ಚಾಣಕ್ಯ ನೀತಿ: ಮದ್ವೆ ಆಗೋದಾದ್ರೆ ಇಂಥ ಹುಡುಗೀರನ್ನೇ ಆಗಿ… ಜೀವನ ಚೆನ್ನಾಗಿರುತ್ತೆ
ನೀವು ಬೆಸ್ಟ್ ಹೆಂಡತಿಯನ್ನು ಹೊಂದಿದ್ದರೆ, ದೇವರಿಗೆ ಧನ್ಯವಾದಗಳನ್ನು ಹೇಳಿ. ಏಕೆಂದರೆ ಅಂತಹ ಹೆಂಡತಿಯನ್ನು ಪಡೆದ ನೀವು ತುಂಬಾ ಅದೃಷ್ಟವಂತರು. ಆದರೆ ಹೆಂಡತಿ ಬೆಸ್ಟ್ ಎಂದು ಅನಿಸಿಕೊಳ್ಳುವಂತಹ ಗುಣಗಳು ಯಾವುವು? ಇದನ್ನು ಚಾಣಕ್ಯ ನೀತಿಯಲ್ಲಿ ಉಲ್ಲೇಖಿಸಲಾಗಿದೆ, ಆ ಬಗ್ಗೆ ತಿಳಿಯೋಣ ಬನ್ನಿ.
ಸಂತೋಷದ ಜೀವನಕ್ಕಾಗಿ ಉತ್ತಮ ಜೀವನ ಸಂಗಾತಿಯನ್ನು (best life partner) ಹೊಂದಿರೋದು ಬಹಳ ಮುಖ್ಯ ಎಂಬುದರಲ್ಲಿ ಸಂದೇಹವಿಲ್ಲ. ಮದುವೆಗೆ ಮೊದಲು, ವ್ಯಕ್ತಿಯನ್ನು ಎಲ್ಲಾ ರೀತಿಯಲ್ಲಿ ಪರೀಕ್ಷಿಸಲು ಇದು ಕಾರಣ. ಆದರೆ ಹೆಚ್ಚಿನ ಮದುವೆಗಳು ಹುಡುಗನ ಹಣ ಮತ್ತು ಹುಡುಗಿಯ ಸೌಂದರ್ಯದ ಮೇಲೆ ನಿರ್ಧರಿತವಾಗುತ್ತೆ. ಅದರ ಫಲಿತಾಂಶ ಮಾತ್ರ ವಿಚ್ಛೇದನ ಮತ್ತು ವಿವಾಹೇತರ ಸಂಬಂಧದ ಪ್ರಕರಣಗಳಲ್ಲಿ ಕೊನೆಯಾಗುತ್ತವೆ.
ಮಹಿಳೆ ತನ್ನ ಗುಣಗಳಿಂದ ಯಾವುದೇ ಮನೆಯನ್ನು ಸ್ವರ್ಗ ಅಥವಾ ನರಕವನ್ನಾಗಿ ಮಾಡಬಹುದು ಎಂದು ಹೇಳಲಾಗುತ್ತದೆ. ನೀವು ಇದರ ಬಗ್ಗೆ ಆಳವಾಗಿ ಯೋಚಿಸಿದರೆ, ಅದರಲ್ಲಿ ಸಾಕಷ್ಟು ಸತ್ಯವಿದೆ. ಚಾಣಕ್ಯ ನೀತಿಯು ಮಹಿಳೆಯ ಕೆಲವೊಂದು ಗುಣಗಳನ್ನು ತಿಳಿಸಿದ್ದಾರೆ, ಅದು ಪುರುಷನ ಅದೃಷ್ಟವನ್ನು ಜಾಗೃತಗೊಳಿಸುತ್ತದೆ. ಆಚಾರ್ಯ ಚಾಣಕ್ಯನು ಹೇಳಿದ ಉತ್ತಮ ಹೆಂಡತಿಯ (best wife) ಗುಣಗಳು ಯಾವುವು ಅನ್ನೋದನ್ನು ತಿಳಿಯೋಣ.
ಶಾಂತವಾಗಿರುವವರು
ಮನಸ್ಸಿನಲ್ಲಿ ಶಾಂತವಾಗಿರುವ ಮಹಿಳೆ ಯಾವುದೇ ಸಂದರ್ಭದಲ್ಲೂ ಕೋಪಗೊಳ್ಳುವುದಿಲ್ಲ ಎಂದು ಚಾಣಕ್ಯ ನೀತಿ (Chanakya Niti) ಹೇಳುತ್ತದೆ. ಅವಳು ಸ್ಥಳ ಮತ್ತು ಸಮಯಕ್ಕೆ ಅನುಗುಣವಾಗಿ ಚಿಂತನಶೀಲವಾಗಿ ವರ್ತಿಸುತ್ತಾಳೆ. ಅಂತಹ ಮಹಿಳೆ ತನ್ನ ಗಂಡನ ಜೀವನವನ್ನು ಸುಲಭಗೊಳಿಸುತ್ತಾಳೆ.
ತಾಳ್ಮೆಯಿಂದಿರುವ ಮಹಿಳೆ
ಅವಸರದ ಕೆಲಸವು ಬೇಗ ನಾಶವಾಗುತ್ತೆ ಮತ್ತು ತೊಂದರೆಯ ಸಾಧ್ಯತೆಯೂ ಹೆಚ್ಚು. ಆದರೆ ತಾಳ್ಮೆಯಿಂದ (patience) ಕೆಲಸ ಮಾಡುವ ವ್ಯಕ್ತಿಯು ಕೆಟ್ಟ ಸಂದರ್ಭಗಳಲ್ಲಿಯೂ ಅತ್ಯುನ್ನತ ಮಟ್ಟದ ಕೆಲಸವನ್ನು ಮಾಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಚಾಣಕ್ಯನು ತಾಳ್ಮೆ ಹೊಂದಿರುವ ಮಹಿಳೆಯನ್ನು ಮದುವೆಯಾಗಲು ಸಲಹೆ ನೀಡುತ್ತಾನೆ. ಏಕೆಂದರೆ ಪುರುಷನ ಕುಟುಂಬವನ್ನು ನಡೆಸುವ ಪ್ರಮುಖ ಜವಾಬ್ದಾರಿ ಹೆಂಡತಿಯ ಮೇಲಿದೆ.
ಎಲ್ಲರನ್ನೂ ಗೌರವಿಸುವವರು
ಮಹಿಳೆಗೆ ಸರಿಯಾದ ಮೌಲ್ಯಗಳಿದ್ದರೆ, ಅವಳು ಎಂದಿಗೂ ಮನೆಯಲ್ಲಿ ಸಂಘರ್ಷಕ್ಕೆ ಅವಕಾಶ ನೀಡುವುದಿಲ್ಲ. ದೊಡ್ಡವರಿಂದ ಚಿಕ್ಕವರವರೆಗೆ ಎಲ್ಲರನ್ನೂ ಸಂತೋಷವಾಗಿಡುವುದು ಹೇಗೆಂದು ಅವರಿಗೆ ತಿಳಿದಿರುತ್ತೆ. ಅಷ್ಟೇ ಅಲ್ಲ, ಕೋಪದಲ್ಲಿಯೂ ಅವಳು ಯಾರಿಗೂ ಅಗೌರವ ತೋರಿಸುವುದಿಲ್ಲ. ಅಂತಹ ಮಹಿಳೆಯನ್ನು ಮದುವೆಯಾಗುವುದು ಪುರುಷನ ಜೀವನವನ್ನು ಸುಧಾರಿಸುತ್ತೆ ಎನ್ನಲಾಗುತ್ತೆ.
ಧಾರ್ಮಿಕರಾಗಿರುವ ಮಹಿಳೆ
ಧಾರ್ಮಿಕ ಮಹಿಳೆಗೆ ತನ್ನ ಗಂಡನ ಹಣೆ ಬರಹವನ್ನು ತಿರುಗಿಸುವ ಸಾಮರ್ಥ್ಯವಿದೆ. ಅವಳು ಯಾವಾಗಲೂ ತನ್ನ ಕುಟುಂಬವನ್ನು ಕೆಟ್ಟದ್ದರಿಂದ ರಕ್ಷಿಸುತ್ತಾಳೆ, ಈ ಕಾರಣದಿಂದಾಗಿ ದೇವರ ಕೃಪೆ ಯಾವಾಗಲೂ ಮನೆಯ ಜನರ ಮೇಲೆ ಇರುತ್ತದೆ. ಆದ್ದರಿಂದ, ಚಾಣಕ್ಯನು ಯಾವಾಗಲೂ ದೇವರನ್ನು ನಂಬುವ ಮತ್ತು ಧರ್ಮವನ್ನು ಅನುಸರಿಸುವ ಮಹಿಳೆಯನ್ನು ಮದುವೆಯಾಗಲು ಸಲಹೆ ನೀಡುತ್ತಾನೆ.