ಮೃತ್ಯು ಭಯವನ್ನು ದೂರ ಮಾಡಲು ಶಿವನ ಈ ಮಂತ್ರಗಳನ್ನು ಪಠಿಸಿ
ಸಾವಿನ ಭಯದಿಂದ ಮುಕ್ತಿ ಪಡೆಯಲು ಶಿವರಾತ್ರಿ ದಿನ ಈ ನಾಲ್ಕು ಶಿವ ಮಂತ್ರವನ್ನು ಸ್ತುತಿಸಿ. ಇದರಿಂದ ಶಿವನ ಕೃಪೆಯೂ ನಿಮ್ಮ ಮೇಲಿರುತ್ತೆ, ಜೊತೆಗೆ ಸಾವಿನ ಭಯವೂ ದೂರವಾಗುತ್ತೆ.

ಸಾವಿನ ಭಯ (fear of Death) ಪ್ರತಿಯೊಬ್ಬರನ್ನೂ ಸಹ ಕಾಡುತ್ತೆ. ಆ ಭಯದಿಂದ ಹೊರ ಬಂದರೆ ಮಾತ್ರ ಜೀವನವನ್ನು ಖುಷಿಯಾಗಿ ಕಳೆಯೋದಕ್ಕೆ ಸಾಧ್ಯ. ಆದರೆ ಈ ಸಾವಿನ ಭಯದಿಂದ ಹೊರ ಬರೋದು ಹೇಗೆ? ನೀವು ಆ ಚಿಂತೆಯಲ್ಲಿದ್ದರೆ, ನಿಮಗಾಗಿ ಒಂದಷ್ಟು ಮಂತ್ರಗಳ ಕುರಿತು ಮಾಹಿತಿ ಇಲ್ಲಿದೆ.
ಸಾವಿನ ಭಯದಿಂದ ಒಬ್ಬರನ್ನು ಮುಕ್ತಗೊಳಿಸುವ ನಾಲ್ಕು ಮಂತ್ರಗಳಿವೆ. ಇವೆಲ್ಲವೂ ಶಿವನ ಮಂತ್ರವಾಗಿದ್ದು, ಇವುಗಳ ಪಠಣದಿಂದ ಸಾವಿನ ಭಯ ದೂರವಾಗುವುದು. ಇವುಗಳನ್ನು ಶಿವರಾತ್ರಿಯಂದು ನೀವು ಭಕ್ತಿಯಿಂದ ಪಠಿಸಿದರೆ, ಎಲ್ಲಾ ಭಯಗಳು ದೂರವಾಗಿ, ನೀವು ನೆಮ್ಮದಿಯಾಗಿರಲು ಸಾಧ್ಯವಾಗುತ್ತೆ.
ಇದೇ ಫೆಬ್ರುವರಿ 26 ರಂದು ದೇಶಾದ್ಯಂತ ಮಹಾಶಿವರಾತ್ರಿಯನ್ನು (Maha Shivaratri) ಆಚರಿಸಲಾಗುತ್ತದೆ. ಈ ದಿನ ಶಿವನ ನಾಮ ಸ್ಮರಣೆಯನ್ನು ನಿರಂತರ ಮಾಡೋದರಿಂದ ಶಿವನ ಆಶೀರ್ವಾದ ನಿಮಗೆ ಸಿಗುತ್ತೆ. ಅದಲ್ಲದೇ ನಿಮಗಿರುವ ಮೃತ್ಯು ಭಯವನ್ನು ನಿವಾರಣೆ ಮಾಡಲು ಒಂದಷ್ಟು ಮಂತ್ರಗಳನ್ನು ಪಠಿಸಿ. ಆ ಮಂತ್ರಗಳು ಯಾವುವು ಅನ್ನೋದು ಇಲ್ಲಿದೆ ನೋಡಿ.
ಹ್ರೀಂ ಈಶನಾಯ ನಮಃ
ಮಹಾಶಿವರಾತ್ರಿಯ ಮೊದಲ ಪೂಜೆಯ ಸಮಯವು ಫೆಬ್ರವರಿ 26 ರಂದು ಸಂಜೆ 6:19 ರಿಂದ 9:26 ರವರೆಗೆ ಇರುತ್ತದೆ. ಈ ಸಮಯದಲ್ಲಿ ಶಿವನ 'ಹ್ರೀಂ ಈಶನಾಯ ನಮಃ' ಮಂತ್ರವನ್ನು ಪಠಿಸಿ.
ಹ್ರೀಂ ಅಘೋರಾಯ ನಮಃ
ಮಹಾಶಿವರಾತ್ರಿಯ ಎರಡನೇ ಹಂತದಲ್ಲಿ ಪೂಜೆಯ ಸಮಯವು ಫೆಬ್ರವರಿ 26 ರಂದು ರಾತ್ರಿ 9:26 ರಿಂದ 12:34 ರವರೆಗೆ ಇರುತ್ತದೆ. ಈ ಸಮಯದಲ್ಲಿ ಶಿವನ 'ಹ್ರೀಂ ಅಘೋರಾಯ ನಮಃ' ಮಂತ್ರವನ್ನು ಪಠಿಸಿ.
ಹ್ರೀಂ ವಾಮದೇವಾಯ ನಮಃ
ಮಹಾಶಿವರಾತ್ರಿಯ ಮೂರನೇ ಹಂತದ ಪೂಜಾ ಸಮಯವು ಫೆಬ್ರವರಿ 26 ರಂದು ಬೆಳಿಗ್ಗೆ 12:34 ರಿಂದ 3:41 ರವರೆಗೆ ಇರುತ್ತದೆ. ಈ ಸಮಯದಲ್ಲಿ ಶಿವನ 'ಹ್ರೀಂ ವಾಮದೇವಾಯ ನಮಃ' ಮಂತ್ರವನ್ನು ಪಠಿಸಿ.
ಹ್ರೀಂ ಸದ್ಯೋಜಾತಾಯ ನಮಃ
ಮಹಾಶಿವರಾತ್ರಿಯ ನಾಲ್ಕನೇ ಹಂತದ ಪೂಜೆಯ ಸಮಯವು ಫೆಬ್ರವರಿ 26 ರಂದು ಮುಂಜಾನೆ 3:41 ರಿಂದ ಫೆಬ್ರವರಿ 27 ರಂದು ಬೆಳಿಗ್ಗೆ 6:48 ರವರೆಗೆ ಇರುತ್ತದೆ. ಈ ಸಮಯದಲ್ಲಿ ಶಿವನ "ಹ್ರೀಂ ಸದ್ಯೋಜಾತಾಯ ನಮಃ" ಮಂತ್ರವನ್ನು ಪಠಿಸಿ.