ಇದು ಮನೆಗೆ ಶ್ರೀಮಂತಿಕೆ ಬರುವ ಸಂಕೇತ; ಲಕ್ಷ್ಮಿಯ ಆಗಮನದ ಸೂಚನೆ ಹೇಗಿರುತ್ತೆ?
ನಮ್ಮ ಮನೆಗೆ ಶ್ರೀಮಂತಿಕೆ ಬರುವ ಮುನ್ನ ದೇವರು ಕೆಲವು ಸೂಚನೆಗಳನ್ನು ನೀಡುತ್ತಾನೆ. ಈ ಲಕ್ಷಣಗಳು ಕಂಡು ಬಂದರೆ, ಲಕ್ಷ್ಮಿಯು ನಿಮಗೆ ಒಲಿಯಲಿದ್ದಾಳೆ.
ನಿಮ್ಮ ಕನಸಿನಲ್ಲಿ ಗೂಬೆ, ಪೊರಕೆ, ಆನೆ ಮತ್ತು ಗುಲಾಬಿ ಹೂವು ಕಂಡರೆ ಅದು ಸಾಮಾನ್ಯ ಕನಸಲ್ಲ. ಇದು ಲಕ್ಷ್ಮಿ ದೇವಿ ಆಗಮನದ ಸಂಕೇತ.
ಹಲ್ಲಿಗಳನ್ನು ನೋಡುವುದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗಿದೆ. ಇದು ಲಕ್ಷ್ಮಿಯ ಆಗಮನದ ಸಂಕೇತ ಎಂದು ಜ್ಯೋತಿಷ್ಯ ಹೇಳುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಪೊರಕೆಯನ್ನು ನೋಡುವುದು ಕೂಡ ಶುಭ ಸಂಕೇತ. ನಿಮ್ಮ ಮನೆಯ ಸುತ್ತ ಯಾರಾದರೂ ಕಸ ಗುಡಿಸುವುದನ್ನು ನೀವು ನೋಡಿದರೆ ಒಳ್ಳೆಯದು.
ಜ್ಯೋತಿಷ್ಯದ ಪ್ರಕಾರ ಮನೆಯಲ್ಲಿ ಹಕ್ಕಿಯು ಗೂಡು ಮಾಡುವುದು ಲಕ್ಷ್ಮಿಯ ಆಗಮನದ ಸಂಕೇತ. ಇದರಿಂದ ಬೇಗನೆ ನೀವು ಶ್ರೀಮಂತರಾಗುವಿರಿ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂಗೈಯಲ್ಲಿ ತುರಿಕೆ ಶುರುವಾದರೆ, ನಿಮ್ಮ ಕೈಗೆ ಶೀಘ್ರದಲ್ಲೇ ಹಣ ಬರಲಿದೆ ಎಂದು ಹೇಳಲಾಗುತ್ತದೆ.