್ಯೆಗಳು ಒಟ್ಟಿಗೆ ಬರಬಹುದು ಎಂದು, ಆದುದರಿಂದ ಜಾಗರೂಕರಾಗಿರೋದು ತುಂಬಾನೆ ಮುಖ್ಯ.

59

ಕನಸಿನಲ್ಲಿ ಧಾನ್ಯದಲ್ಲಿ ಮಣ್ಣನ್ನು ಬೆರೆಸುವುದು

ಕನಸಿನಲ್ಲಿ ನೀವು ಧಾನ್ಯದಲ್ಲಿ ಮಣ್ಣನ್ನು ಬೆರೆಸುತ್ತಿರುವುದನ್ನು ಕಂಡರೆ, ಜೀವನದಲ್ಲಿ ಬಿಕ್ಕಟ್ಟು ಉಂಟಾಗಲಿದೆ ಎಂದು ತಿಳಿಯಿರಿ. ಆದ್ದರಿಂದ ಎಲ್ಲಾ ರೀತಿಯ ಬಿಕ್ಕಟ್ಟುಗಳಿಗೆ ಮುಂಚಿತವಾಗಿ ಸಿದ್ಧರಾಗಿರಿ. ಯಾವುದೇ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡಿ.

69

ಮುಳ್ಳಿನ ಮರದಲ್ಲಿ ನಿದ್ರೆ ಮಾಡುವಂತೆ ಕನಸು ಕಂಡರೆ

ಕನಸಿನಲ್ಲಿ, ಮುಳ್ಳಿನ ಮರದಲ್ಲಿ ಮಲಗುವುದನ್ನು ನೀವು ನೋಡಿದರೆ, ಆ ವ್ಯಕ್ತಿಯು ಅನೇಕ ರೀತಿಯ ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಗೌರವಕ್ಕೆ ಧಕ್ಕೆ ಉಂಟಾಗುವಂತಹ ಹಲವು ಘಟನೆಗಳು ಸಹ ನಡೆಯಬಹುದು ಎಂದು ತಿಳಿದು ಬಂದಿದೆ. 

79

ಕನಸಿನಲ್ಲಿ ಮಾಂಸ ತಿನ್ನೋದನ್ನು ನೋಡಿದ್ರೆ

ಕನಸಿನಲ್ಲಿ ನೀವು ಮಾಂಸ ತಿನ್ನುವುದನ್ನು ಅಥವಾ ಮಾಂಸ ಮಾರಾಟ ಮಾಡುವುದನ್ನು ನೋಡಿದರೆ, ವ್ಯವಹಾರದಲ್ಲಿ ದೊಡ್ಡ ನಷ್ಟ ಉಂಟಾಗುತ್ತದೆ ಎಂದರ್ಥ. ಆದುದರಿಂದ ಯಾವತ್ತೂ ಕನಸಿನಲ್ಲಿ ಮಾಂಸಾಹಾರ ಕಂಡು ಬಂದರೆ ಖುಷಿ ಪಡಬೇಡಿ. ಎಚ್ಚರಿಕೆ ವಹಿಸಿ.

89
horse

horse

ಕನಸಿನಲ್ಲಿ ಕುದುರೆಯಿಂದ ಬೀಳುವುದನ್ನು ನೋಡಿದ್ರೆ
ಕನಸಿನಲ್ಲಿ ಕುದುರೆಯಿಂದ ಬೀಳುವುದನ್ನು ನೀವು ನೋಡಿದರೆ, ನೀವು ಕೆಲವು ಕೆಲಸಗಳಲ್ಲಿ ದೊಡ್ಡ ನಷ್ಟವನ್ನು ಅನುಭವಿಸುತ್ತೀರಿ ಎಂದರ್ಥ. ಆದ್ದರಿಂದ ಯಾವುದೇ ಕೆಲಸವನ್ನು ಚಿಂತನಶೀಲವಾಗಿ ಮಾಡಿ. ಹಾಗಿದ್ರೆ ಮಾತ್ರ ಕೆಲಸದಲ್ಲಿ ಯಶಸ್ಸು ಸಾಧ್ಯ. 

99

ಕನಸಿನಲ್ಲಿ ನಗುವನ್ನು ನೋಡುವುದು
ನೀವು ಜೋರಾಗಿ ನಗುವಂತೆ ಕಂಡು ಬಂದರೆ, ಯಾರಾದರೂ ದೊಡ್ಡ ದುಃಖವನ್ನು (sorrow) ಎದುರಿಸಬೇಕಾಗುತ್ತದೆ ಎಂದರ್ಥ. ಆದುದರಿಂದ ಇಂತಹ ಕನಸುಗಳು ಕಂಡು ಬಂದರೆ ಹೆಚ್ಚು ಜಾಗೃತರಾಗಿರೋದು ಮುಖ್ಯ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved