ನವೆಂಬರ್‌ನಲ್ಲಿ ಶುಕ್ರ-ಶನಿಯಿಂದ ಈ ರಾಶಿಯವರಿಗೆ ರಾಜಯೋಗ,ಹಣದ ಹೊಳೆ
2023 ರಲ್ಲಿ ನವೆಂಬರ್ 3 ರಂದು ಬೆಳಗ್ಗೆ 5.13 ಕ್ಕೆ ಶುಕ್ರನು ಕನ್ಯಾರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ನವೆಂಬರ್ 30 ರೊಳಗೆ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ.
ನವೆಂಬರ್‌ನಲ್ಲಿ ಶುಕ್ರ ಸಂಕ್ರಮಣದೊಂದಿಗೆ ರಾಹು-ಕೇತು ಸಂಕ್ರಮಿಸುತ್ತವೆ. ಶನಿಯು ಸಹ ನೇರವಾಗಿ ತಿರಿಗುತ್ತಾನೆ. ಇದು ರಾಶಿಚಕ್ರದ ಮೇಲೆ ಪ್ರಭಾವ ಬೀರುತ್ತವೆ. ಇನ್ನು ಈ ಬದಲಾವಣೆಗಳು 4 ರಾಶಿಚಕ್ರ ಚಿಹ್ನೆಗಳಿಗೆ ಬಹಳ ಮಂಗಳಕರವೆಂದು ಹೇಳಲಾಗಿದೆ.
ಮೇಷ ರಾಶಿಯವರಿಗೆ ನವೆಂಬರ್ ತಿಂಗಳು ತುಂಬಾ ಅದೃಷ್ಟವಾಗಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಆದಾಯ ಮೂಲ ಹೆಚ್ಚಾಗಲಿದೆ. ದೊಡ್ಡ ಧನಾತ್ಮಕ ಬದಲಾವಣೆ ಇರಬಹುದು.
ಗ್ರಹಗಳ ಬದಲಾವಣೆಯಿಂದ ವೃಷಭ ರಾಶಿಯವರ ಸಂಪತ್ತು ವೃದ್ದಿಯಾಗಲಿದೆ.ಅಡೆತಡೆಗಳು ನಿವಾರಣೆಯಾಗುತ್ತೆ. ಗೌರವ ಹೆಚ್ಚಾಗುತ್ತದೆ.ಆದಾಯ ಹೆಚ್ಚಲಿದೆ.
ಗ್ರಹಗಳ ಬದಲಾವಣೆ ಕನ್ಯಾ ರಾಶಿಯವರಿಗೆ ತುಂಬಾ ಶುಭಕರವಾಗಿದೆ. ವಿದೇಶ ಪ್ರಯಾಣ ಮಾಡಬಹುದು. ಬಾಕಿ ಹಣ ವಾಪಸ್ ಬರಲಿದೆ.ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ.
ತುಲಾ ರಾಶಿಯವರು ಶುಕ್ರ ಸಂಕ್ರಮಣದಿಂದ ಭೂಮಿ ಅಥವಾ ವಾಹನ ಖರೀದಿಸಬಹುದು.ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ.ಅದೃಷ್ಟವು ನಿಮಗೆ ಅನುಕೂಲಕರವಾಗಿರುತ್ತದೆ.